Kannada NewsKarnataka NewsLatest

 ಕುಡಿದಾಗ ಮಾತ್ರ ಟ್ರೀಟ್ಮೆಂಟ್ ಮಾಡ್ತಾಳೆ ಈ ರೌಡಿ ನರ್ಸ್ 

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ: ಯಾರು ದೇವರನ್ನು ನೋಡಿದ್ದಾರೆ ಗೊತ್ತಿಲ್ಲ. ಆದರೆ ಅಧುನಿಕ ಕಾಲದಲ್ಲಿ ವೈದ್ಯರಿಗೆ ವೈದ್ಯೋ ನಾರಾಯಣ ಹರಿ ಎನ್ನುವ ಈಗಿನ ಕಾಲದಲ್ಲಿ  ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಎಷ್ಟು ಮಾನ ಕೊಟ್ಟಿದ್ದೇವೆ. ಆದರೆ ಒಬ್ಬ ಹೆಣ್ಣು ನರ್ಸ್ ಸಾರಾಯಿ ಕುಡಿದು ರೋಗಿಗಳಿಗೆ ಚಿಕಿತ್ಸೆ ನೀಡುವುದು , ರಾಜಾರೋಷವಾಗಿ ಸಿಗರೇಟ್ ಸೇದಿ ಹೊಗೆ ಬಿಡುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
 ಗೋಕಾಕ್ ತಾಲೂಕಿನ ಘಟಪ್ರಭಾ ಸಮೀಪದ ಶಿಂದಿಕುರಬೇಟದಲ್ಲಿ ಆರೋಗ್ಯ ಕ್ಷೇಮ ಕೇಂದ್ರದ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಸಾರ್ವಜನಿಕರು ತಮ್ಮ ರೋಗಗಳನ್ನು ಗುಣಪಡಿಸಿಕೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿ ಸಿಬ್ಬಂದಿಯ ನರ್ಸೊಬ್ಬಳು ಸಾರಾಯಿ ಕುಡಿದು ಸಿಗರೇಟ್ ಸೇದಿ ತನ್ನ ಕುಡಿದ ಅಮಲಿನಲ್ಲಿ ರೋಗಿಗಳ ಚಿಕಿತ್ಸೆ ಮಾಡುವುದರ ಜೊತೆಗೆ  ಇಂಜೆಕ್ಷನ್ ಗಳಿಗೆ ಹಣ ಪಡೆಯುವ ದೃಶ್ಯಗಳು ರಾರಾಜಿಸುತ್ತಿವೆ.
ಅದಲ್ಲದೆ ಬಂದ ರೋಗಿಗಳಿಗೆ ಏಕವಚನದಲ್ಲಿ ನೀನಗೇನಾಗಿದೆ ಎಂದು ಏಕವಚನದಲ್ಲಿ ಮಾತನಾಡಿಸುತ್ತಾಳೆ.
ಸರಕಾರಿ ಕೆಲಸ ದೇವರ ಕೆಲಸ ಎಂದು ಮಾಡುವ ಸರ್ಕಾರಿ ನೌಕರರಿಗೆ ಇದೆಂತಾ ಕೆಲಸ ಅನ್ನುವಂತಾಗಿದೆ,
ಶಿಂದಿಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಮಹಿಳೆ ಹಾಡುಹಗಲೇ ಸಾರಾಯಿ ಕುಡಿದು ಇಂಜೆಕ್ಷನ್ ಮಾಡುವುದು ಬೆಳಕಿಗೆ ಬಂದ ತಕ್ಷಣ ಸ್ಥಳಿಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಇನ್ನು ಮೇಲಾದರೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಮೇಲೆ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button