ಪ್ರಗತಿವಾಹಿನಿ ಸುದ್ದಿ; ಇಂಜಿನಿಯರಿಂಗ್ ಎಕ್ಸಾಂ ಫೇಲ್ ಆಗಿದ್ದ ಮಗನ್ನು ಚೆನ್ನಾಗಿ ಓದುವಂತೆ ಪೋಷಕರು ಬುದ್ಧಿ ಹೇಳಿದ್ದರು. ಇದರಿಂದ ಕೋಪಗೊಂಡ ಪಾಪಿ ಮಗ ತಂದೆ ತಾಯಿಯನ್ನೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ನಾಗುರದಲ್ಲಿ ಪಾಪಿ ಮಗ ಕ್ಷುಲ್ಲಕ ಕಾರಣಕ್ಕೆ ಹೆತ್ತಮ್ಮ ಹಾಗೂ ಅಪ್ಪನನ್ನ ಕೊಲೆಗೈದಿದ್ದಾನೆ. ಲೀಲಾತ್ಕರ್ ದಾಕೋಲೆ ಹಾಗೂ ಅರುಣಾ ದಾಕೋಲೆ ಮಗನಿಂದ ಕೊಲೆಯಾದ ಮೃತ ದುರ್ದೈವಿಯಾಗಿದ್ದಾರೆ. ಡಿ.26 ರಂದು ಹತ್ಯೆ ನಡೆದಿದ್ದು, ಜ.1ರಂದು ಪ್ರಕರಣ ಬೆಳಕಿಗೆ ಬಂದಿದೆ.
ಉತ್ಕರ್ಶ್ ದಾಕೋಲೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ಕರ್ಶ್ ಹಲವು ಸಭೆಕ್ಟ್ ನಲ್ಲಿ ಫೇಲ್ ಆಗಿದ್ದನು. ಚೆನ್ನಾಗಿ ಓದುವಂತೆ ಪೋಷಕರು ಒತ್ತಾಯ ಹೇರಿದ್ದರು. ಪ್ರಸ್ತುತ ಓದುತ್ತಿರುವ ಕಾಲೇಜು ಬದಲಾವಣೆ ಮಾಡುವಂತೆ ಸೂಚಿಸಿದ್ದರು. ಇದಕ್ಕೆ ಕೋಪಗೊಂಡಿದ್ದ ಉತ್ಕರ್ಶ್ ಚಾಕುವಿನಿಂದ ಇರಿದು ಅಪ್ಪ ಹಾಗೂ ಅಮ್ಮನನ್ನು ಹತ್ಯೆ ಮಾಡಿದ್ದಾನೆ.
ಅಲ್ಲದೇ ತನ್ನ ತಂಗಿಯನ್ನ ಸಂಬಂಧಿಕರ ಮನೆಗೆ ಕಳುಹಿಸಿ ಪೋಷಕರು ಮೆಡಿಟೇಶನ್ ತರಬೇತಿಗೆ ತೆರಳಿದ್ದಾರೆ ಎಂದು ಕಥೆ ಕಟ್ಟಿದ್ದಾನೆ. ಮನೆಯಿಂದ ವಾಸನೆ ಬಂದ ಹಿನ್ನೆಲೆ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ