Kannada NewsLatest

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು: ಅನಿಲ ಪೋತದಾರ

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು: ಅನಿಲ ಪೋತದಾರ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಇತಹಾಸ ಪರಂಪರೆಯುಳ್ಳ ಗಂಗಾವತಿಯ ಆನೆಗುಂದಿಯಲ್ಲಿರುವ ವ್ಯಾಸರಾಯರ ವೃಂದಾವನವನ್ನು ದುಷ್ಕರ್ಮಿಗಳು ಕೆಡವಿ ಧ್ವಂಸಗೊಳಿಸಿದ್ದಾರೆ. ವ್ಯಾಸರಾಯರು ಒಂದೇ ದರ್ಮಕ್ಕೆ ಸೀಮಿತರಾದವರಲ್ಲ. ಇದೊಂದು ದೇಶದ ಇತಿಹಾಸದ ಪುಟಗಳ ಒಂದು ಕಪ್ಪು ಚುಕ್ಕೆ. ಈ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬ್ರಾಹ್ಮಣ ಸಮಾಜದ ಮುಖಂಡ ಅನಿಲ ಪೋತದಾರ ಇಂದಿಲ್ಲಿ ಹೇಳಿದರು.

ವ್ಯಾಸರಾಯರ ವೃಂದಾವನವನ್ನು ದುಷ್ಕರ್ಮಿಗಳು ಕೆಡವಿ ಧ್ವಂಸಗೊಳಿಸಿರುವ ಹಿನ್ನಲೆಯಲಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹರಿದಾಸ ಸೇವಾ ಸಮಿತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಬೆಳಗಾವಿ ಘಟಕ, ವಿಶ್ವ ಮಧ್ವ ಮಹಾಪರಿಷತ್ತು ಬೆಳಗಾವಿ ಘಟಕ, ಬೆಳಗಾವಿ, ವಿಶ್ವಹಿಂದೂ ಪರಿಷತ್ತು ಅಲ್ಲದೇ ಎಲ್ಲ ಭಜನಾ ಮಂಡಳಿಗಳು ಹಾಗೂ ಅಖಂಡ ಬ್ರಾಹ್ಮಣ ಸಮಾಜದವರು ಸೇರಿ ಪ್ರತಿಭಟನಾ ಸಭೆಯನ್ನು ಕರೆದಿದ್ದರು. ಸಭೆಯನು ಉದ್ದೇಶಿಸಿ ಮಾತನಾಡುತ್ತ ಅನಿಲ ಪೋತದಾರ ಅವರು ಮೇಲಿನಂತೆ ಅಭಿಪ್ರಾಯ ಪಟ್ಟ ಅವರು ಲೋಕಸಭೆಯಲ್ಲಿಯೂ ಕೂಡ ಈ ಕುರಿತಂತೆ ಚರ್ಚೆಯಾಗಿದೆ. ಸರ್ಕಾರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನು ವಿಧಿಸಬೇಕು ಎಂದು ಹೇಳಿದರು.

ಪಂ. ಪ್ರಮೋದಾಚಾರ್ಯ ಕಟ್ಟಿ ಅವರು ಮಾತನಾಡಿ ಗಂಗಾವತಿಯಲ್ಲಿರುವ ವ್ಯಾಸರಾಯರ ವೃಂದಾವನವನ್ನು ಸರಕಾರವೇ ವಿಶ್ವ ಸಾಂಸ್ಕೃತಿಕ ನೆಲೆಯೆಂದು ಘೋಷಿಸಿದೆ. ಅಲ್ಲದೇ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದೆ. ವ್ಯಾಸರಾಯರು ಎಲ್ಲ ವರ್ಗದ ಜನರಿಗೂ ಶಿಕ್ಷಣ ಕೊಡುತ್ತಿದ್ದರೆಂದು ಶಿಲಾಶಾಸನಗಳಿಂದ ತಿಳಿದು ಬರುತ್ತದೆ. ಇಂಥ ಮಹಾಮಹಿಮರ ಸಮಾಧಿಯನ್ನು ಧ್ವಂಸಗೊಳಿಸಿರುವುದು ನಿಜಕ್ಕೂ ತುಂಬ ದುಃಖದ ಸಂಗತಿ. ಸರ್ಕಾರ ತಪ್ಪಿತಸ್ಥರನ್ನ ಗುರುತಿಸಿ ಕಠಿಣ ಶಿಕ್ಷೆ ನೀಡಲೇಬೇಕು ಎಂದು ಹೆಳಿದರು.Those who did wrong must be punished says Anila potadara 1

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದ ಕರ‍್ಯದರ್ಶಿಗಳಾದ ಆರ್. ಎಸ್. ಮುತಾಲಿಕ ಅವರು ಮಾತನಾಡಿ ಇದು ಕೇವಲ ಬ್ರಾಹ್ಮಣ ಸಮಾಜಕ್ಕಾದ ಅನ್ಯಾಯವಲ್ಲ ಸಮಗ್ರ ಹಿಂದೂ ಸಮಾಜಕ್ಕಾದ ಅನ್ಯಾಯ. ಮಂದೆ ಹೀಗಾಗದಂತೆ ಸರ್ಕಾರ ರಕ್ಷಣೆಯನ್ನು ನೀಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು.

ವಿಶ್ವಹಿಂದೂ ಪರಿಷತ್ತ ಜಿಲ್ಲಾಧ್ಯಕ್ಷರಾದ ಬಿ. ಡಿ. ಸಿಂಧೆ ಅವರು ಮಾತನಾಡಿ ಗಣಪತಿ ಉತ್ಸವ ಮುಂತಾದ ಸಂಧರ್ಭದಲ್ಲಿ ಹಿಂದೂಗಳ ಮೇಲೆ ಅನ್ಯಾಯವಾಗುತ್ತಲೇ ಬಂದಿದೆ. ಹಿಂದುಗಳು ನಾವೆಲ್ಲ ಒಂದಾದಾಗ ಮಾತ್ರ ಇಂಥ ದುರ್ಘಟಣೆಗಳಿಂದ ಬದುಕುಳಿಯಲು ಸಾಧ್ಯ. ಸಮಾಜಘಾತುಕ ಇಂಥ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯಾಗಲೇ ಬೇಕು ಎಂದು ಅವರು ಹೇಳಿದರು.

ಸಭೆ ಮುಗಿದೆ ಮೇಲೆ ಕನ್ನಡ ಸಾಹಿತ್ಯ ಭವನದಿಂದ ‘ವೃಂದಾವನ ಧ್ವಂಸ ಮಾಡಿದ ದುಷ್ಕರ್ಮಿಗಳಿಗೆ ಧಿಕ್ಕಾರ ಧಿಕ್ಕಾರ” ‘ವೃಂದಾವನ ಧ್ವಂಸ ಮಾಡಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲೇಬೇಕು’ ಎಂಬ ಘೋಷಣೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಮರವಣಿಗೆಯಲ್ಲಿ ಹೋದ ಪ್ರತಿಭಟಣಾಕಾರರು. ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ವೇದಿಕೆ ಮೇಲೆ ಕೇಶವ ಮಾಹುಲಿ, ಜಯತೀರ್ಥ ಸವದತ್ತಿ, ಆರ್. ಎಸ್. ಜಕಾತಿ, ವ್ಯಾಸಾಚಾರ್ಯ ಅಂಬೇಕರ ಉಪಸ್ಥಿತರಿದ್ದರು. ಪ್ರೊ. ಜಿ. ಕೆ. ಕುಲಕರ್ಣಿಯವರು ನಿರೂಪಿಸಿದರು.

ಪ್ರತಿಭಟನೆಯಲ್ಲಿ ನಗರದ ಸಮಸ್ತ ಭಜನಾ ಮಂಡಳದ ಸದಸ್ಯರು, ಅರವಿಂದ ಹುನಗುಂದ, ಶ್ರೀನಿಧಿ ಆಚಾರ್ಯ ಜಬನಿಸ್, ಎಸ್. ಎನ್. ಶಿವಣಗಿ, ಡಾ. ಶ್ರೀಧರ ಹುಕ್ಕೇರಿ, ಆನಂದ ಗಲಗಲಿ, ಗುರುರಾಜ ಪರ್ವತಿಕರ, ಪೂರ್ಣಬೋಧ ಕಡಗದಕೈ, ಆರ್. ಆರ್. ಕುಲಕರ್ಣಿ, ಶ್ರೀಧರ ಮಿಟ್ಟಿಮನಿ, ಪ್ರಹ್ಲಾದ ದೇಸಾಯಿ ಮುಂತಾದವರು ಪಾಲ್ಗೊಂಡಿದ್ದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button