Kannada NewsLatest

ಶನಿವಾರದ ರಜೆಯೂ ಇಲ್ಲ, ಭಾನುವಾರದ ಲಾಕ್ ಡೌನ್ ಕೂಡ ಇಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಅನ್ ಲಾಕ್ 3.0 ಜಾರಿಗೊಳಿಸಲಾಗಿದೆ. ಇದರನ್ವಯ ಇನ್ನು ಮುಂದೆ ಭಾನುವಾರದ ಲಾಕ್ ಡೌನ್ ಇರುವುದಿಲ್ಲ. ಹಾಗೆಯೇ ಶನಿವಾರದ ಸರಕಾರಿ ರಜೆಯನ್ನೂ ರದ್ದುಪಡಿಸಲಾಗಿದೆ.

ಜೊತೆಗೆ, ರಾತ್ರಿ ಕರ್ಫ್ಯೂವನ್ನು ತೆಗೆದುಹಾಕಲಾಗಿದೆ.

ಕೇಂದ್ರ ಸರಕಾರದ ಅನ್ ಲಾಕ್ 3.0 ನಿಯಮಾವಳಿಗಳನ್ನೇ ಅನುಸರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಹಾಗಾಗಿ ಆಗಸ್ಟ್ ಕೊನೆಯವರೆಗೂ ಶಾಲೆ, ಕಾಲೇಜು ಆರಂಭವಾಗುವದಿಲ್ಲ. ಆ.5ರಿಂದ ಜಿಮ್ ಗಳು ಶುರುವಾಗಲಿವೆ. ಸಿನೇಮಾ ಥಿಯೇಟರ್, ಸ್ವಿಮ್ಮಿಂಗ್ ಫೂಲ್, ದವಸ್ಥಾನಗಳು, ಪ್ರರ್ಥನಾ ಮಂದಿರಗಳು ಸಧ್ಯಕ್ಕೆ ಆರಂಭವಾಗುವುದಿಲ್ಲ.

ಲಾಕ್ ಆರಂಭವಾದ ಸಂದರ್ಭದಲ್ಲಿ ರಾಜ್ಯದಲ್ಲಿ 2 ಮತ್ತು 4 ನೇ ಶನಿವಾರಗಳಂತೆ 1 ಮತ್ತು 3ನೇ ಶನಿವಾರ ಕೂಡ ಸರಕಾರಿ ರಜೆ ಘೋಷಿಸಲಾಗಿತ್ತು. ಆದರೆ ಇನ್ನು ಮಂದೆ 1 ಮತ್ತು 3ನೇ ಶನಿವಾರ ರಜೆ ಇರುವುದಿಲ್ಲ. ಅಂದರೆ ಎಲ್ಲವೂ ಮಾಮೂಲಿನಂತೆ ನಡೆಯಲಿದೆ.

ಶಿಕ್ಷಕರ ವರ್ಕ್ ಫ್ರಾಮ್ ಹೋಮ್ ಭಾನುವಾರಕ್ಕೆ ಮುಕ್ತಾಯವಾಗಲಿದ್ದು, ಸೋಮವಾರದಿಂದ ಶಾಲೆಗಳಿಗೆ ತೆರಳಬೇಕಿದೆ. ವಿದ್ಯಾಗಮನ ಎನ್ನುವ ನೂತನ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೊಳಿಸಿದ್ದು, ಅದರಂತೆ ಶಿಕ್ಷಕರು ಕಾರ್ಯನಿರ್ವಹಿಸಬೇಕಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button