Belagavi NewsBelgaum NewsKannada NewsKarnataka News

ಗೌರಿ ಗಣೇಶ ಹಬ್ಬದ ಪ್ರಯುಕ್ತ: ಬೆಂಗಳೂರಿಂದ ಬೆಳಗಾವಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ೨೦೨೩ ನೇ ಸಾಲಿನ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಳಗಾವಿ ವಿಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವ ಪ್ರಯಾಣಿಕರ ಜನದಟ್ಟನೆಯ ಹೆಚ್ಚಳವನ್ನು ಅವಲೋಕಿಸಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣಿಸಲು ಸೆ.೧೫ ರಿಂದ ಸೆ.೧೭ ರ ವರಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Home add -Advt

ಪ್ರಯಾಣಿಕರಿಗೆ ವಿವಿಧ ಮಾದರಿಯ ಎ.ಸಿ. ಸ್ಲೀಪರ್, ನಾನ್ ಎ.ಸಿ. ಸ್ಲೀಪರ್ ಮತ್ತು ಮಲ್ಟಿ ಎಕ್ಸಲ್ ವೋಲ್ವೊ, ಪ್ರತಿಷ್ಟಿತ ಹೆಚ್ಚುವರಿ ವಾಹನಗಳನ್ನು ಕಾರ್ಯಾಚಣೆಯನ್ನು ಮಾಡಲು ಮತ್ತು ಹಬ್ಬದ ನಂತರ ಸೆ.೧೯ ೨೦೨೩ ರಿಂದ ಸೆ.೨೪ ೨೦೨೩ ರ ವರೆಗೆ ಮರಳಿ ಬೆಂಗಳೂರಿಗೆ ಪ್ರಯಾಣಿಸಲು ಬೆಳಗಾವಿಯಿಂದ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ.
ಇ-ಸಾರಿಗೆಗಳಿಗೆ ಇ-ಟಿಕೇಟನ್ನು ಆನ್ ಲೈನ್, http://www.ksrtc.in, www.nwkrtc.in  ಹಾಗೂ ಮೊಬೈಲ್ ಮುಖಾಂತರ ಅಥವಾ ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿ ವಿವಿಧ ಸ್ಥಳದಲ್ಲಿರುವ ಸಂಸ್ಥೆಯ ಅವತಾರ ಬುಕ್ಕಿಂಗ್ ಏಜಂಟರಲ್ಲಿಯೂ ಮುಂಗಡ ಟಿಕೇಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಬೆಳಗಾವಿ ವಿಭಾಗದ ವಾ.ಕ.ರ.ಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button