
ಪ್ರಗತಿವಾಹಿನಿ ಸುದ್ದಿ: ಮದುವೆಯಾದ ದಿನದಂದೇ ನವದಂಪತಿ ಮಚ್ಚಿನಿಂದ ಹೊಡೆದಾಡಿಕೊಂಡಿದ್ದು, ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪತಿಯನ್ನು ಗಂಭೀರ ಗಾಯಗೊಂಡಿದ್ದರಿಂದ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತನೂ ಮೃತಪಟ್ಟಿದ್ದಾನೆ.
ಕೋಲಾರ ತಾಲೂಕಿನ ಬೈನೇಹಳ್ಳಿಯ ಶ್ರೀನಿವಾಸಲು- ಲಕ್ಷ್ಮೀ ದಂಪತಿ ಪುತ್ರಿ ನಿಖಿತಶ್ರೀ (18) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಂಧ್ರಪ್ರದೇಶದ ಶಾಂತಿಪುರಂ ನಿವಾಸಿ ನವೀನ್‌ಕುಮಾರ್ (30) ಆಸ್ಪತ್ರೆಯಲ್ಲಿ ನಿಧನರಾದ. ಜಗಳಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬುಧವಾರ ಬೆಳಗ್ಗೆ ನಿಖಿತಶ್ರೀ ಮತ್ತು ನವೀನ್‌ಕುಮಾರ್‌ಗೆ ಚಂಬರಸನಹಳ್ಳಿಯ ವರನ ಅಕ್ಕನ ಮನೆಯಲ್ಲಿ ಮದುವೆ ನಡೆದಿತ್ತು. ಮದುವೆಯ ನಂತರ ಗ್ರಾಮದಲ್ಲಿರುವ ವರನ ದೊಡ್ಡಪ್ಪನ ಮನೆಗೆ ಹೋದ ದಂಪತಿ ಕೋಣೆಯ ಬಾಗಿಲು ಹಾಕಿಕೊಂಡು ಹಲ್ಲೆ ಮಾಡಿಕೊಂಡು ತೀವ್ರ ಗಾಯಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ