Latest

ದೀಪಾವಳಿಯ ರಹಸ್ಯ

ದೀಪಾವಳಿಯ ಆಧ್ಯಾತ್ಮಿಕ ರಹಸ್ಯ

 ವಿಶ್ವಾಸ ಸೋಹೋನಿ

ದೀಪಾವಳಿ ವಿಶ್ವದಾದ್ಯಂತ ಅತಿ ದೊಡ್ಡ ಹಬ್ಬವಾಗಿದ್ದು, ಹಿಂದೂ, ಜೈನ ,ಬುದ್ಧ ಮತ್ತು ಸಿಖ್ ಧರ್ಮಗಳಲ್ಲಿ ಈ ಹಬ್ಬಕ್ಕೆ ಮಹತ್ವ ಇದೆ. ಭಾರತ, ನೇಪಾಳ, ಶ್ರೀಲಂಕಾ, ಮಿಯಮ್ಮಾರ, ಮಾರಿಶಿಯಸ್, ಗಯಾನಾ, ಟ್ರಿನಿಡಾಡ್, ಸೂರಿನಾಮ್, ಮಲೇಶಿಯ, ಸಿಂಗಾಪುರ ಮತ್ತು ಫಿಜಿ ದೇಶಗಳಲ್ಲಿ ರಾಷ್ಡ್ರೀಯ ಮಹತ್ವ ಕಲ್ಪಿಸಲಾಗಿದ್ದು ಜನರು ದೀಪಾವಳಿಯು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನೇಪಾಳದಲ್ಲಿ ಹೊಸ ವರ್ಷ ದೀಪಾವಳಿಗೆ ಶುರುವಾಗುತ್ತದೆ.

ದೀಪಾವಳಿ ದೀಪಗಳ ಹಬ್ಬ ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ. ಅಮಾವಸ್ಯೆಯ ನಿಖರ ದಿನಾಂಕ ಬೇರೆ ಬೇರೆ ದಿನಗಳಂದು ಆಗಬಹುದು. ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆಯಾಗಬಹುದು.

ಜೈನ ಧರ್ಮದಲ್ಲಿ ದೀಪಾವಳಿಯು ದೇವದಿವಾಳಿ ಎಂದು ಹೆಳುತ್ತಾರೆ. ಈ ದಿನ ಕೋನೆಯ ತಿರ್ಥಂಕಾರನಾದ ಮಹಾವಿರ ಬಿಹಾರ ರಾಜ್ಯದ ಪಾವಪುರಿ ಎಂಬ ಸ್ಥಳದಲ್ಲಿ (೧೫ ಆಕ್ಟೊಬರ ಕ್ರಿ.ಪು.೫೨೭) ನಿರ್ವಾಣ ಅವಸ್ಥೆಗೆ ಹೊದನು. ಕ್ರಿ.ಪೂ. ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಾಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಞಾನಜ್ಯೋತಿಯ ಸಂಕೇತವಾಗಿ ೧೬ ಗಣ-ಚಕ್ರವರ್ತಿ, ೯ ಮಲ್ಲ ಮತ್ತು ೯ ಲಿಚ್ಚಾವಿ ಅವರು ತಮ್ಮ ಗಣರಾಜ್ಯದಲ್ಲಿ ದೀಪ ಬೆಳಗಿಸಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭದ ದಿನ. ಆದರೆ ಆಚಾರ್ಯ ಬೆನಸೆನ್ ಬರೇದಿರುವ ಹರಿವಂಶ ಪುರಾಣದಲ್ಲಿ ದೀಪಾಲಿಕಯಾ (ದೀಪಾವಳಿ) ಬಗ್ಗೆ ಉಲ್ಲೆಖವಿದೆ. ದೀಪಾಲಿಕಯಾ ಎಂದರೆ ಪ್ರಕಾಶವು ದೇಹವನ್ನು ತ್ಯಜಿಸುವುದು.

ಸಿಕ್ಖ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ ಗ್ವಾಲಿಯರ‍್ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.

ಕಾರ್ತಿಕ ಅಮವಾಸ್ಯೆಗೆ ಭಾರತದ ಪ್ರತಿಯೊಂದು ಮನೆಯಲ್ಲಿ ದೀಪಗಳನ್ನು ಬೆಳಗಿಸಿ ಅಬಾಲ ವೃಧ್ದರೂ ಸಂತೋಷ ಪಡುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆ, ಗುಡಿ ಗುಂಡಾರಗಳನ್ನು ಶುಚಿ ಗೊಳಿಸಿ, ಬಣ್ಣಗಳಿಂದ ಶೃಂಗರಿಸುತ್ತಾರೆ. ದೀಪಾವಳಿ ಭಾರತೀಯರ ಒಂದು ದೊಡ್ಡ ಹಬ್ಬ. ‘ಅವಳಿ’ ಎಂದರೆ ಮಾಲೆ, ಸಾಲು ಎಂದರ್ಥ. ಹಬ್ಬದ ದೃಷ್ಟಿಯಿಂದ ನೋಡಿದರೆ ದೀಪಾವಳಿ ದೀಪಗಳ ಸಾಲಿನಂತೆ ಹಬ್ಬಗಳ ಸಾಲೂ ಹೌದು. ನೀರು ತುಂಬುವ ಹಬ್ಬದಿಂದ ಆರಂಭವಾಗಿ ನರಕಚತುರ್ದಶಿ, ಧನತೇರಸ, ಬಲಿಪಾಡ್ಯಮಿ, ಭಾವನಬಿದಿಗೆ, ಅಕ್ಕನ ತದಿಗೆ, ಪಂಚಮಿಯ ವರೆಗೆಪ್ರತಿದಿನವೂ ಹಬ್ಬ. ವ್ಯಾಪಾರಸ್ಥರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡುತ್ತಾರೆ. ಧನ ದೇವತೆ ‘ಲಕ್ಷ್ಮೀ’ ಯನ್ನು ಇದೇ ಸಮಯದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ.


ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೆಷ ಮಹತ್ವ ಇದೆ. ದೀಪದಾನವು ಈ ಹಬ್ಬದಲ್ಲಿ ಮಾಡುವ ವಾಡಿಕೆ ಇದೆ. ಸ್ಥೂಲ ದೀಪದ ಜೊತೆಗೆ ಆತ್ಮಜೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣ ವಾಗುತ್ತದೆ. ಪ್ರತಿ ಒಂದು ಹಬ್ಬಕ್ಕೆ ತನ್ನದೇ ಆದ ಹಿನ್ನಲೆ ಇದ್ದು, ಅಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವುದರ ಜೊತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಕೊಳ್ಳುಬೇಕು ಎನ್ನುವುದನ್ನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹೇಳಲಾಗುತ್ತದೆ. ಅeನದ ಕತ್ತಲೆಯಿಂದ ಸತ್ಯ eನದ ಬೆಳಕವನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ. ಭಗವಂತನ ತಿಳಿವಳಿಕೆಯ ಪ್ರಕಾರ ದೀಪಾವಳಿ ಎಂದರೆ ಸಮೀಪತೆ, ಸಂಪನ್ನತೆ, ಮತ್ತು ಸಂಪೂರ್ಣತೆ. ದೀಪ ಮತ್ತೊಂದು ದೀಪದ ಹತ್ತಿರ ಬಂದಾಗ ಅದಕ್ಕೆ ದೀಪಮಾಲೆ ಎಂದು ಕರೆಯಲಾಗುತ್ತದೆ. ಸ್ನೇಹವೆಂದರೆ ಸಮೀಪತೆ. ಸಂಪನ್ನತೆಯ ಸ್ವರೂಪವೇ ಧನದೇವಿ ಮತ್ತು ಧನ್ಯದೇವಿ. ಸ್ಥೂಲ ಮತ್ತು ಸೂಕ್ಷ್ಮ ಪ್ರಕಾರದ ಧನದಿಂದ ಸಂಪನ್ನಳಾದವಳೇ ಧನದೇವಿ ಮತ್ತು ಧನ್ಯತೆಯಿಂದ ಸಂಪನ್ನಳಾದವಳೇ ಧನ್ಯದೇವಿ. ಸಂಪೂರ್ಣತೆ ಅಂದರೆ ಸದಾ ಜಾಗೃತ ಜ್ಯೋತಿ ನಂದಾದೀಪ. ಈ ಮೂರು ವಿಶೇಷತೆಗಳಿಂದ ಕೂಡಿದ ಮಹಾನ್ ಹಬ್ಬವೇ ದೀಪಾವಳಿ. ಚೈತನ್ಯ ಅವಿನಾಶಿ ಆತ್ಮ-ದೀಪಗಳ ಮಾಲೀಕ ದೀಪರಾಜ ಪರಮಾತ್ಮನಾಗಿದ್ದಾನೆ. ದೀಪರಾಜನ ಜೊತೆ ಪ್ರೀತಿ ಮಾಡುವ ನಾವೆಲ್ಲಾ ಆತ್ಮ-ದೀಪರಾಣಿಯರು. ದೀಪವು ಜ್ಯೋತಿಯನ್ನು ಅವಲಂಬಿಸಿದೆ. ದೀಪರಾಜನ ಜೊತೆ ದೀಪಗಳ ಗಾಯನವು ಇದೆ. ದೀಪಮಾಲೆ ಬೆಳಗಿಸುವಾಗ ಮೊದಲು ಒಂದು ದೀಪ ಹಚ್ಚಿ ಆ ದೀಪದಿಂದ ಅನೇಕ ದೀಪಗಳನ್ನು ಬೆಳಗಿಸುವರು. ಆ ದಿನ ದೀಪ-ದಿವಸ ಎಂದು ಹೇಳದೇ ದೀಪಾವಳಿ ಎಂದು ಕರೆಯುತ್ತಾರೆ. ಲಕ್ಷ್ಮಿಯನ್ನು ಆಹ್ವಾನಿಸಿ ಪೂಜಿಸುವುದು ಒಂದು ಸಂಪ್ರದಾಯವಾಗಿದೆ. ಲಕ್ಷ್ಮಿ ಅಂದರೆ ದಾತ ಸ್ವರೂಪ ಮತ್ತು ಧನದೇವತೆ. ದೀಪಾವಳಿ ಹಳೆಲೆಕ್ಕವನ್ನು ಸಮಾಪ್ತಿ ಮಾಡುವ ಹಬ್ಬ. ಹಳೆಯದನ್ನು ಮರೆತು, ಹೊಸ ಜನ್ಮ, ನೂತನ ಸಂಬಂಧ, ಹೊಸ ಯುಗ, ಹೊಸ ಉಡುಪು, ಹೊಸ ಶರೀರ, ಎಲ್ಲವೂ ಸತಯುಗದ ಲಕ್ಷಣವಾಗಿವೆ. ದೇವಾತ್ಮರಾದ ನಂತರ ಹೊಸ ವಸ್ತ್ರ ಅಂದರೆ ಕಂಚನ ಕಾಯ ಸಿಗುತ್ತದೆ. ಕಲಿಯುಗದಲ್ಲಿ ಹಬ್ಬದ ಸಮಯದಲ್ಲಿ ಮಾತ್ರ ಖುಷಿಯಿಂದ ಇರುತ್ತಾರೆ, ಆದರೆ ಸತ್ಯಯುಗದಲ್ಲಿ ಸದಾಕಾಲ ಖುಷಿ ಇರುತ್ತದೆ. ದೀಪವು ಅವಿನಾಶಿ ಸದಾಕಾಲ ಉರಿಯಬೇಕೆಂದು ವಿಶೇಷ ಗಮನ ಕೊಡುತ್ತಾರೆ. ದೀಪಕ್ಕೆ ಸದಾ ಎಣ್ಣೆ ಹಾಕುತ್ತಾರೆ. ಲಕ್ಷ್ಮಿ-ಧನದೇವತೆಯ ಪೂಜೆ ಮಾಡಿ ಸಂಪತ್ತು ವೃದ್ಧಿಯಾಗಲಿ ಎಂದು ಬೇಡುತ್ತಾರೆ. ಆದರೆ ಸ್ವಾರ್ಥದಿಂದ ಭಾವನೆಗಳು ಬದಲಾಗಿ ರೀತಿ-ನೀತಿಗಳು ಇಲ್ಲವಾಗಿವೆ. ಆದ್ದರಿಂದ ಲಕ್ಷ್ಮಿ ಹತ್ತಿರ ಬರುತ್ತಿಲ್ಲ; ಹಣ ಬಂದರೂ ಕಪ್ಪು ಹಣ ಬರುತ್ತದೆ. ದೈವಿ ಧನ ಬಾರದೇ ಅಸುರಿ ಹಣ ಬರುತ್ತದೆ. ದೀಪಾವಳಿ ಎಂದರೆ ಹಳೆ ಖಾತೆಯನ್ನು ಸಮಾಪ್ತಿ ಮಾಡುವ ದಿನ. ಹಳೆಯ ಸಂಸ್ಕಾರ, ಸ್ವಭಾವ, ಹಳೆಯ ನಡೆ-ನುಡಿ ಎಲ್ಲವೂ ರಾವಣನ ಪ್ರತೀಕವಾದ ವಿಕಾರಿಗುಣಗಳ ಸಾಲವಾಗಿದೆ. ಆದ್ದರಿಂದ ಈ ಹಳೆ ಸಾಲವನ್ನು ದೃಢ ಸಂಕಲ್ಪದಿಂದ ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. ದೃಢ ಸಂಕಲ್ಪದ ಬೆಂಕಿಕಡ್ಡಿಯಿಂದ ಹಳೆಯದೆಲ್ಲವನ್ನೂ ಸುಟ್ಟು ಹಾಕಬೇಕಾಗಿದೆ. ದೀಪಾವಳಿಯ ದಿನ ತನು-ಮನದೊಂದಿಗೆ ಎಲ್ಲ ತರಹದ ಸ್ವಚ್ಛತೆಯನ್ನು ಮಾಡಿಕೊಳ್ಳಬೇಕಾಗಿದೆ.


ದೀಪಾವಳಿಯ ‘ಬಲಿ’ ರಾಜಾ ಮತ್ತು ನರಕಾಸುರನ ಎರಡು ಕಥೆಗಳು ಲಾಕ್ಷಣಿಕ ಭಾಷೆಯ ರೂಪದಲ್ಲಿ ವರ್ಣನೆ ಮಾಡಲಾಗಿದೆ. ಈಶ್ವರೀಯ ಜ್ಞಾನದ ದೃಷ್ಟಿಯಲ್ಲಿ ನೊಡಿದಾಗ ‘ನರಕಾಸುರ’ ಮಾಯೆ ಅಥವಾ ಮನೋವಿಕಾರಗಳ ರೂಪವಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಹಾಗೂ ಅಹಂಕಾರಗಳು ಆಸುರಿ ಲಕ್ಷಣಗಳು ಮತ್ತು ನರಕದ ದ್ವಾರ ಆಗಿವೆ. ಈ ವಿಕಾರಗಳನ್ನು ಜಯಿಸುವುದು ಎಂದರೆ ‘ಬಲಿ’ ಕೊಡುವುದು ಎಂದು ಹೇಳಲಾಗುತ್ತದೆ. ವಿಶ್ವದ ಇತಿಹಾಸದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೆತಾಯುಗ, ದ್ವಾಪರಯುಗ, ಮತ್ತು ಕಲಿಯುಗ. ಈ ಕಲಿಯುಗದ ಅಂತಿಮ ಸಮಯವು ಪಂಚವಿಕಾರ ಮತ್ತು ಆಸುರಿಗುಣಗಳ ಸಾಮ್ರಾಜ್ಯದ ಸಮಯವಾಗಿದೆ. ಪ್ರತಿಯೊಬ್ಬ ನರ-ನಾರಿಯರ ಮನಸ್ಸಿನ ಮೇಲೆ ವಿಕಾರಗಳ ರಾಜ್ಯ ಇದೆ. ಇದಕ್ಕೆ ‘ನರಕಾಸುರ” ಅಥವಾ ‘ರಾಜಾಬಲಿಯ” ಅಧಿಪತ್ಯ ಎಂದು ಹೇಳಲಾಗುತ್ತದೆ. ಭಾರತವು ಸತ್ಯಯುಗದಲ್ಲಿ ಸ್ವರ್ಗವಾಗಿತ್ತು ಅಲ್ಲಿನ ಮನುಷ್ಯರೆಲ್ಲರು ದೇವಿ-ದೇವತೆಗಳಾಗಿದ್ದರು. ಅವರೇ ಜನ್ಮ ಮರಣದ ಚಕ್ರದಲ್ಲಿ ಬರುತ್ತಾ ಈಗ ನರಕದಲ್ಲಿ ‘ನರಕಾಸುರ’ ಅಥವಾ ‘ಬಲಿ’ಯ ಅಧೀನರಾಗಿದ್ದಾರೆ. ಆತ್ಮ ಜ್ಞಾನ ಮತ್ತು ನಿರಾಕಾರ ಶಿವನ ಧ್ಯಾನದಿಂದ ನಾವು ಪುನಃ ಬಂಧನಮುಕ್ತರಾಗಲು ಸಾಧ್ಯವಿದೆ.

ಆತ್ಮ ಜ್ಞಾನ ಎಂದರೆ ಆತ್ಮದೀಪವನ್ನು ಬೆಳಗಿಸುವುದು. ‘ನಾನು ಒಂದು ಜ್ಯೋತಿ, ಜಾತಿಇಲ್ಲದ ಅತಿಸೂಕ್ಷ್ಮ ಆತ್ಮಜ್ಯೋತಿ. ಶರೀರದ ಹಣೆಯ ಮಧ್ಯದಲ್ಲಿ ಹೊಳೆಯುವ ಚ್ಯೆತನ್ಯ ಜ್ಯೋತಿ, ದೇಹ ಎಂಬ ರಥದ ಸಾರಥಿ ನಾನು ಆತ್ಮ. ದೇಹದ ಮೂಲಕ ಈ ಸೃಷ್ಟಿ ನಾಟಕದಲ್ಲಿ ಪಾತ್ರ ಅಭಿನಯಿಸುವ ಪಾತ್ರಧಾರಿ ನಾನು. ಈ ರೀತಿ ನಿತ್ಯಚಿಂತನೆ ಮಾಡಬೇಕು. ಇದನ್ನೇ ಆತ್ಮಾನುಭೂತಿ ಎಂದು ಕರೆಯಲಾಗುತ್ತದೆ. ಆತ್ಮಜ್ಯೋತಿಯನ್ನು ಬೆಳಗಿಸಲು eನಘೃತ ಬೇಕು. ಎರಡನೆದಾಗಿ, ಸರ್ವ ಆತ್ಮರ ತಂದೆಯಾದ ಪರಮಜ್ಯೋತಿಯ ಪರಿಚಯ ಅತಿ ಅವಶ್ಯಕ. ಪರಮಾತ್ಮನು ನಿರಾಕಾರ, ಅಯೋನಿಜ, ಅಭೊಕ್ತ, ಅಜನ್ಮ, ಅವ್ಯಕ್ತ ಅಶರೀರಿ, ಅವಿಭಾಜ್ಯ, ಅಮರ, ಅವಿನಾಶಿ, ಸರ್ವಶ್ರೇಷ್ಠನಾದ, ಶಿವನು, ಅವನೇ ಅಲ್ಲಾ, ಅವನೆ ಈಶ್ವರ, ಅವನೇ ಗಾಡ್, ಓಂಕಾರನು, ದೇವನೊಬ್ಬ, ನಾಮ ಹಲವು, ಭಾವ ಒಂದೇ, ಭಾಷೆ ಹಲವು, ನಮ್ಮಲ್ಲೇಕೆ ಭೇದವೂ. ನಾನು ಹಿಂದು, ನಾನು ಮುಸಲ್ಮಾನ, ಕ್ರೈಸ್ತರೆಂಬ ಭೇದವೂ. ನಾಳೆ ನಾಡನಾಳುವಂತಾ ಮಕ್ಕಳಲ್ಲಿ ಜಗಳವೂ. ಬ್ರಹ್ಮ, ವಿಷ್ಣು, ಬಸವ, ಏಸು, ನಾನಕ ಪೈಗಂಬರೆಲ್ಲ ಒಬ್ಬದೇವನ ಮಕ್ಕಳು. ಸರ್ವಧರ್ಮವನ್ನು ಬಿಟ್ಟು, ದೇಹ ಧರ್ಮವನ್ನು ಸುಟ್ಟು, ನಿರಾಕಾರ ಜೋತಿರ್ಬಿಂದು ತಂದೆ ಶಿವನ ನೆನೆಸಿದಾಗ ಮುಕ್ತಿ ಮತ್ತು ಜೀವನಮುಕ್ತಿಯು ಪ್ರಾಪ್ತವಾಗುವುದು. ಹೀಗೆ ನಾನು ಆತ್ಮಜ್ಯೋತಿಯಾಗಿ ಪರಮಜ್ಯೋತಿಯನ್ನು ನೆನಪು ಮಾಡುವುದಕ್ಕೆ ಸಹಜ ರಾಜಯೋಗವೆಂದು ಹೇಳುತ್ತಾರೆ.

ದೀಪಾವಳಿಯ ದಿನ ಪ್ರತಿಯೊಬ್ಬರು ತಮ್ಮ ಮನೆಗಳನ್ನು, ಸುಣ್ಣ ಬಣ್ಣಗಳಿಂದ ಶುಚಿಗೊಳಿಸಿ, ದೀಪಾಲಂಕಾರವನ್ನು ಮಾಡುತ್ತಾರೆ. ಅದರ ಜೊತೆಗೆ ಮನಸ್ಸಿನಲ್ಲಿ ಇರುವ ಅಮವಾಸ್ಯೆಯ ಪ್ರತೀಕವಾದ ಅಜ್ಞಾನ ಅಂಧಕಾರವನ್ನು ದೂರ ಮಾಡಲು ಅಂತರ ಮನದಲ್ಲಿ eನದ ಜ್ಯೋತಿಯನ್ನು ಬೆಳಗಿಸಬೇಕಾಗಿದೆ. ನಿರಾಕಾರನಾಗಿರುವ ಶಿವನ ಸಂಬಂಧದಿಂದ ಅಂದರೆ ರಾಜಯೋಗದಿಂದ ಅನೇಕ ಶಕ್ತಿಗಳ, ಸರ್ವಗುಣಗಳ ಪ್ರಾಪ್ತಿ ಆಗುತ್ತದೆ. ಆದ್ದರಿಂದಲೇ ಭಕ್ತರು ಭಗವಂತನ ಮುಂದೆ ‘ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ’ ಎಂದು ಹಾಡುತ್ತಾರೆ. ದೀಪ ದಾನದ ಅರ್ಥವು eನದಾನವೇ ಆಗಿದೆ. ದೀಪಾವಳಿಯ ದಿನದಂದು ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಸಿಹಿಯನ್ನು ಹಂಚುತ್ತಾರೆ, ಹಳೆ ಖಾತೆಯನ್ನು ಸಮಾಪ್ತ ಮಾಡಿ ಹೊಸ ಖಾತೆಯನ್ನು ಶುರು ಮಾಡುತ್ತಾರೆ. ಇದರ ಜೊತೆ ಜೊತೆಗೆ ಹೊಸ ಭಾವ, ಮಧುರ ನುಡಿ, ಸ್ನೇಹ, ಪ್ರೀತಿಯ ಅವಶ್ಯಕತೆ ಇದೆ. ಹಳೆ ಕರ್ಮದ ಖಾತೆಯನ್ನು ರಾಜಯೋಗದ ತಪಸ್ಸಿನ ಬಲದಿಂದ ಸಮಾಪ್ತಿ ಮಾಡಬೇಕಾಗಿದೆ. ನಿರಾಕಾರ ಪರಮಜ್ಯೋತಿ ಪರಮಾತ್ಮನು ಪುನಃ ಪವಿತ್ರತೆ, ಸುಖ ಶಾಂತಿ ಸಮೃದ್ಧಿಯ ‘ರಾಮರಾಜ್ಯ’ ಸ್ಥಾಪನೆ ಮಾಡುತ್ತಿರುವ ಸಂಕೇತವು ದೀಪಾವಳಿ.

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದ:

ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ

ದೀಪ ಜ್ಯೋತಿ: ಪರಬ್ರಹ್ಮ ದೀಪ ಜ್ಯೋತಿರ್ಜನರ್ಧನ:

ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೆ

ನಾವು ಹಚ್ಚುವ ದೀಪ ಬೇಳಕಿನಿಂದ ನಮ್ಮೋಳಗಿನ ಅಜ್ಷಾನ ಅವಿವೇಕ, ದುಷ್ಟ ಗುಣಗಳು ನಾಶವಾಗಿ, ಸದ್ಗುಣಗಳು ಹೆಚ್ಚಲಿ, ಎಲ್ಲಡೆ ಶಾಂತಿ, ಸಮೃದ್ಧಿ ನೆಲಸಲಿ,ಎಲ್ಲರಿಗೂ ಮಂಗಳವಾಗಲಿ, ದೀಪದಲ್ಲಿ ನಮಗೆ ದೇವರ ರೂಪ ಕಾಣಿಸಲಿ ಎಂದು ಆಶಿಸುತ್ತಾ ದೀಪಾವಳಿಯ ದೀಪ ಹಚ್ಚಬೇಕು.

ಹಾಗಾದರೆ ಬನ್ನಿ ನಾವು ಈ ವರ್ಷದ ದೀಪಾವಳಿಯನ್ನು ಆತ್ಮದೀಪವನ್ನು ಬೆಳಗಿಸಿ, ಈಶ್ವರಾನುಭೂತಿಯನ್ನು ಮಾಡುತ್ತಾ ಅನ್ಯರಿಗೂ ಜ್ಞಾನದೀಪವನ್ನು ದಾನ ಮಾಡಿ ಆಚರಿಸೊಣ.

 

(ಲೇಖಕರು – ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್)

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button