ಪ್ರಗತಿವಾಹಿನಿ ಸುದ್ದಿ: ಕೋಟಿಗಟ್ಟಲೆ ಆಸ್ತಿ, ಮಕ್ಕಳಿದ್ದರೂ 80 ವರ್ಷದ ಖ್ಯಾತ ಲೇಖಕ ಶ್ರೀನಾಥ್ ಖಂಡೇಲ್ವಾಲ್ ವೃದ್ಧಾಶ್ರಮದಲ್ಲಿ ಕಳೆದು ಅನಾಥರಂತೆಯೇ ಜೀವ ತ್ಯಜಿಸಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ವಾರಾಣಸಿಯ ನಿವಾಸಿ ಖ್ಯಾತ ಲೇಖಕ ಶ್ರೀನಾಥ್ ಖಂಡೇಲ್ವಾಲ್ ಅವರು ವೃದ್ಧಾಶ್ರಮದಲ್ಲಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೂ ಮಕ್ಕಳು ಆಗಮಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲವರು ಸ್ವಯಂ ಸೇವಕರು ಖಂಡೇಲ್ವಾಲ್ ರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸಿದ್ದಾರೆ. ಶ್ರೀನಾಥ್ ಖಂಡೇಲ್ವಾಲ್ ಅವರು 400ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಮುಖ್ಯವಾಗಿ ಶಿವ ಪುರಾಣ ಮತ್ತು ಮತ್ಯ ಪುರಾಣವನ್ನು ಇವರು ಹಿಂದಿಗೆ ಭಾಷಾಂತರಿಸಿದ್ದು, ಈ ಗ್ರಂಥಗಳು ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿವೆ. ಇವರ ಪುಸ್ತಕಗಳು ಹಿಂದಿ ಭಾಷೆಯ ಜೊತೆಯಲ್ಲೇ ಸಂಸ್ಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೂ ಭಾಷಾಂತರಗೊಂಡಿವೆ. 2023 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಶ್ರೀನಾಥ್ ಖಂಡೇಲ್ವಾಲ್ ಅವರು 80 ಕೋಟಿ ಆಸ್ತಿಯ ಒಡೆಯ. ಇವರ ಪುತ್ರ ಉದ್ಯಮಿ ಹಾಗೂ ಪುತ್ರಿ ಸುಪ್ರೀಂ ಕೋರ್ಟ್ ನಲ್ಲಿ ಲಾಯರ್.
ಇವರ ಪುತ್ರ ತಂದೆಗೆ ಮೋಸ ಮಾಡಿ 80 ಕೋಟಿ ಆಸ್ತಿಯನ್ನು ತನ್ನದಾಗಿಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಖಂಡೇಲ್ವಾಲ್ ಎಲ್ಲಾ ಆಸ್ತಿಯನ್ನು ಕಳೆದುಕೊಂಡು ಕೊನೆಯ ದಿನಗಳನ್ನು ಕಾಶಿ ವೃದ್ಧಾಶ್ರಮದಲ್ಲಿ ಕಳೆದಿದ್ದರು. ಖಂಡೇಲ್ವಾಲ್ ಅವರು ಮೃತಪಟ್ಟಿರುವ ವಿಚಾರ ತಿಳಿಸಿದರೂ ಅವರ ಮಕ್ಕಳು ಅಂತಿಮ ಸಂಸ್ಕಾರಕ್ಕೆ ಬಂದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ