Kannada NewsKarnataka News

ಇನ್ನು ಕೆಲವೇ ಕ್ಷಣದಲ್ಲಿ ನೂತನ ಸಚಿವರ ಪ್ರಮಾಣ ವಚನ

ಇನ್ನು ಕೆಲವೇ ಕ್ಷಣದಲ್ಲಿ ನೂತನ ಸಚಿವರ ಪ್ರಮಾಣ ವಚನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ರಾಜ್ಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದ ನೂತನ ಸಚಿವರು ಇನ್ನು ಕೆಲವೇ ಹೊತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮಧ್ಯರಾತ್ರಿ ನೂತನ ಸಚಿವರ ಪಟ್ಟಿ ಅಂತಿಮವಾಗಿದೆ. ಹಲವು ಹಿರಿಯರ ಹೆಸರು ಪಟ್ಟಿಯಿಂದ ತಪ್ಪಿದ್ದು, ಅಚ್ಛರಿಯ ಹೆಸರುಗಳು ಸೇರಿಕೊಂಡಿವೆ.

Home add -Advt

ಇದನ್ನೂ ಓದಿ – ಇದೇನಿದು, ಮಧ್ಯರಾತ್ರಿ ಹೊರಬಿದ್ದ ಅಚ್ಛರಿಯ ಪಟ್ಟಿ?

ಪ್ರಗತಿವಾಹಿನಿ ರಾತ್ರಿ ಪ್ರಕಟಿಸಿದ್ದ ಪಟ್ಟಿಯಲ್ಲಿರುವವರ ಹೆಸರೇ ಅಂತಿಮವಾಗಿದೆ.

ಅಚ್ಛರಿಯೆಂದರೆ ಬೆಳಗಾವಿ ಜಿಲ್ಲೆಯಲ್ಲಿ ಉಮೇಶ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ ಹೆಸರು ಕೈಬಿಡಲಾಗಿದೆ. ಮಾಜಿ ಶಾಸಕ, ಮಾಜಿ ಸಚಿವ ಲಕ್ಷ್ಮಣ ಸವದಿ ಹೆಸರು ಸೇರ್ಪಡೆಯಾಗಿದೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಗೆ ಮಹಿಳಾ ಕೋಟಾದಲ್ಲಿ ಸ್ಥಾನ ಸಿಕ್ಕಿದೆ.

ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರುವಲ್ಲಿ ಬಾಲಚಂದ್ರ ಜಾರಕಿಹೊಳಿ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದರು. ಅವರಿಗೆ ಸಚಿವಸ್ಥಾನ ಖಚಿತ ಎನ್ನಲಾಗುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರ ಹೆಸರು ಪಟ್ಟಿಯಲ್ಲಿಲ್ಲ.

ಸಸ್ಪೆನ್ಸ್… ಎಲ್ಲರ ದೃಷ್ಟಿ ಅಮಿತ್ ಶಾ ಕಡೆಗೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button