Kannada NewsKarnataka NewsLatestPragativahini Special

*ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ; ಹೆಣ್ಣು ಮಕ್ಕಳನ್ನು ರಕ್ಷಿಸಿ*

ವಿಶ್ವಾಸ ಸೋಹೋನಿ
ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಮಾರ್ಚ ೮ ರಂದು ಆಚರಿಸಲಾಗುತ್ತದೆ. ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿವರ್ಷ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ೨೦೨೫ ರ ಅಂತರರಾಷ್ಟ್ರೀಯ ಮಹಿಳಾ ದಿನದ ಧ್ಯೇಯವಾಕ್ಯ ಕ್ರಿಯೆಯನ್ನು ವೇಗಗೊಳಿಸಿ.
ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ, ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ನಿಸ್ವರ, ಹೆಣ್ಣನ್ನು ಗೌರವಿಸಿ, ಹೆಣ್ಣು ಮಕ್ಕಳನ್ನು ರಕ್ಷಿಸಿ. ನೇರಳೆ, ಹಸಿರು ಮತ್ತು ಬಿಳಿ ಬಣ್ಣಗಳು ಅಂತರರಾಷ್ಟ್ರೀಯ ಮಹಿಳಾ ದಿನದ ಬಣ್ಣಗಳಾಗಿವೆ. ನೇರಳೆ ನ್ಯಾಯ ಮತ್ತು ಘನತೆಯನ್ನು ಸೂಚಿಸುತ್ತದೆ. ಹಸಿರು ಭರವಸೆಯನ್ನು ಸಂಕೇತಿಸುತ್ತದೆ ಮತ್ತು ಬಿಳಿ ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ನಾರಿಶಕ್ತಿಯನ್ನು ಸೃಷ್ಟಿಯ ಆದಿಶಕ್ತಿ ಎಂದು ಕರೆಯುತ್ತಾರೆ. ನಾರಿಯು ಸಮಾಜದ ಅತ್ಯಂತ ಶ್ರೇಷ್ಠ ಭಾಗವಾಗಿದ್ದಾಳೆ. ನಾರಿ ಸ್ವರ್ಗಕ್ಕೆ ದಾರಿಯಾಗಿದ್ದಾಳೆ. ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾ: ನಾರಿ ಒಬ್ಬಳು ಕಲಿತರೆ ಶಾಲೆಯನ್ನು ತೆರೆದಂತೆ ಎಂಬ ನಾಣ್ಣುಡಿ ಇದೆ. ನಾರಿಯು ಸಮಾಜದ ಚುಕ್ಕಾಣಿಯನ್ನು ಹಿಡಿದು ಆಭಿವೃದ್ಧಿ ಕಡೆಗೆ ಕರೆದೊಯ್ಯುವ ಸಾಧಕಿಯಾಗಿದ್ದಾಳೆ. ಬ್ರಹ್ಮಾಕುಮಾರಿ ಸಂಸ್ಥೆಯು ವಿಶೇಷವಾಗಿ ಮಹಿಳೆಯರ ಉನ್ನತಿಗಾಗಿ ಜಾಗತಿಕ ಮಟ್ಟದಲ್ಲಿ ಇರುವ ಏಕೈಕ ಸಂಸ್ಥೆಯಾಗಿದೆ. ಭಾರತ ದೇಶದಲ್ಲಿ ಸುಮಾರು ೬೦,೦೦೦ ಸಮರ್ಪಿತ ಕನ್ಯೆಯರು, ಭಗಿನಿಯರು ೮೫೦೦ ಶಾಖೆಗಳಲ್ಲಿ ಕಾರ್ಯನಿರತವಾಗಿದ್ದಾರೆ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಪ್ರತಿವರ್ಷದಂತೆ ಮಹಿಳಾ ದಿನಾಚರಣೆಯನ್ನು ವಿಶ್ವದಾದ್ಯಂತ ತನ್ನ ಸಾವಿರಾರು ಶಾಖೆಗಳಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತದೆ. ಈ ವರ್ಷದ ಧ್ಯೇಯವಾಕ್ಯ ಮೌಲ್ಯಾಧಾರಿತ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಂಬುದಾಗಿದೆ. ಅನೇಕ ಮಹಿಳಾ ಕಾರ್ಯನಿರತ ಸಂಘಟನೆಗಳ ಜೊತೆಗೂಡಿ ಸೆಮಿನಾರ್, ವಿಚಾರಗೋಷ್ಠಿ, ಮಹಿಳಾ ಸಪ್ತಾಹ, ಸನ್ಮಾನ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ವರ್ತಮಾನದಲ್ಲಿ ೧೦೨ ವರ್ಷದ ರಾಜಯೋಗಿನಿ ರತನಮೋಹಿನಿ ದಾದಿಯವರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿಣಿಯಾಗಿ ೨೧ ವಿಭಾಗಗಳ ಮೂಲಕ ವಿಶ್ವದಾದ್ಯಂತ ಆಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣವನ್ನು ಹರಡುವ ಸೇವೆ ಮಾಡುತ್ತಿದ್ದಾರೆ.
೧೯೩೭ ರಲ್ಲಿ ದಾದಾ ಲೇಖರಾಜ ಅವರ ಮೂಲಕ ನಿರಾಕಾರ ಶಿವ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಾಪನೆ ಮಾಡಿದನು. ಜಗದಂಬೆ ಸರಸ್ವತಿ ಅವರು ತಮ್ಮ ಸರ್ವಸ್ವವನ್ನು ಪ್ರಭುವಿಗೆ ಅರ್ಪಣೆ ಮಾಡಿದರು. ೧೯೩೭ ರ ಅಕ್ಟೋಬರ್ ತಿಂಗಳಲ್ಲಿ ಅವರ ಜೊತೆಗೂಡಿ ಅನ್ಯ eನ ಪಾರಂಗತ ಕನ್ಯೆಯರು, ಮಾತೆಯರು, ಈಶ್ವರೀಯ ಕಾರ್ಯದಲ್ಲಿ ತಮ್ಮ ತನು-ಮನ-ಧನವನ್ನು ಸರ್ಮಪಣೆ ಮಾಡಿ, ಕಾರ್ಯಕಾರಿಣಿ ಸಮಿತಿಯನ್ನು ರಚಿಸಿದರು. ಕನ್ಯೆಯಾಗಿರುವ ಜಗದಂಬೆ ಅವರು ಸುಮಾರು ೩೫೦ಕ್ಕೂ ಹೆಚ್ಚು ಯಜ್ಞವತ್ಸರಿಗೆ, ಸಾವಿರಾರು ಬ್ರಹ್ಮಾವತ್ಸರಿಗೆ ಮಮತೆಯ ತಾಯಿಯಾಗಿ ಪಾಲನೆ ನೀಡಿ, eನ-ಯೋಗದಿಂದ ದೈವಿ ಗುಣಗಳಿಂದ ಶೃಂಗರಿಸಿ ಯೋಗಿಗಳನ್ನಾಗಿ ಮಾಡಿದರು.




Home add -Advt

Related Articles

Back to top button