Kannada NewsKarnataka NewsLatestPolitics
*ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದೀರಾ? ನಂಬರ್ ಕೊಡ್ತೇನೆ ಬೇಗ ಅರ್ಜಿ ಹಾಕಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾಳಜಿ*


ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಗುರುವಾರ ಊಟದ ವೇಳೆ ಅಲ್ಲಿದ್ದ ಡಿ ಗ್ರೂಪ್ ಮಹಿಳಾ ನೌಕರರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಚಾರಿಸಿದ ರೀತಿ ಇದು.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಊಟ ಮಾಡುತ್ತಿದ್ದ ವೇಳೆ ಅಲ್ಲಿ ಸ್ವಚ್ಛತೆಯ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರನ್ನು ಹತ್ತಿರ ಕರೆದು ಯೋಗ ಕ್ಷೇಮ ವಿಚಾರಿಸಿದರು. ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಮಹಿಳಾ ಕಾರ್ಮಿಕರು ಇನ್ನೂ ಇಲ್ಲ ಮೇಡಂ ಎಂದರು.

ಆಗ, ನಂಬರ್ ಕೊಡುತ್ತೇನೆ, ಅದಕ್ಕೆ ಎಸ್ ಎಂಎಸ್ ಮಾಡಿ, ಆದಷ್ಟು ಬೇಗ ಅರ್ಜಿ ಹಾಕಿ ಎಂದು ಸೂಚಿಸಿದರು. ಜೊತೆಗೆ ತಕ್ಷಣವೇ SMS ಕಳುಹಿಸಬೇಕಾದ ನಂಬರ್ ಅನ್ನು ಸಚಿವರು ನೀಡಿದರು.
ಯೋಜನೆಯ ಲಾಭ ಸಮಾಜದ ಕಟ್ಟಕಡೆಯ ಮಹಿಳೆಯರಿಗೂ ತಲುಪಬೇಕು ಎನ್ನುವ ಕಾಳಜಿ ಹೊಂದಿರುವ ಸಚಿವರು ಊಟ ಮಾಡುವ ವೇಳೆಯಲ್ಲೂ ಕಳಕಳಿ ಮೆರೆದರು.