Kannada NewsKarnataka NewsLatest
ಸೈನಿಕರ, ಅವರ ಕುಟುಂಬದ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ – ಲಕ್ಷ್ಮಿ ಹೆಬ್ಬಾಳಕರ್
ಸೈನಿಕರಿಗೆ ದೇಶವೇ ಋಣಿಯಾಗಿರಬೇಕು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಕ್ಷೇತ್ರದ ಮುತ್ನಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಮಾಜಿ ಸೈನಿಕರ ಸಂಘ (ರಿ)ವನ್ನು ಸೋಮವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಉದ್ಘಾಟಿಸಿದರು.
ದೇಶ ಸುಭದ್ರ ಸ್ಥಿತಿಯಲ್ಲಿರುವುದಕ್ಕೆ ಸೈನಿಕರೇ ಕಾರಣರಾಗಿದ್ದು, ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಬಂಧು-ಬಳಗವನ್ನೆಲ್ಲ ಬಿಟ್ಟು ದೇಶದ ಗಡಿಭಾಗಗಳಲ್ಲಿ ಕರ್ತವ್ಯ ನಿರತರಾಗಿರುವ ಸೈನಿಕರಿಗೆ ಹಾಗೂ ಕರ್ತವ್ಯದಿಂದ ನಿವೃತ್ತಿಯಾಗಿರುವ ಎಲ್ಲ ಸೈನಿಕರಿಗೆ ನಾವೆಲ್ಲ ಋಣಿಯಾಗಿರಬೇಕು ಎಂದು ಹೆಬ್ಬಾಳಕರ್ ಹೇಳಿದರು.
ದೇಶದ ಹಾಗೂ ದೇಶದ ಜನರ ಸುರಕ್ಷತೆಗಾಗಿ ಸೈನಿಕರು ಮತ್ತು ಅವರ ಕುಟುಂಬದ ತ್ಯಾಗ ದೊಡ್ಡದು. ಪ್ರತಿ ದಿನ ತಾವು ಕಣ್ಣೀರು ಹಾಕುತ್ತಿದ್ದರೂ ಜನರ ಮುಖದಲ್ಲಿ ಖುಷಿ ಮೂಡುವಂತೆ ಮಾಡುತ್ತಾರೆ. ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರಿಗೆ ನಮ್ಮಿಂದ ಸಾಧ್ಯವಾದ ಎಲ್ಲ ನೆರವು ನೀಡೋಣ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುತ್ನಾಳ ಕೇದಾರಪೀಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮಾಜಿ ಸೈನಿಕರು, ಸಂಘದ ಅಧ್ಯಕ್ಷರಾದ ತಮ್ಮಣ್ಣ ಚ ದೇವಲತ್ತಿ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವಸದಸ್ಯರು, ಪಿಕೆಪಿಎಸ್ ನ ಎಲ್ಲ ಪದಾಧಿಕಾರಿಗಳು, ಶಿವಬಸಪ್ಪ ದೇವಲತ್ತಿ, ಪದ್ಮಪ್ಪ ಹುಲಮನಿ, ದೇಮನಗೌಡ ಹುಬ್ಬಳ್ಳಿ, ರುದ್ರಗೌಡ ಪಾಟೀಲ, ಅಡಿವೆಪ್ಪಗೌಡ ಪಾಟೀಲ, ಪಾರಿಸ್ ಪಾರಿಶ್ವಾಡ್, ಬಸವರಾಜ ಹುಬ್ಬಳ್ಳಿ, ಗ್ರಾಮದ ಜನರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ