Kannada NewsKarnataka NewsPolitics

*ನನ್ನ ಜೈಲಿಗೆ ಕಳುಹಿಸಲು ಕುತಂತ್ರ ನಡೆಯುತ್ತಿದೆ: ಹೆಚ್.ಡಿ ಕುಮಾರಸ್ವಾಮಿ ಆರೋಪ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನನ್ನ ಹಾಗೂ ದೇವೇಗೌಡರ ಕುಟುಂಬದ ವರ್ಚಸ್ಸನ್ನು ಹಾಳು ಮಾಡಿದೆ. ಈಗ ನಾನು ಕೇಂದ್ರದಲ್ಲಿ ಮಂತ್ರಿಯಾಗಿರುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ಏನಾದರೂ ಹುಡುಕಿ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಕುತಂತ್ರ ಹೆಣಿಯುತ್ತಿದ್ದಾರೆ. ಈ ಬಗ್ಗೆ ನನಗೂ ಮಾಹಿತಿ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ 82 ವರ್ಷಗಳಾಗಿವೆ. ಈ ವಯಸ್ಸಿನಲ್ಲೂ ಅವರ ವಿರುದ್ಧ ಅನಗತ್ಯ ಕೇಸ್ ಹಾಕಿಸಿ ಅವರನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ಜೈಲಿಗೆ ಕಳುಹಿಸಲೆಂದು ಪ್ರಯತ್ನಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ದ್ವೇಷದ ರಾಜಕಾರಣದ ಈ ನಡೆಯ ಬಗ್ಗೆ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದೆ ಮತ್ತೊಮ್ಮೆ ಜನರೇ ಕಾಂಗ್ರೆಸ್​​​ಗೆ ಪಾಠ ಕಲಿಸಲಿದ್ದಾರೆ ಎಂದರು.

Home add -Advt

’ನಟ ದರ್ಶನ್ ಮತ್ತು ಟೀಂನಿಂದ ಹತ್ಯೆ ಕೇಸ್ ಆರೋಪ ಸಂಬಂಧ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಹೆಚ್​​​ಡಿಕೆ, ಕಾಂಗ್ರೆಸ್ ಆಡಳಿತದಲ್ಲಿ ನಿಯಂತ್ರಣವಿಲ್ಲದಂತಾಗಿದೆ. ರಾಜ್ಯದಲ್ಲಿ ಪ್ರತಿದಿನ ಕೊಲೆಗಳು ನಡೆಯುತ್ತಿವೆ. ಯಥಾ ರಾಜಾ ತಥಾ ಪ್ರಜಾ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಹತ್ಯೆ ಆರೋಪಿಗಳಿರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರುವುದು ತಪ್ಪು. ಇಂತಹ ಬೆಳವಣಿಗೆ ಇತಿಹಾಸದಲ್ಲೇ ತಾವು ಕಂಡಿಲ್ಲ ಎಂದರು.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button