Kannada NewsKarnataka News

ಶ್ರೀದೇವಿಗೆ ಸಾವಿರಾರು ಸೀರೆ ಉಡಿಸಿ, ಶಿವಲಿಂಗದ ವಿಶೇಷ ಪೂಜೆ

ಪ್ರಗತಿವಾಹಿನಿ ಸುದ್ದಿ, ಉಗರಗೋಳ(ತಾ.ಸವದತ್ತಿ)- ಆದಿಶಕ್ತಿ ಏಳುಕೊಳ್ಳದ ಶ್ರೀರೇಣುಕಾ ಯಲ್ಲಮ್ಮನಗುಡ್ಡಕ್ಕೆ ದೇಶದ ಮೂಲೆ ಮೂಲೆಗಳಿಂದ ವರ್ಷದ ೧೨ ತಿಂಗಳು ಲಕ್ಷಾಂತರ ಭಕ್ತರು ಬಂದು ಶ್ರೀದೇವಿಯ ದರ್ಶನ ಆಶಿರ್ವಾದ ಪಡೆದುಕೊಂಡು ಹೋಗುತ್ತಾರೆ. ಹಾಗೂ ನವರಾತ್ರಿ ಉತ್ಸವದಲ್ಲಿಯೂ ಶ್ರೀದೇವಿಗೆ ಹಾಗೂ ಘಟಸ್ಥಾಪನೆಯ ದೀಪಕ್ಕೆ ಎಣ್ಣೆ ಹಾಕಿ ಹರಕೆ ಹೊತ್ತು ಸಾಗುತ್ತಾರೆ.

ಮಳೆಯ ಅವಾಂತರಕ್ಕೆ ತುತ್ತಾಗಿ ಕಷ್ಟ ಅನುಭವಿಸುತ್ತಿರುವ ಎಲ್ಲ ಜನತೆ ಸುಖ, ಸಂತೋಷ, ರೈತಾಪಿ ವರ್ಗದ ಭೂವಿಯಲ್ಲಿ ಉತ್ತಮ ಫಸಲು ಬರಲಿ ಎಂದು ಎರಡನೆಯ ದಿನದ ನವರಾತ್ರಿ ಉತ್ಸವದ ಘಟ್ಟದಲ್ಲಿ ಶ್ರೀದೇವಿಗೆ ಸಾವಿರಾರು ಸೀರೆ ಉಡಿಸಿ, ಶಿವಲಿಂಗದ ವಿಶೇಷ ಪೂಜೆಯನ್ನು ಮಾಡಲಾಯಿತು ಎಂದು ಶ್ರೀಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಹೇಳಿದರು.

ಭಕ್ತರು ಶ್ರೀಕ್ಷೇತ್ರದ ಪ್ರಾಂಗಣದಲ್ಲಿ ಇಳಿದುಕೊಂಡ ಜಾಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಹಾಗೂ ಭಕ್ತರು ದೇವಸ್ಥಾನದ ಸಿಬ್ಬಂದಿ ನಿಗದಿ ಪಡಿಸಿದ ದೀಪಗಳಲ್ಲಿ ಎಣ್ಣೆ ಹಾಕಿ, ಪ್ರಾಂಗಣದ ಸುತ್ತಲಿನ ದೇವರುಗಳ ಮೇಲೆ ಎಣ್ಣೆ ಹಾಕುವುದು, ಎಲ್ಲೆಂದರಲ್ಲಿ ಕಾಯಿ ಒಡೆದು ಕರ್ಪೂರ ಹಚ್ಚಬಾರದೆಂದು ಭಕ್ತರಲ್ಲಿ ಕೋರಿದರು.

ಜಿ ಎಮ್ ಗಡೇಕಾರ, ಜಿ ಬಿ ಭೋಗಾರ, ಅಲ್ಲಮಪ್ರಭು ಪ್ರಭುನವರ, ಈರಣ್ಣಾ ಕುಲಕರ್ಣಿ, ವಿ ಪಿ ಸೋನ್ನದ, ಅನೀಲರಾಜ, ಗಣಪತಿಗೌಡ ಚನ್ನಪ್ಪಗೌಡ್ರ, ಪಂಡಿತ ಪ ರಾಜಶೇಖರಯ್ಯ, ಹನಮಂತ ಸಂಗಟಿ, ಸಾವಿರಾರು ಭಕ್ತರು ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button