ಸಿಬಿಐ ಜೊತೆ ಟ್ರಂಪ್ ಬಂದ್ರೂ ಅಭ್ಯಂತರವಿಲ್ಲ
ಪ್ರಗತಿವಾಹಿನಿ ಸುದ್ದಿ : ಕರ್ನಾಟಕದಲ್ಲಿ ಈ ಹಿಂದೆ ಫೋನ್ ಟ್ಯಾಪಿಂಗ್ ವಿಚಾರ ಮುಖ್ಯಮಂತ್ರಿಗಳನ್ನು, ಜೊತೆಗೆ ಮಾಜಿ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇದೀಗ ತಾಜಾ ಫೋನ್ ಟ್ಯಾಪಿಂಗ್ ವಿವಾದ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನೆತ್ತಿಯ ಮೇಲೆ ತೂಗಾಡುತ್ತಿದೆ. ಆರೋಪ ಪ್ರತ್ಯಾರೋಪಗಳು ಬಿರುಸಾಗಿಯೇ ಸಾಗಿವೆ.
ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಟ್ಯಾಪಿಂಗ್ ವಿವಾದವನ್ನು ಸಧ್ಯ ಸಿಬಿಐ ಗೆ ಒಪ್ಪಿಸಿದ್ದಾರೆ . ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರು ಸೇರಿದಂತೆ ಪೊಲೀಸರು, ಅಧಿಕಾರಿಗಳು, ಮಾಧ್ಯಮಗಳು, ಸಿನಿತಾರೆಯರು ಸೇರಿದಂತೆ ಫೋನ್ ಕದ್ದಾಲಿಕೆ ನಡೆದಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸಲ್ಲಿಸಿದ ವರದಿಯ ಆಧಾರದ ಮೇಲೆ ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಅಧಿಕಾರದ ಸಮಯದಲ್ಲಿ, ಪ್ರಸ್ತುತ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕೆಲವು ರಾಷ್ಟ್ರೀಯ ನಾಯಕರೊಂದಿಗೆ ನಡೆಸಿರುವ ಫೋನ್ ಸಂಭಾಷಣೆ ವೈರಲ್ ಆಗಿದೆ. ಸುಮಾರು ೩೦೦ ಕ್ಕೂ ಹೆಚ್ಚು ಜನರ ಫೋನ್ ಟ್ಯಾಪಿಂಗ್ ನಡೆದಿದೆ ಎಂಬ ಆರೋಪಗಳು ಬರುತ್ತಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ” ಸಿಬಿಐ ಮಾತ್ರವಲ್ಲ, ಸ್ವತಃ ಟ್ರಂಪ್ ಬಂದು ವಿಚಾರಣೆ ಮಾಡಿದರು ಯಾವುದೇ ಆಕ್ಷೇಪವಿಲ್ಲ ” ಎಂದು ಹೇಳಿದ್ದಾರೆ. ಯಾವ ವಿಚಾರಣೆಗೂ ನನ್ನ ಅಭ್ಯಂತರ ಇಲ್ಲ ಎಂದಿದ್ದಾರೆ.
ಇದೆ ವಿಚಾರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ” ಫೋನ್ ಟ್ಯಾಪಿಂಗ್ ಅಲ್ಲ, ಆಪರೇಷನ್ ಕಮಲದ ಬಗ್ಗೆಯೂ ಸಹ ಸಿಬಿಐ ವಿಚಾರಣೆ ನಡೆಯಬೇಕು, ಎಂದು ಒತ್ತಾಯಿಸಿದ್ದಾರೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ