Kannada News

ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ: ಕಂಡದ್ದನ್ನೆಲ್ಲ ಕೈಗೆತ್ತಿಕೊಂಡು ಪರಾರಿಯಾದ ಖದೀಮರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ರಾಮತೀರ್ಥನಗರದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡಿ ಪರಾರಿಯಾಗಿದ್ದಾರೆ.

ಕ್ರಿಕೆಟ್ ಮೈದಾನದ ಬಳಿಯ ಸತೀಶ ರನ್ನೂರೆ ಎಂಬುವವರ ಮನೆಯಲ್ಲಿ ಜು.2ರಂದು  ರಾತ್ರಿ ಕಳ್ಳತನದ ಘಟನೆ ನಡೆದಿದೆ. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ ಅವರು ರಜೆಯಿದ್ದುದರಿಂದ  ಕುಟುಂಬ ಸಹಿತ ಧರ್ಮಸ್ಥಳ ಕ್ಷೇತ್ರಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು 7ತೊಲೆ ಚಿನ್ನಾಭರಣ ಹಾಗೂ 2.31 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ನಗದು ದೋಚಿದ್ದಾರೆ.

ಮರುದಿನ ಬೆಳಿಗ್ಗೆ ಮನೆ ಬಾಗಿಲು ಮುರಿದಿದ್ದನ್ನು ಕಂಡ ನೆರೆಮನೆಯವರು ಸತೀಶ ಅವರಿಗೆ ದೂರವಾಣಿಯಲ್ಲಿ ವಿಷಯ ತಿಳಿಸಿದ್ದರೆನ್ನಲಾಗಿದೆ. ಸೋಮವಾರ ಧರ್ಮಸ್ಥಳದಿಂದ ಮರಳಿದ ಸತೀಶ ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಿಎಸ್ಐಗಳಾದ ಹೊನ್ನಪ್ಪ ತಳವಾರ ಹಾಗೂ ಅಡಿವೆಪ್ಪ ಕುಂಡೇದ ಸಿಬ್ಬಂದಿಯೊಡನೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Home add -Advt

ಹರ್ಷ ಕೊಲೆ ಆರೋಪಿಗಳ ಬಳಿ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ ಪತ್ತೆ; ಜೈಲಿನಲ್ಲಿ ಬಿಂದಾಸ್ ಆಗಿರುವ ಕೈದಿಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button