Belagavi NewsBelgaum NewsKannada NewsKarnataka NewsLatest

*ಮಾಧ್ಯಮಗಳು ಟಿಆರ್‌ಪಿ ಜಾಲದಲ್ಲಿ ಕಳೆದು ಹೋಗಿವೆ* *ಬೆದರಿಕೆಗಳು ಪತ್ರಕರ್ತರಿಗೆ ಪ್ರಶಸ್ತಿ ಮತ್ತು ಸನ್ಮಾನ ಪತ್ರವಿದ್ದಂತೆ* *ಪತ್ರಕರ್ತ ಅಜಿತ್ ಹನುಮಕ್ಕನವರ್*

ಮಾಧ್ಯಮಗಳು ಇತ್ತೀಚೆಗೆ ಟಿಆರ್‌ಪಿಯ ಜಾಲದಲ್ಲಿ ಕಳೆದು ಹೋಗಿವೆ. ಟಿಆರ್‌ಪಿ ಕಾರಣದಿಂದ ಮಾಧ್ಯಮಗಳು ಯಾವ ಬಗೆಯ ಕಾರ್ಯಕ್ರಮ ಪ್ರಸಾರ ಮಾಡಬೇಕು ಮತ್ತು ಪ್ರಸಾರ ಮಾಡಬಾರದು ಎಂದು ನಿರ್ಧರಿತವಾಗುತ್ತದೆ. ಕಾರ್ಯಕ್ರಮ ವಿಕ್ಷಣೆ ಕುರಿತಾದ ಜನರ ಬಯಕೆ ಮತ್ತು ಅವರ ವೀಕ್ಷಣೆ ಈ ಎರಡು ಸಂಗತಿಗಳು ವೈರುಧ್ಯದಿಂದ ಕೂಡಿವೆ. ಹಾಗಾಗೀ ವಾಹಿನಿ ಸಂಸ್ಥೆಗಳಿಗೆ ಯಾವ ಬಗೆಯ ಕಾರ್ಯಕ್ರಮ ನಿರ್ಮಾಣ ಮಾಡಬೇಕು ಎಂಬುದು ಟಿಆರ್‌ಪಿಯೆ ಮಾನದಂಡವಾಗಿರುವುದು ಸೋಜಿಗದ ಸಂಗತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಿಂಗಳಿಗೊಮ್ಮೆ ಭ್ರಷ್ಟ ರಾಜಕಾರಣಿ, ದುರಾಡಾಳಿತ ನೀಡುವ ಅಧಿಕಾರಿಗಳು, ಭೂಗತ ಜಗತ್ತಿನಿಂದ ಬೆದರಿಕೆ ಕರೆಗಳು ಬಂದಾಗಲೆ ನಾನು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ಸಮಾಧಾನ ನನಗೆ ಉಂಟಾಗುತ್ತದೆ. ಹಾಗಾಗೀ ಮೇಲಿಂದ ಮೇಲೆ ಎದುರಾಗುವ ಬೆದರಿಕೆಗಳು ಪತ್ರಕರ್ತರಿಗೆ ಪ್ರಶಸ್ತಿ ಮತ್ತು ಸನ್ಮಾನ ಪತ್ರವಿದ್ದಂತೆ ಎಂದು ಸುವರ್ಣ ಸುದ್ದಿ ವಾಹಿನಿಯ ಸಂಪಾದಕ ಅಜಿತ ಹಮನಕ್ಕನವರ ಹೇಳಿದರು.
ಬೆಳಗಾವಿಯ ಪ್ರಬುದ್ಧ ಭಾರತ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದೀನದಯಾಳ ಪೀಠದ ಸಹಯೋಗದಲ್ಲಿ ಕೆಎಲ್‌ಇ ಸೆಂಟನರಿ ಕನವೆನ್ಷನ್ ಸೆಂಟರ್‌ದಲ್ಲಿ ಶುಕ್ರವಾರ ಜರುಗಿದ ಎರಡು ದಿನದ ಏಕಾತ್ಮ ಮಾನವ ದರ್ಶನ ವಿಷಯದ ವಿಚಾರ ಸಂಕಿರಣದಲ್ಲಿ ಅವರು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ವಿಷಯದ ಕುರಿತಾಗಿ ಮಾತನಾಡುತ್ತಾ ಹೇಳಿದರು.
ನಾಯ್ಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಂತೆ ಪತ್ರಿಕಾರಂಗವು ಸಮಾಜದ ಉನ್ನತಿಗೆ ಶ್ರಮಿಸುತ್ತದೆ. ಆದರೆ ಕೆಲ ಬಾರಿ ಶಾಸಕಾಂಗ ಮತ್ತು ಕಾರ್ಯಾಂಗ ತಪ್ಪು ದಾರಿಯಲ್ಲಿ ಸಾಗುತ್ತಿರಬೇಕಾದರೆ ಚುರುಕು ಮುಟ್ಟಿಸುವ ಜವಾಬ್ದಾರಿ ಪತ್ರಿಕಾ ರಂಗದ್ದಾಗಿದೆ. ಸಮಾಜದಲ್ಲಿ ಮಾಧ್ಯಮದ ವರದಿಯಿಂದಾಗುವ ಅವಮಾನ ಮತ್ತು ಅಪಪ್ರಚಾರಕ್ಕೆ ಹೆದರಿ, ಯಾವುದೆ ಜನವಿರೋಧಿ ಮತ್ತು ಅಕ್ರಮಕ್ಕೆ ಅವಕಾಶ ನೀಡದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಮಾಧ್ಯಮದ ಉಪಯುಕ್ತತೆ ಎನ್ನಬಹುದು ಎಂದರು.
ಆದರೆ, ಇತ್ತೀಚೆಗೆ ಕಾರ್ಯಾಂಗ ಮತ್ತು ನಾಯ್ಯಾಂಗ ವ್ಯವಸ್ಥೆಗಳನ್ನು ಭ್ರಷ್ಟರು ಇಂದು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಸಂಗತಿ. ಅವರ ವಿರುದ್ಧ ವರದಿ ಮಾಡಲು ಕೂಡಾ ಸಾಧ್ಯವಾಗುವುದಿಲ್ಲ. ಏಕೆಂದರೆ ಅವರು ನ್ಯಾಯಾಲಯಗಳ ಮೂಲಕ ವರದಿ ಪ್ರಸಾರಕ್ಕೆ ನಿರ್ಬಂಧದ ಮತ್ತು ಕೆವಿಟ್ ಆದೇಶವನ್ನು ಪಡೆದಿರುತ್ತಾರೆ. ನ್ಯಾಯಾಲಯದ ಈ ಬಗೆಯ ಅದೇಶಗಳು ಮಾಧ್ಯಮಗಳು ಕಾರ್ಯನಿರ್ವಹಿಸಲು ದೊಡ್ಡ ತಡೆ ಉಂಟುಮಾಡುತ್ತಿವೆ ಎಂದರು.
ಮಾಧ್ಯಮಗಳು ಇತ್ತೀಚೆಗೆ ಟಿಆರ್‌ಪಿಯ ಜಾಲದಲ್ಲಿ ಕಳೆದು ಹೋಗಿವೆ. ಟಿಆರ್‌ಪಿ ಕಾರಣದಿಂದ ಮಾಧ್ಯಮಗಳು ಯಾವ ಬಗೆಯ ಕಾರ್ಯಕ್ರಮ ಪ್ರಸಾರ ಮಾಡಬೇಕು ಮತ್ತು ಪ್ರಸಾರ ಮಾಡಬಾರದು ಎಂದು ನಿರ್ಧರಿತವಾಗುತ್ತದೆ. ಕಾರ್ಯಕ್ರಮ ವಿಕ್ಷಣೆ ಕುರಿತಾದ ಜನರ ಬಯಕೆ ಮತ್ತು ಅವರ ವೀಕ್ಷಣೆ ಈ ಎರಡು ಸಂಗತಿಗಳು ವೈರುಧ್ಯದಿಂದ ಕೂಡಿವೆ. ಹಾಗಾಗೀ ವಾಹಿನಿ ಸಂಸ್ಥೆಗಳಿಗೆ ಯಾವ ಬಗೆಯ ಕಾರ್ಯಕ್ರಮ ನಿರ್ಮಾಣ ಮಾಡಬೇಕು ಎಂಬುದು ಟಿಆರ್‌ಪಿಯೆ ಮಾನದಂಡವಾಗಿರುವುದು ಸೋಜಿಗದ ಸಂಗತಿ ಎಂದರು.

ಜಸ್ಟಿಸ್ ಅರವಿಂದ ಪಾಶ್ಚಾಪುರೆ ಮಾತನಾಡಿ, ನಾಯ್ಯಾಂಗದಿಂದ ದೊರೆಯುವ ಕೆವಿಟ್ ಆದೇಶ ಬಗ್ಗೆ ಮಾಧ್ಯಮದಲ್ಲಿ ವರದಿ ಮಾಡಲು ಸಾಧ್ಯವಾಗುವುದಿಲ್ಲ. ನ್ಯಾಯಾಂಗದ ಪ್ರಕಾರ ಆರೋಪ ಸಿದ್ಧವಾಗಿ ಅಪರಾಧಿ ಆದಾಗ ಮಾತ್ರ ಕೆವಿಟ್ ಆದೇಶ ಬಿದ್ದು ಹೋಗುವುದು. ನ್ಯಾಯಾಂಗ ವ್ಯವಸ್ಥೆಯು ಕೂಡಾ ಬ್ರಿಟಿಷರ ಕಾಲದಲ್ಲಿನ ಅನೇಕ ಪದ್ಧತಿಗಳನ್ನು ಪರಿಷ್ಕರಣೆಗೆ ಒಳಪಡಿಸಿ, ಭಾರತೀಯ ನ್ಯಾಯ ಪದ್ಧತಿ ಜಾರಿಗೆ ತರುವ ಅವಶ್ಯಕತೆಯಿದೆ ಎಂದರು.


ಜಗದಲ್ಲಿ ಭಾರತದ ಹೆಮ್ಮೆ ವೃದ್ಧಿಸಿದೆ


ಇತ್ತೀಚಿನ ಎರಡು ದಶಕಗಳಲ್ಲಿ ವಿದೇಶದಲ್ಲಿ ಭಾರತದ ಕುರಿತಾದ ದೃಷ್ಟಿಕೋನ ಬದಲಾಗಿದೆ. ಭಾರತ ಮತ್ತು ಭಾರತೀಯರ ಬಗ್ಗೆ ವಿದೇಶಿಗರು ವಿಶ್ವಾಸ ಮತ್ತು ಹೆಮ್ಮೆಯ ಭಾವ ಪ್ರಕಟಗೊಳಿಸುತಿದ್ದಾರೆ ಎಂದು ಇಂಡಿಯನ್ ಫೌಂಡೇಶನ್ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ರಾಮ ಮಾಧವ ಹೇಳಿದರು.
ಏಕಾತ್ಮ ಮಾನವ ದರ್ಶನ ವಿಷಯದ ವಿಚಾರ ಸಂಕಿರಣದಲ್ಲಿ ಅವರು ಭಾರತ ಮತ್ತು ವಿದೇಶಾಂಗ ನೀತಿ ಎಂಬ ವಿಷಯದ ಕುರಿತಾಗಿ ಮಾತನಾಡುತ್ತಾ ಹೇಳಿದರು.
ವಿದೇಶಾಂಗ ನೀತಿ ಎಂಬುದು ಅತ್ಯಂತ ಜಟಿಲ ಕಾರ್ಯವಾಗಿದೆ. ವಿದೇಶಾಂಗ ನೀತಿಯಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ. ಇಲ್ಲಿ ಕೇವಲ ತಮ್ಮ ಆಸಕ್ತಿ ಮತ್ತು ಅದ್ಯತೆ ಅನುಸಾರ ಮಿತ್ರ ಮತ್ತು ಶತ್ರುಗಳಾಗಿ ಪರಿವರ್ತನ ಹೊಂದುತ್ತಾರೆ. ಸ್ವಾತಂತ್ರ್ಯ ನಂತರ ಅಲಿಪ್ತ ನೀತಿಯ ಪರಿಣಾಮ ಭಾರತ ಮೂರನೇ ಪ್ರತ್ಯೇಕ ಬಣದ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಆದರೆ ಇಂದು ಭಾರತವು ಎಲ್ಲ ರಾಷ್ಟ್ರಗಳನ್ನು ಸಮಾನವಾಗಿ ಸ್ನೇಹ ಮತ್ತು ಸಹಕಾರದ ಬಾಂಧವ್ಯವನ್ನು ಹೊಂದಿದೆ. ಇದರ ಪರಿಣಾಮ ಭಾರತದ ಪ್ರಾಬಲ್ಯ ಹೆಚ್ಚಿದೆ ಎಂದರು.
ಭಾರತ ಇಂದು ಎಲ್ಲ ದೇಶಗಳೊಡನೆ ವಿಶ್ವಮಿತ್ರನಾಗಿ ಉತ್ತಮ ಬಾಂಧವ್ಯ ಹೊಂದಿದೆ. ಇಂದು ವಿಶ್ವ ಮಿತ್ರ ಮತ್ತು ಮುಂದಿನ ದಿನಗಳಲ್ಲಿ ವಿಶ್ವ ಗುರುವಾಗಿ ಭಾರತ ಹೊರಹೊಮ್ಮುವುದರಲ್ಲಿ ಯಾವುದೆ ಎರಡು ಮಾತಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಯಜ್ಞನಾರಾಯಣ ಕಮ್ಮಾಜೆ, ಆರ್‌ಸಿಯು ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ, ಪ್ರಬುದ್ಧ ಭಾರತದ ಸಹಸಯೋಂಜಕ ಅಪ್ಪಯ್ಯಾ ರಾಮರಾವ್, ಪ್ರೊ. ಬಿ.ಎಸ್. ನಾವಿ, ಡಾ. ಶಿವಲಿಂಗಯ್ಯಾ ಗೋಠೆ, ಡಾ. ಅನಿಲಕುಮಾರ ಗರಗ್ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button