Kannada NewsKarnataka NewsLatest

ಬೇಡಿಕೆ ಈಡೇರಿಸದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದ ಶಿವಪೇಠ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ, ಸುರೇಬಾನ: “ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡದಿದ್ದರೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗುತ್ತದೆ” ಎಂದು ಕಂದಾಯ ಗ್ರಾಮ‌ ಹೋರಾಟ ಸಮಿತಿ ಉಪಾಧ್ಯಕ್ಷ ಸುರೇಶ ಗಣಮುಖಿ ಎಚ್ಚರಿಕೆ ನೀಡಿದರು.

ಅವರು ಕಂದಾಯ ಗ್ರಾಮ ಘೋಷಣೆಗೆ ಆಗ್ರಹಿಸ ಶಿವಪೇಠ ಗ್ರಾಮಸ್ಥರು ಸುರೇಬಾನ ನಾಡ ಕಚೇರಿಯ ಆವರಣದಲ್ಲಿ ಆವರಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಎಸ್.ಆರ್.ಗುರುಬಸಣ್ಣವರ ಮಾತನಾಡಿ, “ಶಿವಪೇಠ ಗ್ರಾಮ 57 ವರ್ಷಗಳಿಂದ ಕಂದಾಯ ಗ್ರಾಮವಾಗದೆ ಉಳಿದಿರುವುದು ವಿಪರ್ಯಾಸ. ಗ್ರಾಮಸ್ಥರೆಲ್ಲ ಸಂಘಟಿತರಾಗಿ ಹೋರಾಟಕ್ಕಿಳಿದರೆ ಮಾತ್ರ ನಮ್ಮ ಬೇಡಿಕೆ ಈಡೇರುವುದು ಸಾಧ್ಯ. ೀ ನಿಟ್ಟಿನಲ್ಇ ಗ್ರಾಮಸ್ಥರ ಒಗ್ಗಟ್ಟು ಸಂತಸ ಮೂಡಿಸಿದೆ” ಎಂದರು.

ಶಿವಪೇಠ ಗ್ರಾಮದಿಂದ ಎರಡು ಕಿಮೀ. ದೂರದ ಸುರೇಬಾನ ನಾಡ ಕಚೇರಿಯ ವರೆಗೆ ತಮಟೆ ಬಡಿಯುತ್ತ ಪಾದಯಾತ್ರೆ ನಡೆಸಿದ ಗ್ರಾಮಸ್ಥರು, ನೂರಾರು ಜನರು ನಾಡ ಕಚೇರಿ ಎದುರು ಸಮಾವೇಶಗೊಂಡು ಎರಡು ತಾಸಿಗೂ ಹೆಚ್ಚು ಕಾಲ ಧರಣಿ ಸತ್ಯಾಗ್ರಹ ನಡೆಸಿದರು.

Home add -Advt

ಶಿವಪೇಠ ಕಂದಾಯ ಗ್ರಾಮ ಹೋರಾಟ ಸಮಿತಿಯಿಂದ ರಾಜ್ಯಪಾಲರಿಗೆ ಹಾಗೂ ಕಂದಾಯ ಸಚಿವರಿಗೆ ರಾಮದುರ್ಗ ತಹಸೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಯಿತು.

ಶಿವಪೇಠ ಕಂದಾಯ ಗ್ರಾಮ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಪ್ಪ ಇಟಗಿ, ಶಿವಮೂರ್ತಿ ಗುರುಬಸಣ್ಣವರ, ನಾಗಪ್ಪ ದೇವನಾಳ, ಮರಿಯಪ್ಪ ಬಾರಕೇರ, ಗಂಗಪ್ಪ ಕಾತರಖಿ, ಬಸನಗೌಡ ಹಳಮನಿ, ಮಾಗುಂಡಪ್ಪ ಆಲೂರ, ಮಲ್ಲಪ್ಪ ಬೇವಿನಮರದ, ಬಸವರಾಜ ಬಿಳಿಗಿ ಹಾಗೂ ಗ್ರಾ.ಪಂ ಸದಸ್ಯ, ಗ್ರಾಮದ ಸ್ವ ಸಹಾಯ ಸಂಘಗಳ ಸದಸ್ಯರುಗಳು, ಯುವಕ ಮಂಡಳದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

https://pragati.taskdun.com/sharad-pawar-called-a-meeting-on-electronic-voting-machine/

https://pragati.taskdun.com/panchamasali2c2d-reservationhighcourt/
https://pragati.taskdun.com/siddaramaihroad-showbadamividhanasabha-election/

Related Articles

Back to top button