ಇದೇನಿದು, ಮಧ್ಯರಾತ್ರಿ ಹೊರಬಿದ್ದ ಅಚ್ಛರಿಯ ಪಟ್ಟಿ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೆಲವೇ ಗಂಟೆ ಬಾಕಿ ಇರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಛರಿಯ ಪಟ್ಟಿಯೊಂದು ಹರಿದಾಡುತ್ತಿದೆ.
ಇದರಲ್ಲಿ ಜೋರಾಗಿ ಕೇಳಿಬಂದಿದ್ದ ಹೆಸರುಗಳು ನಾಪತ್ತೆಯಾಗಿ, ಹಾಲಿ ಶಾಸಕರೂ ಅಲ್ಲದವರ ಹೆಸರಿದೆ.
ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ , ಆರ್.ಅಶೋಕ, ಬಿ.ಶ್ರೀರಾಮುಲು, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ, ಎಚ್.ನಾಗೇಶ್, ಸುರೇಶ್ ಕುಮಾರ್ , ಜೆ.ಸಿ.ಮಧುಸ್ವಾಮಿ, ಶ್ರೀರಾಮುಲು, ಬಸವರಾಜ ಬೊಮ್ಮಾಯಿ ಸೇರಿ 17 ಜನರ ಹೆಸರಿದೆ.
ಹಿರಿಯ ನಾಯಕರಾದ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ಮೊದಲಾದವರ ಹೆಸರಿಲ್ಲ
ಈ ಪಟ್ಟಿ ನಂಬುವುದು ತೀವ್ರ ಕಷ್ಟವಾದರೂ ಬಿಜೆಪಿಯಲ್ಲಿ ಏನುಬೇಕಾದರೂ ಆಗಬಹುದು ಎನ್ಮಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ