Belagavi NewsBelgaum NewsKannada NewsKarnataka News

*ಹಗಲಿನಲ್ಲೇ ಮನೆಯ ಬಾಗಿಲು ಮುರಿದು  ಕಳ್ಳತನ ಮಾಡಿ ಪರಾರಿಯಾದ ಕಳ್ಳರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚನ್ನಮ್ಮನ ಕಿತ್ತೂರಿನ ವಿದ್ಯಾಗಿರಿಯಲ್ಲಿ ಹಗಲಿನಲ್ಲೇ ಮನೆಯ ಬಾಗಿಲು ಮುರಿದು ಚಿನ್ನಾಭರಣ, ನಗದು ಸೇರಿದಂತೆ ಒಟ್ಟು ರೂ 11.6 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಕಳ್ಳರು ಪರಾರಿಯಾದ ಘಟನೆ ಸೋಮವಾರ ಜರುಗಿದ್ದು, ಸ್ಥಳಕ್ಕೆ ಶ್ವಾನದಳ ತಂಡ ಬೇಟಿ ಪರಿಶೀಲನೆ ನಡೆದಿದೆ. 

ಪಟ್ಟಣದ ವಿದ್ಯಾಗಿರಿಯಲ್ಲಿ ಶಂಕರ ಇಟಗಿ ಎಂಬುವರಿಗೆ ಸೇರಿದ ಮನೆಯಲ್ಲಿ ಹಗಲು ಹೊತ್ತಿನಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕನ್ನ ಹಾಕಿದ ಕಳ್ಳರು, ಹಿತ್ತಲು ಬಾಗಿಲನ್ನು ಮುರಿದು ಒಳಗೆ ಪ್ರವೇಶ ಮಾಡಿದ್ದಾರೆ. ಅಲ್ಲಿದ್ದ ನಾಲ್ಕು ಲಾಕರ್ ಗಳನ್ನು ಮುರಿದು ಅವುಗಳಲ್ಲಿದ್ದ ಬಂಗಾರದ ಆಭರಣಗಳಾದ ಗಂಟನ್‍ಗಳು, ಕಿವಿಯೋಲೆ, ಉಂಗುರಗಳು ಸೇರಿದಂತೆ ಒಟ್ಟು 100 ಗ್ರಾಂ ಬಂಗಾರದ ಆಭರಣ, 500 ಗ್ರಾಂ ಬೆಳ್ಳಿಯ ವಸ್ತುಗಳು, ಜೊತೆಗೆ ರೂ 5.3 ಲಕ್ಷ ನಗದು ಹಣ ಸೇರಿದಂತೆ ಹಲವು ವಸ್ತುಗಳು ದೋಚಿಕೊಂಡು ಐನಾತಿ ಕಳ್ಳತು ಪರಾರಿಯಾಗಿದ್ದಾರೆ. 

ಈ ಕುರಿತು ಕಿತ್ತೂರ ಪೋಲಿಸ್ ಠಾಣೆಯಲ್ಲಿ  ಮಂಗಳವಾರ ಪ್ರಕರಣ ದಾಖಲಾಗಿದೆ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್ ಬಿ ಬಸರಗಿ, ಡಿ ವಾಯ್ ಎಸ್ ಪಿ ರವಿ ನಾಯಕ, ನಂದಗಡ ಸಿ ಪಿ ಆಯ್ ಎಸ್ ಸಿ ಪಾಟೀಲ, ಪಿ ಎಸ್ ಆಯ್ ಪ್ರವೀಣ ಗಂಗೋಳ ಸೇರಿದಂತೆ ಸಿಬ್ಬಂದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ, ಬೆರಳಚ್ಚು ತಂಡ, ಶ್ವಾನ ದಳ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button