EducationKannada NewsLatest

ಮಳೆಯ ಆರ್ಭಟಕ್ಕೆ ನಲುಗಿದ ಮೂಡಲಗಿ, ಊಟ, ನಿದ್ದೆಯಿಲ್ಲದೆ ಜನರ ಪರದಾಟ

ಮಳೆಯ ಆರ್ಭಟಕ್ಕೆ ನಲುಗಿದ ಮೂಡಲಗಿ, ಊಟ, ನಿದ್ದೆಯಿಲ್ಲದೆ ಜನರ ಪರದಾಟ

ಪ್ರಗತಿವಾಹಿನಿ ಸುದ್ದಿ – ಮೂಡಲಗಿ : ಮಳೆಯ ಆರ್ಭಟಕ್ಕೆ ಅಕ್ಷರಶಹ ನಲುಗಿದ ಮೂಡಲಗಿ ತಾಲೂಕಿನ ನದಿ ತೀರದ ಗ್ರಾಮಗಳ ಜನತೆಗೆ ಸರಿಯಾದ ಆಹಾರ ಸಿಗದೆ, ದನಕರುಗಳಿಗೆ ಮೇವಿನ ಕೊರತೆಯ ನಡುವೆ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಯ ರುದ್ರ ನರ್ತನದಲ್ಲಿ ವಡೇರಟ್ಟಿ, ಪುಲಗಡ್ಡಿ, ಮಸಗುಪ್ಪಿ, ಧರ್ಮಟ್ಟಿ, ಪಟಗುಂದಿ, ಸುಣಧೋಳಿ, ಭೈರಟ್ಟಿ, ಹುಣಶ್ಯಾಳ ಪಿ.ವಾಯ್, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಕಮಲದಿನ್ನಿ, ರಂಗಾಪೂರ, ಮುನ್ಯಾಳ ಗ್ರಾಮದ ಜನತೆ ಜಲಾವೃತದಿಂದ, ಕೆಲವರು ಸಂಬಂಧಿಕರ ಮನೆಗೆ ನಡೆದರೆ, ಇನ್ನು ಕೆಲವರು ಎತ್ತರ ಪ್ರದೇಶದಲ್ಲಿ ಉಳಿದ್ದಾರೆ, ಬಡ ಜನತೆ ತಮ್ಮ ದನ ಕರುಗಳೊಂದಿಗೆ ನಿರಾಶ್ರಿತ ಗಂಜಿ ಕೇಂದ್ರದಲ್ಲಿ ಕಾಲ ಕಳೆಯುತ್ತಿದ್ದಾರೆ.

ಸಂತ್ರಸ್ಥರು ಕಡು ಬಡವರಾಗಿದ್ದು ಗಂಜಿ ಕೇಂದ್ರಗಳನ್ನೆ ಅವಲಂಬಿಸಬೇಕಾಗಿದೆ, ಸರಕಾರಿ ಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದ ತಾಲೂಕು ಆಡಳಿತ ಅಲ್ಲಿಯ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡದೆ, ಸಾಂಕ್ರಾಮಿಕ ರೋಗದ ಭಯದಲ್ಲಿ ಜೀವಿಸುವಂತಾಗಿದೆ.

ಹುಣಶ್ಯಾಳ ಪಿ.ವಾಯ್, ಹಳೇ ಢವಳೇಶ್ವರ, ರಂಗಾಪೂರ, ಕಮಲದಿನ್ನಿ, ಪಟ್ಟಗುಂದಿ, ಮುಸಗುಪ್ಪಿ, ಪುಲಗಡ್ಡಿ ಗ್ರಾಮವು ಸಂಪೂರ್ಣ ಜಲಾವೃತ್ತವಾಗಿ ನಡುಗಡ್ಡೆಯಾಗಿ ಮಾರ್ಪಾಡಾಗಿದೆ. ಹುಣಶ್ಯಾಳ ಗ್ರಾಮದಲ್ಲಿ ಸುಮಾರು ನೂರಾರು ಜನತೆ ಮನೆಯ ಮೇಲೆಯೇ ಆಶ್ರಯ ಪಡೆದಿದ್ದಾರೆ.

The rains in Mudalagi have been disruptive to life 2

ಮುಂಜಾನೆಯಿಂದ ಅಧಿಕಾರಿಗಳು ಅಪಾಯದ ಅಂಚಿನಲ್ಲಿರುವವರನ್ನು ರಕ್ಷಿಸಲು ಬ್ಯಾಟರಿ ಚಾಲಿತ ಬೋಟ್ ಬರುತ್ತದೆ ಎಂದು ಹೇಳುತ್ತಾ ಬರುತ್ತಿದ್ದಾರೆ, ವಿನಹ ಸಂಜೆ 7 ಗಂಟೆಯಾದರೂ ಬೋಟಿನ ಸುಳಿವಿಲ್ಲ.
ತಾಲೂಕು ಆಡಳಿತದಿಂದ ಪ್ರಾರಂಭಿಸಿದ ಗಂಜಿ ಕೇಂದ್ರದಲ್ಲಿ ಕುಡಿಯುವ ನೀರಿಗಾಗಿ ಪರದಾಡಿದರೆ, ಕೆಲವು ಗ್ರಾಮಗಳಲ್ಲಿ ಮೊದಲು ದನಗಳಿಗೆ ಮೇವು ನೀಡಿ ಎಂದು ತಹಶೀಲ್ದಾರರ ಬಳಿ ಅಂಗಲಾಚಿರುವುದು ಕಂಡು ಬಂದಿದೆ.

ಸಾರ್ವಜನಿಕರ ಸಹಾಯ : ಮಳೆಯಿಂದ ಅನಾಹುತಕ್ಕೆ ಒಳಗಾಗಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಅದೆ ಗ್ರಾಮಗಳ ಜನರು ಹಾಲು, ಹಣ್ಣು, ಬಿಸ್ಕಿತ್, ಅನ್ನ ಸಾಂಬಾರ ಗಳನ್ನು ವಿತರಿಸಿ ಮಾನವೀಯತೆ ಮೆರೆಯತ್ತಿದ್ದಾರೆ,

ಮೂಡಲಗಿಯ ಚಂದ್ರಕಾಂತ ಭೋಂದರ ಅವರು ಪಟಗುಂದಿ ಗ್ರಾಮದ ಇಟ್ಟಪ್ಪಗುಡಿ ತೋಟದಲ್ಲಿ ನಿರ್ಮಾಣವಾದ ಗಂಜಿ ಕೇಂದ್ರಕ್ಕೆ ನೂರಾರು ಜನರಿಗೆ ಬಿಸಿಯಾದ ಅನ್ನ ಮತ್ತು ಸಾಂಬಾರ್ ನೀಡಿದರು,

ನಗರದ ಮಾಜಿ ಸೈನಿಕ ಶಂಕರ ತುಕ್ಕನ್ನವರ ಅವರ ಕರುನಾಡ ಸೈನಿಕ ಕೇಂದ್ರದ ಶಾಲೆಯ 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ವಿವಿಧ ಕಡೆ ಜಲಾವೃತಗೊಂಡ ಜನರನ್ನು ಗಂಜಿ ಕೇಂದ್ರಕ್ಕೆ ಮತ್ತು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಶ್ರಮಿಸಿದರು.

The rains in Mudalagi have been disruptive to life 1

ಜನ ಸಾಗರ : ಮೂಡಲಗಿ ನಗರ ಸೇರಿದಂತೆ ವಿವಿಧ ಗ್ರಾಮಗಳ ಜನತೆ ಜಲಾವೃತಗೊಂಡ ಪಟಗುಂದಿ ಮತ್ತು ಸುಣದೋಳಿ ಭಾಗದ ಪ್ರದೇಶವನ್ನು ವಿಕ್ಷೀಸಲು ತಂಡೊಪ ತಂಡವಾಗಿ ಸಾಗವುದು ಸರ್ವೇಸಾಮಾನ್ಯವಾಗಿದೆ.

ಹದಿಗೆಟ್ಟ ರಸ್ಥೆ : ಮೂಡಲಗಿ-ಸುಣಧೋಳಿ ರಸ್ತೆ ಹದ್ದಗೆಟ್ಟು, ಹಾಳಾಗಿ ಕೆಸರಿನಿಂದ ಕೂಡಿ ರಸ್ತೆಯಲ್ಲಿ ಜನರು ತಮ್ಮ ಪ್ರಾಣವನ್ನು ಕೈಲಿ ಹಿಡಿದುಕೊಂಡು ಸಾಗುತ್ತಿದ್ದಾರೆ. ಸಂಚಾರ ದಟ್ಟಣೆಯಾಗಿದೆ, ಕೆಲವು ಕಡೆ ನೀರಿನ ಸಮೀಪವೆ ಸಾರ್ವಜನಿಕರು ಹೋದರು, ಅಲ್ಲಿ ಅಪಾಯವನ್ನು ತಿಳಿಸಲು ಯಾವದೇ ಪೋಲಿಸ್ ಅಧಿಕಾರಿಗಳು ಇರದೆ ಇದ್ದ ಸನ್ನಿವೇಶ ಕಂಡು ಬಂದಿದೆ. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button