
ಜನರ ಸೇವೆಗೆ ಅನರ್ಹ ಶಾಸಕ ಪ್ರಶ್ನೆ ಉದ್ಭವಿಸಲ್ಲ – ಮಾಜಿ ಸಚಿವ ರಮೇಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ – ಗೋಕಾಕ : ಗೋಕಾಕ್ ನಲ್ಲಿ ಇಷ್ಟೊಂದು ಪ್ರವಾಹ ನಾನು ಎಂದು ಕಂಡಿರಲಿಲ್ಲ. ಇಲ್ಲಿ ಹುಟ್ಟಿ ಬೆಳೆದ್ರು ಇಂತಹ ಸ್ಥಿತಿ ಬಂದಿರಲಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಬುಧವಾರದಂದು ನಗರದ ಪ್ರವಾಹ ಪೀಡಿತ ಬಡಾವಣೆಗಳಿಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿ, ಸಿಎಮ್ ಯಡಿಯೂರಪ್ಪ ಗೋಕಾಕ ನಗರಕ್ಕೆ ಆಗಮಿಸುವ ಬಗ್ಗೆ ಮಾಹಿತಿ ಇಲ್ಲ. ಜಿಲ್ಲಾಧಿಕಾರಿ ಹಾಗೂ ಸಿಎಮ್ ಜತೆಗೆ ಪ್ರವಾಹದ ಬಗ್ಗೆ ಚರ್ಚೆ ಮಾಡುತ್ತೆನೆ ಎಂದರು.
ಜನರ ಸೇವೆಗೆ ಸಂದರ್ಭದಲ್ಲಿ ಅನರ್ಹ ಶಾಸಕ ಪ್ರಶ್ನೆ ಉದ್ಭವಿಸಲ್ಲ. ಮಾನವಿಯತೆ ಉಳ್ಳವರು ಮಾಡುವ ಕಾರ್ಯಮಾಡುತ್ತಿದ್ದೆನೆ. ಸಾಮಾನ್ಯ ನಾಗರಿಕನಾಗಿ ಜನರ ಸೇವೆ ಮಾಡೊದು ಮುಖ್ಯ ಆ ನಿಟ್ಟಿನಲ್ಲಿ ನಗರದಲ್ಲಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆನೆಂದರು.
ನಾನು ಬರುವ ಅವಶ್ಯಕತೆ ಇರಲಿಲ್ಲ. ಕಾರ್ಯಕರ್ತರು, ಅಧಿಕಾರಿಗಳು ಈಗಾಗಲೇ ಎಲ್ಲಾ ಕೆಲಸ ಮಾಡಿದ್ದಾರೆ ಅವರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಗೋಕಾಕ ಇತಿಹಾಸದಲ್ಲಿ ಎಂದು ಕಂಡರಿಯದ ಪ್ರಕೃತಿ ವಿಕೋಪ ಇದಾಗಿದ್ದ ಎಂದು ಹೇಳಿದ ಅವರು ಜನರು ಸುರಕ್ಷಿತ ಸ್ಥಳಗಳಿಗೆ ಆಶ್ರಯ ಪಡೆಯಲು ವಿನಂತಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವರಿಗೆ ಬಿಜೆಪಿ ಮುಖಂಡ ಎಸ್.ವಿ. ದೇಮಶೆಟ್ಟಿ, ನಗರಸಭೆ ಹಿರಿಯ ಸದಸ್ಯ ಎಸ್.ಎ.ಕೋತವಾಲ, ಸಿದ್ದಲಿಂಗ ದಳವಾಯಿ, ಟಿ.ಆರ್. ಕಾಗಲ ಸಾಥ, ಮಡ್ಡೆಪ್ಪ ತೋಳಿನವರ ಸೇರಿಂದತೆ ನಗರಸಭೆ ಸದಸ್ಯರು, ಅಧಿಕಾರಿ ವರ್ಗದವರು ಸಾಥ್ ನೀಡಿದ್ದರು.
“ಮಾಜಿ ಸಚಿವ ರಮೇಶ ಜಾರಕಿಹೊಳಿ ನಗರದ ಪ್ರವಾಹ ಪೀಡಿತರ ಗಂಜಿ ಕೇಂದ್ರಗಳಿಗೆ ಗೋಕಾಕ ರಮೇಶ ಜಾರಕೊಹೊಳಿ ಭೇಟಿ ನೀಡಿದರು. ಪ್ರವಾಹ ಸ್ಥಿತಿಯ ಮತ್ತು ಪರಿಹಾರ ಕಾರ್ಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು ಜನರಿಗೆ ಎಲ್ಲ ಸೌಲಭ್ಯಗಳನ್ನು ವಿತರಿಸಲು ಸೂಚಿಸಿದ್ದಾರೆ. ನಗರದ ಎಲ್ಲ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಜನರಲ್ಲಿ ಧೈರ್ಯ ತುಂಬಿ ಸಾಂತ್ವನ ಹೇಳಿದರು.” ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ