ಪ್ರಗತಿವಾಹಿನಿ ಸುದ್ದಿ: ಪೇಂಟ್ ಗೆ ಬಳಸುವ ಥಿನ್ನರ್ ಸೇವಿಸಿದ 3 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದಲ್ಲಿ ನಡೆದಿದೆ.
ಶಿವಾರ್ಜುನ (3) ಮೃತ ಬಾಲಕ. ರಮೇಶ್ ನಾಯಕ್ ಎಂಬುವವರ ಪುತ್ರ. ಗ್ರಾಮದಲ್ಲಿ ಜಾತ್ರೆ ಹಿನ್ನೆಲೆಯಲ್ಲಿ ಮನೆಗೆ ಪೇಂಟಿಂಗ್ ಮಾಡಬೇಕು ಎಂದು ಪೇಂಟಿಂಗ್ ಗೆ ಬಳಸು ಥಿನ್ನರ್ ತರಲಾಗಿತ್ತು. ಬಾಲಕ ಶಿವಾರ್ಜುನನ ಕೈಗೆ ಥಿನ್ನರ್ ಬಾಟಲ್ ಸಿಕ್ಕಿದ್ದು, ಅದನ್ನು ಕುಡಿದುಬಿಟ್ಟಿದ್ದಾನೆ. ತೀವ್ರವಾಗಿ ಅಸ್ವಸ್ಥನಾಗಿದ್ದ ಬಾಲಕನನ್ನು ಮಾನ್ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಮಾನ್ವಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ