Kannada NewsLatest

ಬಾಲಾರೋಪಿ ಸೇರಿ ಐವರು ಸರಗಳ್ಳರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರಗಳ್ಳತನ, ಚಿನ್ನಾಭರಣ ದೋಚಿ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಾರೋಪಿ ಸೇರಿದಂತೆ ಐವರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲಿಸರು ಬಂಧಿಸಿದ್ದಾರೆ.

ಕಳ್ಳತನ ಮಾಡಿದ ಬಂಗಾರದ ಆಭರಣಗಳು ಮತ್ತು ಆರೋಪಿತರ ಬಗ್ಗೆ ತಪಾಸ ಮಾಡುತ್ತಿರುವಾಗ ಹಾರೂಗೇರಿಯ ವಡಕಿ ತೋಟದಲ್ಲಿ ಮೂವರು ಶಂಕಿತರು ಬೈಕ್ ನಲ್ಲಿ ಸಂಶಾಯಸ್ಪದವಾಗಿ ಓಡಾಡುತ್ತಿದ್ದರು. ಮೂವರನ್ನು ವಶಕ್ಕೆ ಪಡೆದ ಹಾರೂಗೇರಿ ಠಾಣೆ ಪೊಲೀಸರು, ವಿಚಾರಣೆ ನಡೆಸಿದಾಗ ಹಾರೂಗೇರಿ, ಮುಗಳಖೋಡ, ತೇರದಾಳ ಗ್ರಾಮಗಳಲ್ಲಿ ಮಹಿಳೆಯರ ಕೊರಳಲಿದ್ದ ಬಂಗಾರದ ಆಭರಣಗಳನ್ನು ಕಿತ್ತು ಪರಾರಿಯಾಗಿದ್ದ ಬಗ್ಗೆ ಹಾಗೂ ಹಾರೂಗೇರಿ ವ್ಯಾಪ್ತಿಯಲ್ಲಿ 5 ಎಮ್ಮೆಗಳನ್ನು ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ಇನ್ನೂ ಇಬ್ಬರ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಓರ್ವ ಬಾಲಾರೋಪಿ ಸೇರಿ ಐವರನ್ನು ಬಂಧಿಸಿದ್ದಾರೆ.

ಒಟ್ಟು 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಿಂದ 49.5 ಗ್ರಾಂ ಬಂಗಾರದ ಆಭರಣ ಅ.ಕಿ, 2,09,000/- ರೂ, ಮತ್ತು ಎಮ್ಮೆಗಳು-3 ಅ.ಕಿ. 1,90,000/- ರೂ. ಮತ್ತು ಅಪರಾಧಕ್ಕೆ ಉಪಯೋಗಿಸಿದ 2 ಮೋಟರ ಸೈಕಲ್ ಮತ್ತು 1 ಮಿನಿ ಗೂಡ್ಡ ವಾಹನ ಅ.ಕಿ. 2,95,000/- ರೂ. ( ಒಟ್ಟು ಮೌಲ್ಯ- 6,94,000/-ರೂ ) ಇವುಗಳನ್ನು ಜಪ್ತಿ ಮಾಡಲಾಗಿದೆ.

ಸದರಿ ಪ್ರಕರಣದ ಪತ್ತೆ ಕಾರ್ಯವನ್ನು ಶ್ರೀಪಾದ ಡಿ ಅಲ್ಲೆ ಡಿಎಸ್‌ಪಿ ಅಥಣಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಕೆ. ಎಸ್. ಹಟ್ಟ. ಸಿಪಿಐ ಹಾರೂಗೇರಿ ವೃತ್ತ, ಆರ್. ಆರ್. ಕಂಗನೋಳ್ಳಿ. ಪಿಎಸ್‌ಐ(ತನಿಖೆ), ಆರ್. ಎಸ್. ಖೋತ, ಪಿಎಸ್‌ಐ (ಕಾ ಮತ್ತು ಸು), ಮತ್ತು ಸಿಬ್ಬಂದಿ ಜನರಾದ ಕುಮಾರ ಪವಾರ, ರಾಜು ಕಟೀಕರಿ, ಅಶೋಕ ಶಾಂಡಗೆ, ಬಸವರಾಜ ಹೊಸಟ್ಟಿ, ಹಣಮಂತ ಅಂಬಿ, ಜಿ ಎನ್ ಕಾಗವಾಡ, ಪ್ರಕಾಶ ಸಪ್ತಸಾಗರ, ಸಾಗರ ಕಾಂಬಳೆ, ರಮೇಶ ಕೇತ್ರಿ, ವಿನೋದ ಠಕ್ಕಣ್ಣವರ (ಟೆಕ್ನಿಕಲ್ ಸೆಲ್), ಇತರರು ಪತ್ತೆ ಕಾರ್ಯದಲ್ಲಿ ಮತ್ತು ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ತನಿಖಾ ತಂಡವನ್ನು ಮಾನ್ಯ ಎಸ್.ಪಿ ಬೆಳಗಾವಿ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ; ರೆಡ್ ಹ್ಯಾಂಡ್ ಆಗಿ ಬಲಗೆ ಬಿದ್ದ ಜಂಟಿ ಆಯುಕ್ತ, ಪಿಎ

https://pragati.taskdun.com/latest/lokayuktaraidbbmptwo-officers-arrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button