Belagavi NewsBelgaum NewsKannada NewsKarnataka News
*ಪಾನ್ ಶಾಪ್ ಗೆ ನುಗ್ಗಿ ಸಿಗರೇಟ್, ಗುಟಕಾ ಕದ್ದ ಕಳ್ಳ: ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ಗ್ರಾಮದಲ್ಲಿ ಕಳ್ಳನೊಬ್ಬ ಪಾನ್ ಶಾಪ್ ಗೆ ನುಗ್ಗಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಪಾನ್ ಶಾಪ್ ಅಂಗಡಿ ಬೀಗ ಮುರಿದು ಕಳ್ಳ ಅಂಗಡಿಗೆ ನುಗ್ಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬನ್ನೂರ ಗ್ರಾಮದ ನಿವಾಸಿ ಪ್ರಕಾಶ ಕುಂದ್ರಾಳಗೆ ಸೇರಿದ ಪಾನ್ ಶಾಪ್ ಅಂಗಡಿ ಇದಾಗಿದ್ದು, ತಡರಾತ್ರಿ ಇಬ್ಬರು ಕಳ್ಳರು ಆಗಮಿಸಿ ಪಾನ್ ಶಾಪ್ ಬೀಗ ಮುರಿದು ಕಳ್ಳತನಮಾಡಿದ್ದಾರೆ.
ತಟ್ಟೆಯಲ್ಲಿದ್ದ ಸಿಗರೇಟ್ ಪ್ಯಾಕೆಟ್, ಗುಟಕಾ ಪ್ಯಾಕೆಟ್ ಕದ್ದೊಯ್ಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರ ಕೈಚಳಕ ಸಂಪೂರ್ಣ ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ರಾಮದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.