Belagavi NewsBelgaum NewsKannada NewsKarnataka News

*ಮಹಿಳೆ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಕಾಕತಿ ಗ್ರಾಮದ ಸಾದಿಯಾ ಇರ್ಫಾನ ಜಮಾದಾರ (19) ಎಂಬ ಮಹಿಳೆ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ಬಾರದೇ ಕಾಣೆಯಾಗಿದ್ದಾಳೆ ಎಂದು ಎಪಿಎಮ್‌ ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ಮಹಿಳೆಯ ವಿವರ: 5.2 ಎತ್ತರ, ಗೋದಿ ಮೈಬಣ್ಣ, ಮೈಯಿಂದ ಸದೃಢ, ಚಾಕಲೇಟ್ ಬಣ್ಣದ ಚೂಡಿದಾರ, ಬುರ್ಕಾ ಹಾಗೂ ಸ್ಕಾರ್ಪ್, ಹಸಿರು ಬಣ್ಣದ ಬ್ಯಾಗ್ ಧರಿಸಿರುತ್ತಾಳೆ.

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಎಪಿಎಮ್ ಸಿ ಪೊಲೀಸ್ ಠಾಣೆಯ ದೂರವಾಣಿ: 0831-2405250, 9480804106, 9480804047 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button