Kannada NewsKarnataka NewsLatest
ಗ್ರಾಮೀಣ ಕ್ಷೇತ್ರದ ಜನರಲ್ಲಿದ್ದ ಅನಾಥ ಪ್ರಜ್ಞೆ ಈಗ ದೂರವಾಗಿದೆ – ಲಕ್ಷ್ಮಿ ಹೆಬ್ಬಾಳಕರ್
ಜನರು ಈಗ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ - ನಾನು ಶಾಸಕಿಯಾಗುವ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದ ಜನರಲ್ಲಿದ್ದ ಅಭಿವೃದ್ಧಿಯ ಕನಸುಗಳು ಕಮರಿ ಹೋಗುವ ಸ್ಥಿತಿಯಲ್ಲಿದ್ದವು. ಜನಪ್ರತಿನಿಧಿಗಳು ಮತ್ತು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಜನರು ಕಳೆದುಕೊಂಡಿದ್ದರು. ಆದರೆ ನಾನು ಜನರಿಗೆ ಹತ್ತಿರವಾಗಿ ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತ ಬಂದೆ. ಕೊಟ್ಟ ಭರವಸೆಗಳನ್ನೆಲ್ಲ ಹಂತ ಹಂತವಾಗಿ ಈಡೇರಿಸುತ್ತ ಬಂದೆ. ಹಾಗಾಗಿ ಜನರು ಈಗ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ. ಅವರಲ್ಲಿದ್ದ ಅನಾಥ ಪ್ರಜ್ಞೆ ದೂರವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಮಾರ್ಮಿಕವಾಗಿ ನುಡಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಳೆಬೈಲ್ ಗ್ರಾಮದ ಶ್ರೀ ದುರ್ಗಾಮಾತಾ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕ್ಷೇತ್ರದ ಅಭಿವೃದ್ಧಿಗೋಸ್ಕರ ಒಂದು ದಿನವೂ ವಿಶ್ರಾಂತಿ ಇಲ್ಲದೆ ನಿರಂತರವಾಗಿ ಬೆಳಗಾವಿ – ಬೆಂಗಳೂರು ಅಡ್ಡಾಡುತ್ತಿದ್ದೇನೆ. ಪ್ರತಿ ಬಾರಿ ಬೆಂಗಳೂರಿಗೆ ತೆರಳುವಾಗಲೂ ಹತ್ತಾರು ಪ್ರಸ್ತಾವನೆಗಳನ್ನು ಹೊತ್ತೊಯ್ಯುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಕಳೆದ ಹಲವು ದಶಕಗಳಿಂದ ಆಗಿರುವ ಹಿನ್ನಡೆಯನ್ನು ಸರಿದೂಗಿಸಲು ನನ್ನೆಲ್ಲ ಶಕ್ತಿ ಮೀರಿ ಪ್ರಯತ್ನ ನಡೆಸಿದ್ದೇನೆ. ದೇವರು ಮತ್ತು ಕ್ಷೇತ್ರದ ಜನರ ಆಶಿರ್ವಾದ ನನ್ನ ಮೇಲಿರುವುದರಿಂದ ಇವೆಲ್ಲ ಸಾಧ್ಯವಾಗುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜಣ್ಣ ಕದಂ, ಮನೋಹರ ಬೆಳಗಾಂವಕರ್, ಶಿವಾಜಿ ಬೆಟಗೇರಿಕರ್, ಮಹೇಶ ಪಾಟೀಲ, ಮನೋಹರ ಪಾಟೀಲ, ರಾವಳು ಪಾಟೀಲ, ಪ್ರೇಮಾ ಬಾಳೇಕುಂದ್ರಿ, ದುರ್ಗು ಪಾಟೀಲ, ಪರುಶರಾಮ ಪಾಟೀಲ, ಮಲ್ಲಪ್ಪ ಮರಗಾಳೆ, ಮಾರುತಿ ದತ್ತು ಪಾಟೀಲ, ವಿಠ್ಠಲ ಔಳಕರ್, ನಾಮದೇವ, ಮರಗಾಳೆ, ಓಮನಿ, ಯಳ್ಳೂರಕರ, ಗುಂಡು ಪಾಟೀಲ, ಮೋನಪ್ಪ ಮರಗಾಳೆ ಹಾಗೂಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ