ಪ್ರಗತಿವಾಹಿನಿ ಸುದ್ದಿ, ಕಿತ್ತೂರು – ಇಲ್ಲಿಗೆ ಸಮೀಪದ ದೇವರಶೀಗಿಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೋರ್ವರ ಸರವನ್ನು ಅಪಹರಿಸಿದ್ದ ಮೂವರು ಯುವಕರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.
ದೇವರಶೀಗಿಹಳ್ಳಿಯ ರಾಮನಗೌಡ ನಿಂಗನಗೌಡ ಪಾಟೀಲ ಸೆ.23ರಂದು ತಮ್ಮ ಹೊಲದಿಂದ ಹುಲ್ಲಿನ ಹೊರೆ ಹೊತ್ತುಕೊಂಡು ಬರುವಾಗ ಅವರ ಕೊರಳಲ್ಲಿದ್ದ 35 ಗ್ರಾಂ ತೂಕದ 1.40 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಮೂವರು ಯುವಕರು ಕಿತ್ತುಕೊಡು ಹೋಗಿದ್ದರು.
ಅವರು ಕಿತ್ತೂರು ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ, ಅದೇ ಗ್ರಾಮದ ನಾಗೇಶ ಶ್ರೀಶೈಲ ದೊಡ್ಮನಿ, ವಿಜಯ ನಾಗಯ್ಯ ಮದನಬಾವಿ ಮತ್ತು ಚೇತನ್ ಬಸಯ್ಯ ಹಿರೇಮಠ ಎನ್ನುವವರನ್ನು ಬಧಿಸಿದ್ದಾರೆ. ಅವರಿಂದ ಫಲ್ಸರ್ ಬೈಕ್ ಮತ್ತು 2 ಮೊಬೈಲ್ ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಸಿಪಿಐ ಮಂಜುನಾಥ ಕುಸುಗಲ್, ಪಿಎಸ್ಐ ಎಸ್.ಬಿ.ಮಾವಿನಕಟ್ಟಿ, ಎಎಸ್ಐ ಎಸ್.ಬಿ.ಬಡಿಗೇರ ಮತ್ತು ಸಿಬ್ಬಂದಿ ಐ.ಬಿ.ಕಜಗುನಟ್ಟಿ, ಎಲ್.ಎಫ್.ಜಂಬಲವಾಡಿ, ಈಶ್ವರ ಜನ್ನವ್ವಗೋಳ, ಆರ್.ಎಸ್.ತೇಲಿ, ಎಸ್.ಬಿ.ಹುಣಶಿಕಟ್ಟಿ, ಎಸ್.ಎಸ್.ಕಾಜಗಾರ, ಕೆ.ಬಿ.ಮಗದುಮ್ಮ, ಬಿ.ಪಿ.ಪರಗೊಣ್ಣವರ್, ಎಸ್.ಎಂ.ಜವಳಿ, ಎಸ್.ಎಂ.ಜೈನರ್ ಕಾರ್ಯಾಚರಣೆ ನಡೆಸಿದ್ದರು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ