*ಪ್ರಧಾನಿ ಬದಲಾಗ್ತಾರೆ; ಇಬ್ಬರ ಹೆಸರು ಹೇಳಿದ ಸಂತೋಷ ಲಾಡ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೋದಿಯವರನ್ನ ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಡೆ ಇಳಿಸಿ ಎಂದು ನೇರವಾಗಿಯೇ ಬಿಜೆಪಿ ನಾಯಕರಿಗೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ. ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ ಪ್ರಧಾನಮಂತ್ರಿ ಆಗಲಿ ಎಂದೂ ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಎರಡು ವರ್ಷ ಆಯ್ತು ಈ ಮಾತು ಕೇಳುತ್ತಿದ್ದೇನೆ. ಸರ್ಕಾರ ಬಂದ ಮೂರನೇ ತಿಂಗಳಿನಿಂದ ಈ ಮಾತು ಆರಂಭವಾಗಿದೆ. ಈಗ ಎರಡು ವರ್ಷ ಅಂತೂ ಏನು ಆಗಿಲ್ಲ. ನಮಗೆ ಹಾಗೆ ಮಾಹಿತಿಯಿದೆ ಮುಂದೆ ಚಂದ್ರಬಾಬು ನಾಯ್ಡು ಪ್ರಧಾನಮಂತ್ರಿ ಆಗಬಹುದು. ಇಲ್ಲವೇ ನಿತೀಶಕುಮಾರ ಅಥವಾ ನಿತಿನ್ ಗಡ್ಕರಿ ಆಗಬಹುದು.
ನನಗೆ ಇರುವಂತಹ ಮಾಹಿತಿ ಪ್ರಧಾನಮಂತ್ರಿ ಬದಲಾಗ್ತಾರೆ ಅಂತಾನೇ ಇದೆ. ನಾನು ಮನವಿ ಮಾಡ್ತಿನಿ, ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ. ಸ್ವಾಮಿ ಸಾಕು ಈ ಪ್ರಧಾನಮಂತ್ರಿ ಕೆಳಗಿಸಿ ಬೇರೆಯವರನ್ನ ಪ್ರಧಾನಮಂತ್ರಿ ಮಾಡ್ರಿ. ನಿತಿನ್ ಗಡ್ಕರಿ ಅವರನ್ನು ಪ್ರಧಾನಮಂತ್ರಿ ಮಾಡ್ರಿ. ನಾನೇ ಬುದ್ಧಿವಂತ, ವಿಶ್ವ ಗುರು ಅಂತಾ ಬಿಜೆಪಿಯವರು ಹೇಳಿದ್ರೆ ಹೇಗೆ. ಇದೇನು ನಮ್ಮ ವೈಯಕ್ತಿಕ ಅಂಜೇಡಾ ಅಲ್ಲವೇ ಅಲ್ಲಾ ಎಂದು ಸಚಿವ ಲಾಡ್ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ಡಿಕೆಶಿಗೆ ಎರಡು ಪದವಿ ಕೊಟ್ಟಿದ್ದಕ್ಕೆ ಸಚಿವ ರಾಜಣ್ಣ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಇಂತಹ ಏನೇ ಭಿನ್ನಾಭಿಪ್ರಾಯ ಬಂದಾಗ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಪಕ್ಷದಲ್ಲಿನ ಸಮಸ್ಯೆಗೆ ಹೈಕಮಾಂಡ್ ಸೂಕ್ತವಾದ ಮಾರ್ಗದರ್ಶನ, ಪರಿಹಾರ ಕಂಡು ಹಿಡಿಯುತ್ತದೆ ಎಂದರು.
ಚಂದ್ರಬಾಬು ನಾಯ್ಡು, ನಿತಿನ್ ಗಡ್ಕರಿ ಪ್ರಧಾನಮಂತ್ರಿ ಆಗಲಿ. ಮೋದಿಯವರನ್ನ ಪ್ರಧಾನಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿ ಎಂದು ನೇರವಾಗಿಯೇ ಬಿಜೆಪಿ ನಾಯಕರಿಗೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ