
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಿಯಕರ ಖರ್ಚಿಗೆ ಹಣವಿಲ್ಲ ಎಂದಿದ್ದಕ್ಕೆ ಪ್ರಿಯತಮೆ ತನ್ನ ದೊಡ್ಡಪ್ಪನ ಮನೆಯಲ್ಲಿಯೇ ಕಳ್ಳತನ ಮಾಡಿಸಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ನೆಲಗದರಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆರೋಪಿಗಳಾದ ಬೀಕಾಂ ವಿದ್ಯಾರ್ಥಿನಿ ದೀಕ್ಷಿತಾ ಹಾಗೂ ಮೆಡಿಕಲ್ ವಿದ್ಯಾರ್ಥಿ ಮಧು ಇಬ್ಬರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಉತ್ತರ ತಾಲೂಕಿನ ನೆಲಗದಿರನಹಳ್ಳಿಯಲ್ಲಿ ತಿಮ್ಮೇಗೌಡ ಎಂಬುವವರ ಮನೆಯಲ್ಲಿ 90 ಸಾವಿರ ನಗದು, 200 ಗ್ರಾಂ ಚಿನ್ನಾಭರಣವನ್ನು ಆರೋಪಿಗಳು ಕದ್ದು ಪರಾರಿಯಾಗಿದ್ದರು. ಬಂಧಿತ ಆರೋಪಿಗಳಿಂದ 30,000 ನಗದು, 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ದೊಡ್ಡಪ್ಪನ ಮನೆಯನ್ನು ದೋಚಲು ಮೊದಲೇ ಪ್ಲಾನ್ ಮಾಡಿದ್ದ ಆರೋಪಿಗಳು ಮಾಟ-ಮಂತ್ರದ ವಸ್ತುಗಳನ್ನು ಮನೆಯ ಕಾಂಪೌಂಡ್ ನಲ್ಲಿ ಇಟ್ಟು ಮನೆಯವರ ಗಮನ ಬೇರೆಡೆ ಸೆಳೆದು ಕೃತ್ಯವೆಸಗಿದ್ದರು. ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಮಧು ಪಿಪಿಇ ಕಿಟ್ ಧರಿಸಿ ಬೈಕ್ ನಲ್ಲಿ ಬಂದು ಕೃತ್ಯವೆಸಗಿದ್ದ. ಮಾಟ ಮಂತ್ರಗಳ ವಸ್ತು ಶುಚಿಗೊಳಿಸುವ ವೇಳೆ ಮಹಡಿಗೆ ತೆರಳಿ 90 ಸಾವಿರ ಹಣ, 200 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದ.
ವ್ಯಕ್ತಿಯೊಬ್ಬ ಪಿಪಿಇ ಕಿಟ್ ಧರಿಸಿ ಮನೆಗೆ ಬಂದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ಹಾಗೂ ಮೊಬೈಲ್ ಟವರ್ ಲೊಕೇಷನ್ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭೀಕರ ಅಪಘಾತ; ರಾಜ್ಯದ ಇಬ್ಬರು ಪೊಲಿಸ್ ಸಿಬ್ಬಂದಿ ಸೇರಿ ಮೂವರ ದುರ್ಮರಣ
https://pragati.taskdun.com/crime-news/ajmer-dargah-cleric-salman-chishtiarrestednupur-sharma/