ಪ್ರಗತಿವಾಹಿನಿ ಸುದ್ದಿ, ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಶ್ರೀ ಕ್ಷೇತ್ರದಲ್ಲಿ ಇಂದು ಬೆಳಗ್ಗೆ ಶ್ರೀ ಕಟ್ಟಿ ಬಸವೇಶ್ವರ ದೇವಾಲಯದ ಶಿವಲಿಂಗಕ್ಕೆ ಸೂರ್ಯ ಕಿರಣಗಳ ಸಿಂಚನವಾಗುವ ಮೂಲಕ ಆಸ್ತಿಕರ ಅಧ್ಯಾತ್ಮಿಕ ಆಸಕ್ತಿ ಇಮ್ಮಡಿಗೊಳಿಸಿದೆ.
ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಈ ದೇಗುಲದ ಶಿವಲಿಂಗವನ್ನು ‘ಕಟ್ಟಿಲಿಂಗ’ ಎಂದೇ ಕರೆಯುತ್ತಾರೆ. ನಾನಾ ಕಡೆಗಳ ಭಕ್ತಾದಿಗಳು ಈ ದೇಗುಲಕ್ಕೆ ನಿತ್ಯ ಭೇಟಿ ನೀಡಿ ಶಿವಸಾನ್ನಿಧ್ಯದಲ್ಲಿ ಮನಸ್ಸು ಶಾಂತಗೊಳಿಸಿಕೊಂಡು ತೆರಳುತ್ತಾರೆ.
ಇದರ ನಿರ್ಮಾಣವೇ ವಿಶೇಷ ಹಾಗೂ ವಿಶಿಷ್ಟವಾಗಿದ್ದು ಪುರಾತನ ವಾಸ್ತು ತಜ್ಞತೆ ಹಾಗೂ ಶಿಲ್ಪಿಗಳ ಕೈಚಳಕದ ಫಲವಾಗಿ ಪ್ರತಿ ವರ್ಷ ಯುಗಾದಿ ಅಮಾವಾಸ್ಯೆಗೆ ಇಲ್ಲಿನ ಶಿವಲಿಂಗ ಹಾಗೂ ನಂದಿ ಮೇಲೆ ಸೂರ್ಯನ ಬೆಳಕು ಚೆಲ್ಲುತ್ತದೆ.
ಈ ಬಾರಿಯ ಈ ದೃಶ್ಯವನ್ನು ಅಪಾರ ಸಂಖ್ಯೆಯ ಭಕ್ತಾದಿಗಳು ಕಣ್ತುಂಬಿಕೊಂಡಿದ್ದು ಜಾಲತಾಣಗಳಲ್ಲೂ ವೈರಲ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ