ಜೀವನ ಶೈಲಿ ಬದಲಾವಣೆ ಅನಿವಾರ್ಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾದಂತಹ ಮಹಾಮಾರಿ ನಮ್ಮ ಬದುಕನ್ನೇ ಅಲ್ಲಾಡಿಸುವಂತಹ ಇಂದಿನ ಸ್ಥಿತಿಯಲ್ಲಿ ನಾವು ಜೀವನ ಶೈಲಿಯನ್ನೇ ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಧಾರ್ಮಿಕ ಶೃದ್ಧೆಯ ಜೊತೆಗೆ ಯೋಗ, ಉತ್ತಮ ಆಹಾರ ಪದ್ಧತಿಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಗ್ರಾಮೀಣ ಕ್ಷೇತ್ರದ ಸಾವಗಾಂವ ಗ್ರಾಮದಲ್ಲಿ ಶ್ರೀ ಜ್ಞಾನೇಶ್ವರ ಮಾವುಲಿ ವಿಠ್ಠಲ ರುಕ್ಮಾಯಿ ಮಂದಿರದ ಜೀರ್ಣೋದ್ಧಾರ ಕಾಮಗಾರಿಗಳಿಗೆ ಶುಕ್ರವಾರ ಚಾಲನೆಯನ್ನು ನೀಡಿ ಅವರು ಮಾತನಾಡುತ್ತಿದ್ದರು. .
ದೇವಸ್ಥಾನಗಳು ನೆಮ್ಮದಿ ಹಾಗೂ ಶಾಂತಿಯ ಪ್ರತೀಕವಾಗಿವೆ. ಅಲ್ಲಿ ಗ್ರಾಮಸ್ಥರು ನೆಮ್ಮದಿಯನ್ನು ಕಾಣಲು ಸಾಧ್ಯ. ಮುಂದಿನ ಪೀಳಿಗೆಗೆ ಆಧ್ಯಾತ್ಮ ಬೆಳೆಸುವುದರ ಮುಖೇನ ಅವರಿಗೆ ಒಳ್ಳೆಯ ಸಂಸ್ಕಾರ ಕಲಿಸಿಕೊಡುವುದರಲ್ಲಿ ದೇವಸ್ಥಾನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ದೇವಸ್ಥಾನಗಳನ್ನು ಉಳಿಸಿ, ಅಭಿವೃದ್ಧಿಪಡಿಸಬೇಕೆನ್ನುವ ದಿಸೆಯಲ್ಲಿ ನಾನು ಕಾರ್ಯಪ್ರವೃತ್ತನಾಗಿದ್ದೇನೆ. ಕ್ಷೇತ್ರದ ಎಲ್ಲೆಡೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೆರವು ನೀಡುತ್ತಿದ್ದೇನೆ ಎಂದು ಹೆಬ್ಬಾಳಕ್ ತಿಳಿಸಿದರು.
ಜನರು ಭಯದಿಂದ ಬದುಕುವ ಅಗತ್ಯವಿಲ್ಲ. ಆದರೆ ಎಚ್ಚರದಿಂದ ಬದುಕಬೇಕು. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ದಿನದ ಕೆಲ ಸಮಯವನ್ನಾದರೂ ಮೀಸಲಿಡಿ. ಅವಸರದ ಬದುಕಿನಲ್ಲಿ ಮೈಮರೆತರೆ ಅಪಾಯಕ್ಕೆ ನಮ್ಮನ್ನು ಒಡ್ಡಿಕೊಂಡಂತಾಗಲಿದೆ ಎಂದು ಅವರು ಎಚ್ಚರಿಸಿದರು.
ಮಂದಿರದ ಅರ್ಧದಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಗೋಪುರ ನಿರ್ಮಾಣ ಹಾಗೂ ಕಳಸಾರೋಹಣದ ಕಾಮಗಾರಿಗಳ ಪೂಜೆಯನ್ನು ನೇರವೇರಿಸಿ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನ ಕಮೀಟಿಯವರು, ಬಾಹು ಪಾಟೀಲ, ಬಾಳು ದೇಸೂರಕರ್, ಅರ್ಜುನ ಪಾಟೀಲ, ಎಂ ಕೆ ಪಾಟೀಲ, ಮಲ್ಲಪ್ಪ ಹಿಂಡಲಗೇಕರ್, ಶಿವಾಜಿ ದಂಡ್ಗಲ್ಕರ್, ಜ್ಯೋತಿಬಾ ಪಾಟೀಲ, ಸಂತೋಷ ಪಾಟೀಲ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ