Karnataka News

ಎಂಇಎಸ್ ಗೆ ಗಂಟು ಮೂಟೆ ಕಟ್ಟಿಸಿದ ಜಿಲ್ಲೆಯ ಜನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಳಗಾವಿ ಜಿಲ್ಲೆಯ ಜನರು ಸಂಪೂರ್ಣ ಗಂಟು ಮೂಟೆ ಕಟ್ಟಿಸಿದ್ದಾರೆ. ಜಿಲ್ಲೆಯ 5 ಕ್ಷೇತ್ರಗಳಲ್ಲಿ ಎಂಇಎಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ ಎಲ್ಲ ಕಡೆ ಜನರು ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ನಿಮ್ಮ ಭಾಷೆ, ಗಡಿ ರಾಜಕೀಯ ನಡೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಬೆಳಗಾವಿ ಗ್ರಾಮೀಣ, ಉತ್ತರ, ದಕ್ಷಿಣ, ಖಾನಾಪುರ, ಹಾಗೂ ನಿಪ್ಪಾಣಿ ಕ್ಷೇತ್ರಗಳಲ್ಲಿ ಎಂಇಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಎಲ್ಲಿಯೂ ಗೆಲ್ಲಲು ಸಾಧ್ಯವಾಗಲಿಲ್ಲ. ಸಂಪೂರ್ಣ ನೆಲ ಕಚ್ಚಿದ್ದ ಸಮಿತಿ ಮತ್ತೆ ಚಿಗುರಲು ಪ್ರಯತ್ನಿಸಿತ್ತು, ಆದರೆ ನೆಲ ಬಿಟ್ಟು ಏಳಲು ಸಾಧ್ಯವಾಗಲೇ ಇಲ್ಲ.

Home add -Advt
https://pragati.taskdun.com/lakshmi-hebbalkars-resounding-victory/

Related Articles

Back to top button