Kannada NewsKarnataka NewsLatest

ಠೇವಣಿದಾರರ ನಂಬಿಕೆ ಉಳಿಸಿಕೊಳ್ಳುವುದೇ ನಿಜವಾದ ಸಹಕಾರ ತತ್ವ -ಶಂಕರಗೌಡ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಠೇವಣಿದಾರರ ನಂಬಿಕೆ ಉಳಿಸಿಕೊಳ್ಳುವುದೇ ನಿಜವಾದ ಸಹಕಾರ ತತ್ವ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಸುವರ್ಣಲಕ್ಷಿ ಸಹಕಾರ ಸಂಘದ ಶಹಾಪುರ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ರಾಷ್ಟ್ರೀಯ ನಾಯಕರು ಸಹಕಾರ ಚಳವಳಿಯಿಂದ ಬೆಳೆದುಬಂದವರು. ಸಹಕಾರ ಕ್ಷೇತ್ರದಿಂದ ಮಾತ್ರ ರಾಷ್ಟ್ರದಲ್ಲಿ ಮಹಾನ್ ನಾಯಕರು ಜನಿಸುತ್ತಾರೆ. ಅಂತಹ ಪವಿತ್ರವಾದ ಕ್ಷೇತ್ರ ಇದು. ಇದರಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮುಖ್ಯ. ಅದೇ ನಿಜವಾದ ಯಶಸ್ಸಿನ ಮೂಲ ಕೂಡ ಎಂದು ಹೇಳಿದರು.

ಬೆಳಗಾವಿಯಲ್ಲಿ ಕೂಡ ಹಲವಾರು ಸಹಕಾರ ಸಂಘಗಳು ಹುಟ್ಟಿ ಬೆಳೆದಿವೆ. ಒಳ್ಳೆಯ ಕೆಲಸಗಳನ್ನೂ ಮಾಡಿವೆ. ಆದರೆ ಕೆಲವೇ ಕೆಲವು ಸಂಸ್ಥೆಗಳು ಜನರ ವಿಶ್ವಾಸ ಕೆಡಿಸಿವೆ. ಇದು ಪೂರ್ಣ ಸಹಕಾರ ಕ್ಷೇತ್ರದ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಹ ಸ್ಥಿತಿಗೆ ಕಾರಣವಾಗುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆ ಎಂದು ಶಂಕರಗೌಡ ಪಾಟೀಲ ಹೇಳಿದರು.

“ನಮ್ಮ ದೇಶದಲ್ಲಿ ನಾವು ಹೆಚ್ಚಿನ ಸಂಖ್ಯೆಯ ಯುವಕರನ್ನು ಹೊಂದಿದ್ದರೆ, ನಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ವ್ಯವಸ್ಥಿತ ರೀತಿಯಲ್ಲಿ ಬಳಸಿದರೆ ನಾವು ಖಂಡಿತವಾಗಿಯೂ ಚೀನಾವನ್ನು ಮೀರಿ ಹೋಗಬಹುದು” ಎಂದು ಎಂದು ಲೋಕಮಾನ್ಯ ಸೊಸೈಟಿಯ ಸ್ಥಾಪಕ ಅಧ್ಯಕ್ಷ  ಕಿರಣ್ ಠಾಕೂರ್ ಹೇಳಿದರು.

 ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಕೊಲ್ಹಾಪುರದ ರಾಜಬಾವು  ಪರದೇಸಿ   ಭಾಗವಹಿಸಿದ್ದರು. ಸಂಸ್ಥಾಪಕ ಮೋಹನ್ ಕಾರೇಕರ್   ಸ್ವಾಗತಿಸಿದರು.  ಅಧ್ಯಕ್ಷ ವಿಠ್ಠಲ್ ಶಿರೋಡ್ಕರ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಯನ್ನು ವಿವರಿಸಿದರು.

ಉಪಾಧ್ಯಕ್ಷ ಮತ್ತು ಸ್ಥಾಪಕ ವಿಜಯ್ ಸಾಂಬರೆಕರ್ ಅತಿಥಿಗಳನ್ನು ಪರಿಚಯಿಸಿದರು. ವಿನಾಯಕ ಕಾರೇಕರ್ ನಿರ್ವಹಿಸಿದರು. ಅನಂತ ಲಾಡ್ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button