Latest

ಗಣಪತಿಯ ಅವತಾರಗಳು 32 ಬಗೆ…

ಗಣಪತಿಯ ಬಗೆಗೆಯ ಅವತಾರಗಳು ಇವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ೩೨ ಬಗೆಯ ಅವತಾರಗಳಲ್ಲಿ ಗಣಪತಿ ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನು ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿದೆ.
೧. ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯ ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
೨. ತರುಣ ಗಣಪತಿ ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು ೮ ಕೈಗಳನ್ನು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
೩. ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿ ಇರುತ್ತದೆ.
೪. ವೀರ ಗಣಪತಿಯ ಅವತಾರದಲ್ಲಿ ಗಣಪತಿಯ ಆಯುಧಗಳನ್ನು ೧೬ ಕೈಗಳು ಇರುತ್ತದೆ. ಗಣಪತಿಯ ಈ ವೀರ ಅವತಾರವು ಯುದ್ಧಕ್ಕೆ ಸನ್ನದ್ದವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
೫. ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನ ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
೬. ದ್ವಿಜ ಗಣಪತಿ ದ್ವಿಜ ಎಂದರೆ ಎರಡು ಬಾರಿ ಜನಿಸಿದವನು ಎಂದರ್ದ. ಗಣೇಶನು ನಿಜವಾಗಿಯು ಎರಡು ಬಾರಿ ಜನಿಸಿದವನು. ಮೊದಲು ಜನಿಸಿದ ನುಂತರ ಕೊಲ್ಲಲ್ಪಟ್ಟು ಆ ಮೇಲೆ ಪುನ: ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ ೪ ತಲೆಗಳು ಇವೆ.
೭. ಸಿದ್ಧಿ ಗಣಪತಿಯನ್ನು ಯಶಸ್ಸು ಮತ್ತು ಸಂಪತ್ತಿನ ಸಲವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
೮. ಉಚ್ಚಿಷ್ಟ ಗಣಪತಿ ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ.ತಿಳಿ ನೀಲಿ ಬಣ್ನದ ಈ ಗಣಪತಿಯು ೬ ಕೈಗಳು ಹೊಂದಿದ್ದು ಕೈಯಲ್ಲಿ ವೀಣೆಯಂತಹ ಸಂಗಿತ ವಾದ್ಯಗಳನ್ನು ಹಿಡಿದಿರುತ್ತಾನೆ.
೯. ವಿಘ್ನ ಗಣಪತಿ ಗಣಪತಿಯನ್ನು ವಿಘ್ನೇಶ್ವರ ವಿಘ್ನನಾಶಕ ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತದೆ.
೧೦. ಕ್ಷಿಪ್ರ ಗಣಪತಿ ಕೆಂಪು ವರ್ಣದ ಈ ಗಣಪತಿಯ ಹೆಸರೇ ಸುಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
೧೧. ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ್ದಾನೆ. ಈತನಿಗೆ ೫ ತಲೆಗಳು ಇದ್ದು ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಎರಿರುವ ಅವತಾರ ಇದಾಗಿದೆ.
೧೨. ಲಕ್ಷ್ಮೀ ಗಣಪತಿ ಯನ್ನು ಸಹೋದರಿ ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
೧೩. ಮಹಾಗಣಪತಿ ಮಹಾ ಎಂಬ ಮಾತೇ ಶ್ರೇಷ್ಟ ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು ತನ್ನು ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
೧೪. ವಿಜಯ ಗಣಪತಿ ಹೇಸರೇ ಸೂಚಿಸುವಂತೆ ವಿಜಯದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು ಮೂಷಕ ವಾಹನನಾಗಿ ಕಾಣಿಸುತ್ತಾನೆ.
೧೫. ನೃತ್ಯ ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯು ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾತಿದ್ದಾರೆ?
೧೬. ಊರ್ಧ್ವ ಗಣಪತಿ ಎಂದರೆ ಉದ್ದವಾಗಿ ಇರುವ ಗಣಪತಿ ಎಂದರ್ಧ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಿಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲ್ತಿ, ಭತ್ತ, ನೈದಿಲೆ, ಕಬ್ಬನ ಜಲ್ಲ್ಲೆಗಳನ್ನು ನಾವು ಕಾಣಬಹುದು.
೧೭. ಏಕಾಕ್ಷರ ಗಣಪತಿ ಯು ಹೆಸರೆ ಸೂಚಿಸುವಂತೆ ಒಂದೆ ಅಕ್ಷರದ ಗಣಪತಿಯಾಗಿರುತ್ತಾನೆ ಈತನು ಕೆಂಪು ಬಣ್ಣದಲ್ಲಿದ್ದು ಮೂಷಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
೧೮. ವರದ ಗಣಪತಿ ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ ಮೂರನೆ ಕಣ್ಣು ಇದೆ ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
೧೯. ತ್ರಯಾಕ್ಷರ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು ಕೈಯಲ್ಲಿ ತನ್ನು ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿದುವುದನ್ನು ಕಾಣಬಹುದು.
೨೦. ಕ್ಷಿಪ್ರಪ್ರಸಾದ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸಿವನೆಂದು ಭಾವಿಸಲಾಗಿದೆ.
೨೧. ಹರಿದ್ರ ಗಣಪತಿಯು ಸಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ರಾಜ ಠಿವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
೨೨. ಎಕದಂತ ಗಣಪತಿಯು ಒಂದೆ ಒಂದು ದಂತವನ್ನು ಹೋಂದಿದ್ದು ನೀಲಿಬಣ್ಣದಿಂದ ಕೂಡಿರುತ್ತಾನೆ.
೨೩. ಸೃಷ್ಟಿ ಗಣಪತಿಯ ಈ ಸಣ್ಣರೂಪವು ಮೂಷಕ ವಾಹನವಾಗಿದ್ದು ಒಳ್ಳೆಯ ಮೂಡ್ ನಲ್ಲಿ ಕಾಣಿಸಿಕೊಳ್ಳುತ್ತಾನೆ.
೨೪. ಉದ್ದಂಡ ಗಣಪತಿಯು ವಿಶ್ವದಲ್ಲಿ ಧರ್ಮವನ್ನು ಪರಿಪಾಲಿಸುತ್ತಾನೆ. ಈ ಗಣಪತಿಯ ೧೦ ಕೈಗಳನ್ನು ಹೊಂದಿದ್ದು ವಿಶ್ವದಲ್ಲಿರುವ ಎಲ್ಲಾ ೧೦ ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
೨೫. ಖುಣಮೋಚನ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ನದಿಂದ ಕೂಡೊರುತ್ತದೆ.
೨೬. ದುಂಧಿ ಗಣಪತಿಯು ಕೆಂಪು ವಣದಲ್ಲಿದ್ದು ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
೨೭. ದ್ವಿಮುಖ ಗಣಪತಿಯ ಹೆಸರೇ ಸೂಚಿಸುವಂತೆ ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
೨೮. ತ್ರಿಮಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು ಚಿನ್ನದ ಕಮಲದ ಹೂವಿನ ಮೇಲೆ ಆಸಿನನಾಗಿರುತ್ತಾನೆ.
೨೯. ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
೩೦. ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
೩೧. ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು ಈ ಅವತಾರದಲ್ಲಿ ಈತ ತನ್ನು ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
೩೨. ಸಂಕಷ್ಟ ಹರ ಗಣಪತಿಯ ಈ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತಾನೆ.
ಸರ್ವೇ ಜನ: ಸುಖಿನೋ ಭವಂತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button