ಪ್ರವಾಹ ನೀರಲ್ಲೇ ನಿಂತು ಧ್ವಜಾರೋಹಣ ಮಾಡಿದ ಶಾಲಾ ಸಿಬ್ಬಂದಿ
ಕೃಷ್ಣಾ ನದಿ ಪ್ರವಾಹ, 4 ಅಡಿ ನೀರಲ್ಲೆ ನಿಂತು ಹಲ್ಯಾಳ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ ದ್ವಜಾರೋಹಣ.
ಪ್ರಗತಿವಾಹಿನಿ ಸುದ್ದಿ – ಅಥಣಿ – ಪ್ರವಾಹದ ನೀರನ್ನು ಲೆಕ್ಕಿಸದೆ ತೆಪ್ಪದಲ್ಲಿ ಹೋಗಿ 4 ಅಡಿ ನೀರಿನಲ್ಲೆ ನಿಂತು 73ನೇ ಸ್ವಾತಂತ್ರೋತ್ಸವ ಆಚರಣೆ ಮಾಡಿದ ಹಲ್ಯಾಳ ಗ್ರಾಮದ ಗುರು ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಸಿಬ್ಬಂದಿಗಳು.
ಅಥಣಿ ತಾಲೂಕಿನ 24 ಗ್ರಾಮಗಳು ಕೃಷ್ಣಾ ನದಿ ಪ್ರವಾಹದಿಂದ ಭಾದಿತವಾಗಿದ್ದು ಅದರಲ್ಲಿ ಹಲ್ಯಾಳ ಗ್ರಾಮದ ಪ್ರಾಥಮಿಕ ಶಾಲೆಯ ಸಿಬ್ಬಂದಿಗಳು ಹರಕಲು ತೆಪ್ಪದ ಮೂಲಕ 1 ಕಿಮಿ ನೀರಿನಲ್ಲಿ ಸಾಗಿ ನೀರಿನಲ್ಲೇ ನಿಂತು ದ್ವಜಾರೋಹಣ ಮಾಡಿದರು. ಅಧ್ಯಕ್ಷ ಯಲಗೌಡ ಪಾಟೀಲ, ಶಾಲೆಯ ಮುಖ್ಯ ಶಿಕ್ಷಕ ಎಸ್ ಆರ್ ಗುಮಚಿ, ಎಸ್ ಡಿ ಪಾಟೀಲ , ಸಿಬ್ಬಂದಿಗಳಾದ ವಿನಾಯಕ ಆಸಂಗಿ, ಸುರೇಶ ಹಳಿಂಗಳಿ, ಸುರೇಶ ರೋಗಿ, ಮಹಾಂತೇಶ ಪಾಟೀಲ, ಅರವಿಂದ ಭಂಡಾರೆ ಸೇರಿ ಹಲವರು ಉಪಸ್ಥಿತರಿದ್ದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ