Belagavi NewsBelgaum NewsElection NewsKannada NewsKarnataka NewsNational

*ವಕ್ಫ್ ಬೋರ್ಡ್ ತಿದ್ದುಪಡಿ ವಿರೋಧಿಸುವವರು ದೇಶದ್ರೋಹಿಗಳು: ಪ್ರಮೋದ ಮುತಾಲಿಕ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಕ್ಫ್‌ ಬೋರ್ಡ್ ತಿದ್ದುಪಡಿ ‌ವಿಧೇಯಕ ಮಂಡನೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಜ್ಯಸಭೆಯಲ್ಲಿ ವಕ್ಫ್‌ ಬೋರ್ಡ್ ತಿದ್ದುಪಡಿ ವಿಧೇಯಕ ಮಂಡನೆ ವಿಚಾರವಾಗಿ ಶ್ರೀರಾಮ‌ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಪ್ರತಿಕ್ರಿಯೆ ನೀಡಿದ್ದಾರೆ. 

ಬೆಳಗಾವಿಯಲ್ಲಿ “ಲವ್ ಜೀಹಾದ ಪುಸ್ತಕ” ಬಿಡುಗಡೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾರ್ಲಿಮೆಂಟ್ ನಲ್ಲಿ ನಿನ್ನೆ ವಕ್ಫ್‌ ಬೋರ್ಡ್ ನಲ್ಲಿ ಚರ್ಚೆ ನೋಡಿದ್ರೆ ವಿರೋಧ ಪಕ್ಷಕ್ಕೆ ರೈತರು ಬೇಕಾಗಿಲ್ಲ, ಹಿಂದೂಗಳು ಬೇಕಾಗಿಲ್ಲ, ಭಾರತ ಸುರಕ್ಷತೆ ಬೇಕಾಗಿಲ್ಲ. ಪ್ರತಿಪಕ್ಷಗಳಿಗೆ ಕೇವಲ ಮುಸ್ಲಿಂರ ಸುರಕ್ಷತೆ ಬೇಕಾಗಿದೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆಗೆ ಮುಸ್ಲಿಂರ ತುಷ್ಟಿಕರಣ ಬೇಕಾಗಿದೆ.‌ ಸುಪ್ರೀಂ ಕೋರ್ಟ್‌ಗೂ ವಕ್ಫ್‌ ಬೋರ್ಡ್ ಸಂಬಂದವಿಲ್ಲ. ಅದನ್ನು ತಿದ್ದುಪಡಿ ಮಾಡಿದ್ದಕ್ಕೆ ವಿರೋಧಿಸುತ್ತಾರೆ. ಇವರಿಗೆ ಬೇಕಾಗಿರೋದು ಮುಸ್ಲಿಂರ ತುಷ್ಟಿಕರಣ. ಇಬ್ಬರೂ ಮುಸ್ಲಿಂ ಸಂಸದರು, 10 ಜನ ಇತರೆ ಪಕ್ಷದ ಹಿಂದೂ‌ ಸಂಸದರು ವಿರೋಧ ಮಾಡಿದ್ರು. ವಕ್ಫ್ ಬೋರ್ಡ್ ಗೆ ವಿರೋಧಿಸುವವರು ದೇಶದ್ರೋಹಿಗಳು ಎಂದರು.‌

ಇಷ್ಟಾದ್ರು ಪೀರನವಾಡಿಯಲ್ಲಿ ರೈತರಿಗೆ ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ. ವಕ್ಫ್ ಬೋರ್ಡ್ ತಿದ್ದುಪಡಿ ವಿರೋಧಿಸುವವರು ನೀಚರು, ದೇಶದ್ರೋಹಿಗಳು. ಪಾರ್ಲಿಮೆಂಟ್ ಮತ್ತು ರಾಜ್ಯಸಭಾದಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಕಾಯ್ದೆ ನೂರಕ್ಕೆ ನೂರರಷ್ಟು ಅಂಗೀಕಾರ ಆಗಲಿದೆ. ಮುಸ್ಲಿಂರು ವಿರೋಧ ಮಾಡ್ತಾರೆ, ಆದ್ರೆ ಮುಸ್ಲಿಂರಿಗೆ ಹುಟ್ಟಿದವಂತೆ ಪ್ರತಿಪಕ್ಷದ ಕೆಲವರು ವರ್ತಿಸುತ್ತಿದ್ದಾರೆ. ಮುಸ್ಲಿಂರಿಗೆ ಸಂವಿಧಾನ ಮೀರಿ ವಕ್ಫ್‌ ಬೋರ್ಡ್ ರಚನೆ ಮಾಡಿದ್ದು ಕಾಂಗ್ರೆಸ್. ಪಿಎಫ್ಐನಂತೆ ಎಸ್‌ಡಿಪಿಐ ಕೂಡ ಬ್ಯಾನ್ ಮಾಡಬೇಕು. ಎಸ್‌ಡಿಪಿ ಸಹ ದೇಶದ್ರೋಹ ಕೃತ್ಯ ಮಾಡ್ತಿದೆ ಎಂದು ಮುತಾಲಿಕ ಕಿಡಿಕಾರಿದರು. 

Home add -Advt

Related Articles

Back to top button