ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಧರ್ಮ ಚೆನ್ನಾಗಿ ಉಳಿದರೆ ದೇಶಕ್ಕೆ ಹಿತವಾಗುತ್ತೆ. ದೇಶದ ಉನ್ನತಿಯ ದೃಷ್ಟಿಯಿಂದ ಧರ್ಮದ ಸಂರಕ್ಷಣೆ ಅತ್ಯವಶ್ಯವಾಗಿದೆ. ಏಳು ದಿನ ನಡೆಯುವ ಈ ಕಾರ‍್ಯಕ್ರಮದಲ್ಲಿ ಹರಿಭಜನೆ, ಪ್ರವಚನ, ಸಾಂಸ್ಕೃತಿಕ ಕಾರ‍್ಯಕ್ರಮಗಳು, ವಿದ್ಯಾರ್ಥಿಗಳ ಪರೀಕ್ಷೆ, ವಿಧ್ವಾಂಸರಿಂದ ಉಪನ್ಯಾಸ, ವಿದ್ಯಾಂಸರಿಂದ ಬೇರೆ ಬೇರೆ ವಿಷಯಗಳ ಕುರಿತಾದ ಚರ್ಚೆ ಇಂಥ ವೈವಿಧ್ಯಮ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೆಲ್ಲದರ ಮುಖ್ಯ ಉದ್ದೇಶ ಧರ್ಮ ಪ್ರಸಾರವೇ ಆಗಿದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ರೇಲ್ವೆ ನಿಲ್ದಾಣದ ಹತ್ತಿರವಿರುವ ಬಿ. ಕೆ. ಮಾಡೆಲ್ ಹೈಸ್ಕೂಲ್ ಹೊರ ಆವರಣದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ನಗರದ ಪಾದುಕಾ ಮಹಾಸಮಾರಾಧನೆ ಸೇವಾ ಸಮಿತಿಯವರು ಹಮ್ಮಿಕೊಂಡಿದ್ದ ಶ್ರೀಮತ್ ಅನುವ್ಯಾಖ್ಯಾನ ಶ್ರೀಮನ್‌ನ್ಯಾಯಸುಧಾ ಮಂಗಲ ಮಹೋತ್ಸವ (ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ) ಹಾಗೂ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೩ ನೇ ಪಾದುಕಾ ಮಹಾಸಮಾರಾಧನೆ ಕಾರ‍್ಯಕ್ರಮದಲ್ಲಿ ಶ್ರೀಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
ಶ್ರೀಮದ್ ಜಯತೀರ್ಥರು ರಚಿಸಿದ ಶ್ರೀಮನ್ ನ್ಯಾಯಸುಧಾ, ಶ್ರೀ ಮಧ್ವಾಚಾರ್ಯರು ರಚಿಸಿದ ಅನುವ್ಯಾಖ್ಯಾನ ಮಾಧ್ವ ಸಮಾಜದ ಮೇರು ಕೃತಿಗಳು. ಈ ಗ್ರಂಥದ ವ್ಯಾಖ್ಯಾನದ ಮಂಗಲ ಮಹೋತ್ಸವ ಅಂದರೆ ನಮ್ಮ ಶಾಸ್ತ್ರ ಅಧ್ಯಯನ ಕೊನೆ ಘಟ್ಟ. ಅದು ಇಂದು ಪ್ರಾರಂಭವಾಗಿದೆ. ವಿದ್ಯಾರ್ಥಿಗಳೆಲ್ಲ ಪರೀಕ್ಷೆ ಕೊಡ್ತಾ ಇದ್ದಾರೆ. ಉತ್ತೀರ್ಣರಾದವರಿಗೆ ವಿಶೇಷ ಬಹುಮಾನಗಳನ್ನು ಕೊಡುವ ಮೂಲಕ ಉತ್ತೇಜನ ಕೊಡಲಾಗ್ತದೆ. ಇದರ ಜೊತೆಗೆ ಆಸ್ತಿಕ ಮಹಾಶಯರಿಗೆ ಧರ್ಮಾಚರಣೆಯ ಮಹತ್ವವನ್ನು ಅಲ್ಲದೇ ಯಾವ ರೀತಿಯ ಧರ್ಮಾಚರಣೆಯನ್ನ ಮಾಡಬೇಕು ಎಂಬ ತಿಳವಳಿಕೆಯನ್ನ ಮಾಡಿ ಕೊಟ್ಟು ಧರ್ಮ ಪ್ರಸಾರದ ಒಂದು ಕಾರ‍್ಯಕ್ರಮವೇ ಇದಾಗಿದೆ ಎಂದು ಹೇಳಿದರು.
ಅಜಯ ಜೋಶಿ, ಅನಂತ ಪದ್ಮನಾಭ ದ್ವಾರಕಾನಾಥ, ಪ್ರಸನ್ನ ಕುಲಕರ್ಣಿ, ಪವನ ಜೋಶಿ, ಮೋಹನ, ರಾಘವ ಮಿಟ್ಟಿ, ಸತ್ಯವೃತ ಕಲ್ಮಡಿ, ಸುಜಯಿಂದ್ರ ಮನಗೂಳಿ, ಪವನ ಪಿ., ಮನೋಜ ಇಟಗಿಕರ, ರಘೋತ್ತಮ ಸೊಂಡೂರು, ರಾಮ ಕ್ಯಾಮೇನಹಳ್ಳಿ, ಲಕ್ಷ್ಮಿ ನರಸಿಂಹ, ಶ್ರೀಯಃಪತಿ ತಾಮ್ರಮರ್ಣಿ, ಸಂಜೀವ ದೇಶಪಾಂಡೆ, ಸಮೀರ ದೇಶಪಾಂಡೆ, ಸಮೀರಣ ಪಾಂಘ್ರಿ, ಅಖಿಲ ಅತ್ರೆ, ಶ್ರೀರಾಮ ಕಟ್ಟಿ, ಶ್ರೀರಾಮ ರಾಯಚೂರು, ಶ್ರೀನಿಧಿ ಗುಡಿ, ಸನತ್ತುಕುಮಾರ ಹಯಗ್ರೀವ, ಪ್ರಾಣೇಶ, ಯೋಗೀಶ, ಸತ್ಯಾಧಿರಾಜ, ಶ್ರೀಹರಿ ಕುಲಕರ್ಣಿ ಇವರು ಮೂರು ದಿನಗಳು ನಡೆಯುವ ಮಂಗಲಮಹೋತ್ಸಹವದಲ್ಲಿ ಭಾಗವಹಿಸುವರು.
ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ವೇಣುಗೋಪಾಲ ಭಜನಾ ಮಂಡಳಿ ಸಂಗೀತ ನಾಟ್ಯ ರೂಪಕ, ಸ್ವರಸಾಧನಾ ಕಲಾತಂಡದವರಿಂದ ಭರತ ನಾಟ್ಯ, ಪ್ರೇರಣಾ ಪ್ರೀತಿ ಭಜನಾ ಮಂಡಳಿ ಹರಿವಾಣ ಸೇವಾ ರೂಪಕ, ಲಕ್ಷ್ಮೀ ಸೋಬಾನ ಭಜನಾ ಮಂಡಳಿಯರಿಂದ ಕೋಲಾಟ ವೈವಿದ್ಯಮಯ ಕಾರ‍್ಯಕ್ರಮಗಳು, ಉಪನ್ಯಾಸ ಜರುಗಿದವು.
ಶ್ರೀಧರ ಹುಕ್ಕೇರಿ, ಪಂ. ಪ್ರಮೋದಾಚಾರ್ಯ ಕಟ್ಟಿ, ವಿದ್ಯಾಧೀಶಾಚಾಯ್, ಆರ್. ಎಸ್. ಜಕಾತಿ, ರಾಜೇಂದ್ರ ಕುಲಕರ್ಣಿ, ಎಸ್. ಎನ್ .ಶಿವಣಗಿ, ಪ್ರೊ. ಜಿ. ಕೆ. ಕುಲಕರ್ಣಿ, ಪ್ರಮೋದ ಅಂಬೇಕರ, ಅರವಿಂದ ತೇಲಂಗ ಮುಂತಾದವರು ಉಪಸ್ಥಿತರಿದ್ದರು.
ರಾಮಮಂದಿರ ನೋಡುವ ಸೌಭಾಗ್ಯ ನಮ್ಮದು -ಉತ್ತರಾದಿ ಮಠದ ಶ್ರೀ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ