Belagavi NewsBelgaum NewsElection NewsKannada NewsKarnataka NewsPolitics

ಚುನಾವಣೆ ನಂತರ ಮತ್ತೆ ಡಬಲ್ ಇಂಜಿನ್‌ ಸರಕಾರ ಬರಲಿದೆ: ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿಳಲಿದೆ. ಬಳಿಕ ಮತ್ತೆ ಡಬಲ್ ಇಂಜಿನ್‌ ಸರಕಾರ ಬರಲಿದೆ ಎಂದು ಬೆಳಗಾವಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.‌

Home add -Advt

ಶನಿವಾರ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಈಗಿನ ಸಿಂಗಲ್ ಇಂಜಿನ್ ಸರಕಾರ ಕೆಡವಿ ಡಬಲ್ ಇಂಜಿನ್ ಸರಕಾರ ತರೋಣ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.‌

ಜನರಿಗೆ ಮೋಸ ಮಾಡುತ್ತಿರುವ ಈಗಿನ ಸರ್ಕಾರ ನಂಬಬೇಡಿ. ಶಾಶ್ವತ ಹಾಗೂ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರಕಾರವನ್ನು ಬೆಂಬಲಿಸಿ.‌ ಲೋಕಸಭಾ ಚುನಾವಣೆ ನಂತರ ಈ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳು ಬಂದಾಗುತ್ತವೆ. ಕರೆಂಟ್ ಹೋಗುತ್ತದೆ. 2000 ರೂ ಬಂದಾಗುತ್ತದೆ. ಬಸ್ ಪಾಸ್ ಹೋಗುತ್ತದೆ. ಈ ಎಲ್ಲ ಗ್ಯಾರಂಟಿಗಳು ತಾತ್ಕಾಲಿಕ ಎಂದರು.

Related Articles

Back to top button