Cancer Hospital 2
Beereshwara 36
LaxmiTai 5

ಮಕ್ಕಳ ರಂಗ ತರಬೇತಿ ಕಾರ್ಯಾಗಾರ

Anvekar 3


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಪ್ಟೆಂಬರ್:೧೩: ಬೆಳಗಾವಿಯ ರಂಗಸಂಪದವು ಮಕ್ಕಳ ರಂಗ ತರಬೇತಿ ಶಿಬಿರವನ್ನು ಇದೆ ಅಕ್ಟೋಬರ್ ೭ರಿಂದ ಹಮ್ಮಿಕೊಂಡಿದೆ.
ಕಾರ್ಯಾಗಾರವು ನಗರದ ವರೇರಕರ ನಾಟ್ಯ ಸಂಘ (ಹಾಲ್) ಹೇರವಾಡಕರ ಶಾಲೆ ಹತ್ತಿರ, ಎರಡನೆ ರೈಲು ಗೇಟ್, ಟಿಳಕವಾಡಿ, ಬೆಳಗಾವಿ ಇಲ್ಲಿ ಜರುಗಲಿದ್ದು, ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ರಂಗಕರ್ಮಿ, ನಿರ್ದೇಶಕರಾದ ಶ್ರೀ.ವೈಭವ ಲೋಕೂರ ಇವರು ಮಕ್ಕಳಿಗೆ ರಂಗ ತರಬೇತಿಯನ್ನು ನೀಡಲಿರುವುರು.
ಮಕ್ಕಳ ಕಾರ್ಯಗಾರವು ೨೦೨೩ರ ಅಕ್ಕೋಬರ್ ೭ ರಿಂದ ೨೨ರ ವರೆಗೆ ೧೬ ದಿನಗಳ ಕಾಲ ಬೆಳಿಗ್ಗೆ ೧೧-೦೦ ರಿಂದ ಸಂಜೆ ೫-೦೦ ಗಂಟೆಯ ವರೆಗೆ ಜರುಗಲಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿಧ್ಯಾರ್ಥಿಗಳು ೧೦ ರಿಂದ ೧೫ ವಯೋಮಿತಿಯಲ್ಲಿದ್ದು, ಕನ್ನಡ ಓದಲು ಹಾಗೂ ಮಾತನಾಡಲು ಬರಬೇಕು
ರಂಗ ತರಬೇತಿ ಕಾರ್ಯಗಾರದಲ್ಲಿ ಭಾಗವಿಸಲು ಇಚ್ಛಿಸುವವರು ವಿವವರಗಳಿಗಾಗಿ ಹಾಗೂ ಹೆಸರನ್ನು ನೋಂದಾಯಿಸಲು ಡಾ.ಅರವಿಂದ ಕುಲಕರ್ಣಿ-೯೮೪೫೦೨೫೬೩೮, ದಿಲೀಪ ಮಳಗಿ-೯೪೪೯೭೧೫೪೮೭, ಗುರುನಾಥ ಕುಲಕರ್ಣಿ-೯೮೮೬೦೦೪೦೦೪ ಇವರನ್ನು ಸಂಪರ್ಕಿಸಬಹುದಾಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸಲು ಕೇವಲ ೨೦ ವಿಧ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಹೆಸರು ದಾಖಲಿಸಲು ಕೊನೆಯ ದಿ:೨೯-೦೯-೨೦೨೩ ಎಂದು ರಂಗಸಂಪದ ಅಧ್ಯಕ್ಷರಾದ ಡಾ.ಅರವಿಂದ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ತರಬೇತಿ ಶಿಬೀರದ ವಿಧ್ಯಾರ್ಥಿಗಳಿಂದ ತಯಾರಿಸಿದ ನಾಟಕವನ್ನು ೨೦೨೩ ಅಕ್ಟೋಬರ್ ೨೨ ರಂದು ಸಂಜೆ ೬-೩೦ಕ್ಕೆ ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಪ್ರದರ್ಶಿಸಲಾಗುವುದು.

Emergency Service
Bottom Add3
Bottom Ad 2