Kannada NewsKarnataka News

ಐದು ತಾಸು ತಡವಾಗಿ ಆರಂಭವಾದ ಕಾರ್ಯಕ್ರಮ

ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ: ಪ್ರಜಾಧ್ವನಿ
ಯಾತ್ರೆಯಲ್ಲಿ ಸಿದ್ಧರಾಮಯ್ಯ ವಿಶ್ವಾಸ

 

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಮತ್ತು ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಉದ್ದೇಶದಿಂದ
ಪ್ರಜಾಧ್ವನಿ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಈ ಯಾತ್ರೆ ಫಲಪ್ರದವಾಗಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ
ಬರಲಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಬೀಡಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಡವರ, ದೀನ ದಲಿತರ
ಶೋಷಿತರ ಪರ ನಿಲುವನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಬಡವರ ಬದುಕು ಹಸನಾಗಿಸುವ ಸಲುವಾಗಿ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಮತ್ತಿತರ ಭಾಗ್ಯಗಳ ಕೊಡುಗೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ
ಮತ್ತಷ್ಟು ಜನಪರ ಯೋಜನೆಗಳನ್ನು ಕಾಂಗ್ರೆಸ್ ರಾಜ್ಯದ ಜನರಿಗಾಗಿ ನೀಡಲಿದೆ ಎಂದರು.

ವೇದಿಕೆಯಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ, ಜಮೀರಖಾನ್, ಅಂಜಲಿ ನಿಂಬಾಳಕರ,
ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಸಂತೋಷ ಹಂಜಿ,
ದೇಮಣ್ಣ ಬಸರಿಕಟ್ಟಿ, ಸುರೇಶ ದಂಡಗಲ, ಮಹಾದೇವ ಕೋಳಿ, ಮಹಾಂತೇಶ
ರಾಹುತ, ಮಹಾಂತೇಶ ಕಲ್ಯಾಣಿ, ಮತ್ತಿತರರು ಇದ್ದರು.

ಬೀಡಿ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಮಯ್ಯ
ಅವರಿಗೆ ಸಂಗೊಳ್ಳಿ ರಾಯಣ್ಣನ ಕಂಚಿನ ವಿಗ್ರಹ ನೀಡಿ ಸನ್ಮಾನಿಸಿದರು. ಇದಕ್ಕೂ
ಮುಂಚೆ ಸಿದ್ಧರಾಮಯ್ಯ ಹಾಗೂ ಇತರರು ನಂದಗಡದ ಸಂಗೊಳ್ಳಿ ರಾಯಣ್ಣನ
ಸಮಾಧಿಗೆ ತೆರಳಿ ರಾಯಣ್ಣನ ಸಮಾಧಿಗೆ ನಮನ ಸಲ್ಲಿಸಿದರು.
ಸಿದ್ಧರಾಮಯ್ಯ ಅವರ ನಂದಗಡ ಭೇಟಿಗೆ ಪಕ್ಷದ ಸ್ಥಳೀಯ
ಕಾರ್ಯಕರ್ತರು ಬೈಕ್ಯ ರ‍್ಯಾಲಿ ಮೂಲಕ ಸಾತ್ ನೀಡಿದರು. ಬೈಕ್ ರ‍್ಯಾಲಿ ಮತ್ತು
ವೇದಿಕೆ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳ ಕಾಂಗ್ರೆಸ್ ಮುಖಂಡರು,
ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಇದ್ದರು.

ಐದು ತಾಸು ತಡವಾಗಿ ಆರಂಭವಾದ ಕಾರ್ಯಕ್ರಮ
ಬೀಡಿ ಗ್ರಾಮದಲ್ಲಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ
ಯಾತ್ರೆ ಬುಧವಾರ ಮಧ್ಯಾಹ್ನ ೨ ಗಂಟೆಗೆ ನಿಗದಿಯಾಗಿತ್ತು. ಪಕ್ಷದ
ಮುಖಂಡರು ಮತ್ತು ಕಾರ್ಯಕರ್ತರು ೧ ಗಂಟೆಯಿಂದಲೇ ಕಾರ್ಯಕ್ರಮ
ನಡೆಯುವ ಸ್ಥಳದಲ್ಲಿ ಸೇರಿದ್ದರು. ಆದರೆ ಕಾರ್ಯಕ್ರಮ ಬರೋಬ್ಬರಿ ೫ ತಾಸು
ತಡವಾಗಿ ಸಂಜೆ ೭ಕ್ಕೆ ಆರಂಭಗೊಂಡಿತು. ಮಧ್ಯಾಹ್ನದ ಬಿರುಬಿಸಿಲಲ್ಲಿ
ನಡೆಯಬೇಕಿದ್ದ ಕಾರ್ಯಕ್ರಮ ಹಲವು ಗೊಂದಲಗಳ ನಡುವೆ ರಾತ್ರಿಯ
ಹೊನಲು ಬೆಳಕಿನಲ್ಲಿ ನೆರವೇರಿತು. ಕಾರ್ಯಕ್ರಮ ತಡವಾಗಿ ನಡೆದಿದ್ದರಿಂದ
ದೂರದೂರುಗಳಿಂದ ಆಗಮಿಸಿದ್ದ ಬಹುತೇಕ ಕಾರ್ಯಕರ್ತರು ಕಾರ್ಯಕ್ರಮದ
ಆರಂಭಕ್ಕೂ ಮೊದಲು ತಮ್ಮ ಮನೆಗಳತ್ತ ಮುಖ ಮಾಡಿದ್ದರು. ಹೀಗಾಗಿ
ಸಮಾರಂಭದಲ್ಲಿ ಉಪಸ್ಥಿತರಿದ್ದ ಬೆರಳೆಣಿಕೆಯಷ್ಟು
ಕಾರ್ಯಕರ್ತರನ್ನುದ್ದೇಶಿಸಿ ಸಿದ್ಧರಾಮಯ್ಯ ಹಾಗೂ ಇತರರು ಮಾತನಾಡಿದರು.

ನಮ್ಮ ಕ್ಷೇತ್ರದ ಜನರ ಕಬ್ಬಿನ ಬಾಕಿ ಹಣ ಕೊಟ್ಟು ಮಾತನಾಡಿ : ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ

https://pragati.taskdun.com/lakshmi-hebbalkar-lashed-out-at-former-minister-ramesh-jarakiholi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button