Belagavi NewsBelgaum NewsKannada NewsLatestPolitics

*ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ಅವಶ್ಯಕತೆ ಇದೆ -ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪಕ್ಷದ ಕಡೆ ಸಂಪೂರ್ಣ ಗಮನ ನೀಡುವ ಪೂರ್ಣಾವಧಿ ಅಧ್ಯಕ್ಷರ ಅವಶ್ಯಕತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಸಚಿವರಿದ್ದೇವೆ. ಅವರಾದರೂ ಇರಲಿ, ಬೇರೆಯವರನ್ನಾದರೂ ಮಾಡಲಿ. ಆದರೆ ಪಕ್ಷದ ಕೆಲಸಗಳು ಸುಗಮವಾಗಿ ನಡೆಯಲು, ಸರಕಾರವನ್ನು ಪ್ರತಿ ಹಂತದಲ್ಲಿ ಸಮರ್ಥನೆ ಮಾಡಲು ಪುರ್ಣಾವಧಿ ಅಧ್ಯಕ್ಷರು ಬೇಕು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಕುರಿತು ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಪಕ್ಷದ ಹೈಕಮಾಂಡ್ ಗೆ ಇದೆ, ತೆಗೆದುಕೊಳ್ಳಬೇಕು. ಈ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಸಿಎಂ ಹಂತದಲ್ಲಿ, ಪಾರ್ಟಿ ಹಂತದಲ್ಲಿ ಚರ್ಚೆ ಆಗಬೇಕು. ಚರ್ಚೆ ನಡೆಯುತ್ತಿದೆ. ಆದರೆ ಹೈಕಮಾಂಡ್ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಸತೀಶ್ ಜಾರಕಿಹೊಳಿ ಅಧ್ಯಕ್ಷರಾಗಬೇಕೆನ್ನುವ ಕುರಿತು ಕೆಲವರು ಹೇಳಿರುವ ಕುರಿತು ಕೇಳಿದಾಗ, ಅಭಿಪ್ರಾಯ ಇರಬಹುದು, ಆದರೆ ಪಕ್ಷ ತೀರ್ಮಾನಿಸಬೇಕು. ನಮ್ಮ ಹಂತದಲ್ಲಿ ಏನಿಲ್ಲ. ನಾನು ದೆಹಲಿಗೆ ಹೋಗಿ ಬಂದ ಮೇಲೆ ಸುಳಿವು ಸಿಗಬಹುದು. ನಾನು ಬೆಳಗಾವಿ ಅಧಿವೇಶನಕ್ಕಿಂತ ಮೊದಲು ಅಥವಾ ನಂತರ ದೆಹಲಿಗೆ ಹೋಗುತ್ತೇನೆ. ಆನಂತರ ಗೊತ್ತಾಗುತ್ತದೆ ಎಂದು ಅವರು ಹೇಳಿದರು.

Home add -Advt

ಅಧ್ಯಕ್ಷರ ನೇಮಕ ಸಂದರ್ಭ ಬಂದಾಗ ಯಾರಾಗ್ತೀರಿ ಎಂದು ಪಕ್ಷ ಕೇಳುತ್ತದೆ. ಆಗ ನಮ್ಮ ಅಭಿಪ್ರಾಯ ಹೇಳಬೇಕಾಗುತ್ತದೆ. ಆದರೆ ಈವರೆಗೆ ಹೈಕಮಾಂಡ್ ನಿಂದ ಯಾವುದೇ ಸೂಚನೆ ಬಂದಿಲ್ಲ. ಕೇಳಿದರೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. 3 -4 ಹೆಸರು ಇದೆ, ಚರ್ಚೆ ಆಗದೆ ಹೇಳುವುದು ಸರಿಯಲ್ಲ ಎಂದು ಸತೀಶ್ ಹೇಳಿದರು.

ಸಚಿವ ಸಂಪುಟ ಪುನಾರಚನೆ ಚರ್ಚೆ ಈಗ ಇಲ್ಲ. ಹಿರಿಯರಲ್ಲಿ ಕೆಲವರು ಸಚಿವರಾಗಲು ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳು, ಹೈಕಮಾಂಡ್ ಹಂತದಲ್ಲಿ ಇವೆಲ್ಲ ತೀರ್ಮಾನವಾಗಬೇಕು ಎಂದು ಅವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button