Kannada NewsPoliticsTravelWorld

*ಕಚ್ಚಾ ತೈಲದ ಬೆಲೆ ದಿಢೀರ್‌ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಇರಾನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಜೆಗಳನ್ನು ಉದ್ದೇಶಿಸಿ ಡೊನಾಲ್ಡ್‌ ಟ್ರಂಪ್‌ ಭಾಷಣ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್‌ ಏರಿಕೆಯಾಗಿದೆ.

ಟ್ರಂಪ್‌ ವಿಷಯನ್ನು ಪ್ರಸ್ತಾಪ ಮಾಡುತ್ತಿದ್ದಂತೆ ತೈಲ ರಫ್ತು ಮಾಡುವ ಒಪೆಕ್‌ ರಾಷ್ಟ್ರಗಳ ಬ್ರೆಂಟ್‌ ಕಚ್ಚಾತೈಲದ ಬೆಲೆ 4.5% ಏರಿಕೆಯಾಗಿದೆ. ಒಂದು ಬ್ಯಾರೆಲ್‌ (158 ಲೀಟರ್‌) ಕಚ್ಚಾ ತೈಲದ ದರ 106.42 ಡಾಲರ್‌ಗೆ (9,930 ರೂ.) ತಲುಪಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್(WTI) ದರ 4% ಏರಿಕೆಯಾಗಿ 104.24 ಡಾಲರ್‌ನಲ್ಲಿ (9,732 ರೂ.) ವ್ಯವಹಾರ ನಡೆಸುತ್ತಿದೆ.

ಈ ಮೊದಲು ಯುದ್ಧ ಶೀಘ್ರವೇ ಅಂತ್ಯಗೊಳ್ಳಬಹುದು ಎಂದು ಟ್ರಂಪ್‌ ಹೇಳಿದ್ದರಿಂದ ಬುಧವಾರ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲ 99, 100 ಡಾಲರ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರೆ, WTI 98.71 ಡಾಲರ್‌ನಲ್ಲಿ ವ್ಯವಹಾರ ನಡೆಸುತ್ತಿತ್ತು.

Home add -Advt

Related Articles

Back to top button