ಪ್ರಗತಿವಾಹಿನಿ ಸುದ್ದಿ, ರಾಯಬಾಗ – 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಿಂಚಲಿ ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರು ಎಸಿಬಿಯಿಂದ ಬಂಧಿತ ಗ್ರಾಮ ಲೆಕ್ಕಾಧಿಕಾರಿ.
ದಿನಾಂಕ: 18.05.2022 ರಂದು ಸಚೀನ್ ಶಾಂತಿನಾಥ @ ಶಾಂತು ಶಿಂಧೆ (ಸಾ: ಗಣಕೋಡಿ ತೋಟ ಶಿರಗೂರ ರಸ್ತೆ, ಚಿಂಚಲಿ ತಾ: ರಾಯಬಾಗ) ಎಸಿಬಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರು.
ತಮ್ಮ ಜಮೀನಿಗೆ ಸೇರಿದ ರಾಯಬಾಗ ತಹಶೀಲ್ದಾರ ಕಛೇರಿಯಿಂದ ಬಂದಿರುವ “ಜೆ” ಫಾರಂಗೆ ಫಿತ್ಯಾದಿಯ ಹಾಗೂ ಅವರ ಕುಟುಂಬದವರ ಸಹಿ ಪಡೆದು ವರದಿ ಸಲ್ಲಿಸಲು ಜಗದೀಶ್ ಕಿತ್ತೂರ ರೂ.5000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿದ್ದರು.
ಅದರಂತೆ ದಿನಾಂಕ:18.05.2022 ರಂದು ಜಗದೀಶ್ ಕಿತ್ತೂರ ರೂ.5,000/-ಗಳ ಲಂಚದ ಹಣವನ್ನು ಫಿರ್ಯಾ ದಿಯಿಂದ ಸ್ವೀಕರಿಸುವ ಸಂದರ್ಭದಲ್ಲಿ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಎಸಿಬಿ ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಜೆ.ಎಮ್. ಕರುಣಾಕರ ಶೆಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದರು. ನಿರಂಜನ್ ಎಂ. ಪಾಟೀಲ್, ಪೊಲೀಸ್ ನಿರೀಕ್ಷಕರು ಹಾಗೂ ಬೆಳಗಾವಿ ಎಸಿಬಿ ಠಾಣೆಯ ಸಿಬ್ಬಂದಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎಸಿಬಿ ಬಲೆಗೆ; ಇಬ್ಬರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ