ಪ್ರಗತಿವಾಹಿನಿ ಸುದ್ದಿ, ಧಾರವಾಡ: ನಗರದಲ್ಲಿ ಇಂದು ಉತ್ತರ ಕರ್ನಾಟಕ ಸಿವ್ಹಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸುಭಾಸ್ ಪಾಟೀಲ್ ಅವರು ೨೦೨೧ ಕ್ಯಾಲೇಂಡರ್ ಹಾಗೂ ಡೈರಿಯನ್ನು ಬಿಡುಗಡೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುತ್ತಿಗೆದಾರರಿಗೆ ಸಾಕಷ್ಟು ಸಮಸ್ಯೆಗಳಿವೆ, ಅವೆಲ್ಲವನ್ನು ಪರಿಹಾರ ಮಾಡಿಕೊಂಡು ಹೋಗುವ ದಾರಿಯಲ್ಲಿ ಇದ್ದೇವೆ. ಗುತ್ತಿಗೆದಾರರ ಕುಟುಂಬಕ್ಕೆ ಆಸ್ಪತ್ರೆ ಸೇರಿದರೆ ಕೇವಲ ೩ ಲಕ್ಷ ರೂಪಾಯಿ ಮಾತ್ರ ಕೊಡುತ್ತಾರೆ. ಆದರೆ ಅದು ಸಾಲುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಕ್ಲಾಸ್ ಒನ್ ಕಾಂಟ್ರಾಕ್ಟ್ರಿಗೆ ಕನಿಷ್ಠ ೧೦ ಲಕ್ಷ ಕೊಡಬೇಕು ಅಂತಾ ನಮ್ಮ ಸಂಘದ ಒತ್ತಾಯವಿದೆ. ರಸ್ತೆ ಕಾಮಗಾರಿಗೆ ಸರಕಾರದ ಕೆಂಪು ಮಣ್ಣು ಮೋಹರಂ ಕ್ವಾರಿ ಇದ್ದವು. ಆದರೆ ಈಗ ದುಡ್ಡು ಕೊಟ್ಟು ರೈತರ ಹೊಲದಿಂದ ತರುತ್ತಿದ್ದೇವೆ. ಅದನ್ನೂ ಎನ್‌ಎ ಮಾಡಬೇಕು ಎಂಬ ನಿರ್ಧಾರದಿಂದ ಕಷ್ಟವಾಗಿದೆ. ಎನ್‌ಎ ಮಾಡಲಿಕ್ಕೆ ಆರು ತಿಂಗಳು ಆಗುತ್ತೆ. ಇದರಿಂದ ನಮ್ಮ ಕೆಲಸ ಹಾಗೂ ಶ್ರಮ ಹಾಳಾಗುತ್ತಿದೆ. ಜಿಎಸ್‌ಟಿ ಕೂಡ ಸಾಕಷ್ಟು ಗೊಂದಲವಿದೆ. ಎಲ್ಲಾ ಕಾರ್ಯಕ್ಕೂ ಸರಕಾರದಲ್ಲಿ ಹಣ ಇದೆ, ಆದರೆ ನಮಗೆ ಕೊಡಲು ಹಣ ಇಲ್ಲವೆಂದು ಸುಭಾಸ್ ಪಾಟೀಲ ಬೇಸರ ವ್ಯಕ್ತ ಪಡಿಸಿದರು.
ಸರಕಾರದಿಂದ ಬಾಕಿ ಇರುವ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಬೇಕು ಎಂದೂ ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾನೆ ಮಾತನಾಡಿ ನಮ್ಮ ಗುತ್ತಿಗೆದಾರರು ಕಾಮಗಾರಿಯನ್ನು ಬಂದ್ ಮಾಡಿ ಮನೆಯಲ್ಲಿ ಕೂಡುವ ಹಾಗಾಗಿದೆ , ಪ್ಯಾಕೇಜ್ ಟೆಂಡರ್ ಮಾಡಿದಾಗ ನಾವು ಬೇಡ ಅಂತಾ ಬೇಡಿಕೆ ಇಟ್ಟಿದ್ದೇವೆ. ಪ್ಯಾಕೇಜ್ ಟೆಂಡರ್‌ನಲ್ಲಿ ನಾವು ಕೂಡಾ ಪೈಟ್ ಮಾಡುವ ಪರಿಸ್ಥಿತಿ ಬಂದಿವೆ. ಕಳಪೆ ಕಾಮಗಾರಿ ಮಾಡಿದರೆ ನಮ್ಮ ಸಂಘದಿಂದ ಅವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಹಾಗೂ ಸಂಘದಿಂದ ಉಚ್ಚಾಟನೆ ಮಾಡುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ