Belagavi NewsBelgaum NewsElection NewsKarnataka NewsPolitics

*ಸದ್ಯಕ್ಕಿಲ್ಲ ಗ್ರಾಮ ಪಂಚಾಯತ ಉಪ ಚುನಾವಣೆ*

ಪ್ರಗತಿವಾಹಿನಿ ಸುದ್ದಿ : ವಿವಿಧ ಜಿಲ್ಲೆಗಳ 222 ಗ್ರಾಮ ಪಂಚಾಯತ್‌ಗಳ ಉಪಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗವು ಸದ್ಯಕ್ಕೆ ಮುಂದೂಡಿದೆ ಎಂದು ತಿಳಿದುಬಂದಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಡಿಸಿಗಳು ಚುನಾವಣೆಯ ತಯಾರಿ, ಸಿದ್ಧತೆ ಕುರಿತು ಸಮಯ ಕೋರಿದ ಹಿನ್ನೆಲೆಯಲ್ಲಿ ಇದೀಗ ಚುನಾವಣೆಯ ದಿನಾಂಕವೇ ಸದ್ಯ ಮುಂದೂಡಿಕೆಯಾಗಿದೆ.

Related Articles

222 ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 260 ಸ್ಥಾನಗಳು ಖಾಲಿ ಇದ್ದು ರಾಜೀನಾಮೆ, ಮರಣ ಇತರ ಕಾರಣಗಳಿಂದ ತೆರವಾದ ಈ ಸ್ಥಾನಗಳಿಗೆ ಉಪಚುನಾವಣೆ ನಡೆಯಬೇಕಿದೆ. 

ಏ.22ರಂದು ಚುನಾವಣಾ ಅಧಿಸೂಚನೆ ಮತ್ತು ಮೇ 11 ಮತದಾನ, 14ರಂದು ಫಲಿತಾಂಶ ಪ್ರಕಟ ಎಂದು ಈ ಮೊದಲು ರಾಜ್ಯ ಚುನಾವಣಾ ಆಯೋಗವು ಘೋಷಿಸಿತ್ತು.

Home add -Advt

Related Articles

Back to top button