ಪ್ರಗತಿ ವಾಹಿನಿ ಸುದ್ದಿ, ಯಲ್ಲಾಪುರ:
ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕಳೆದ ಅಕ್ಟೋಬರ್ 2ರಂದು ರಾತ್ರಿ ಕಾರ್ ಅಡ್ಡಗಟ್ಟಿ 2 ಕೋಟಿ ರೂ.ಗೂ ಹೆಚ್ಚು ದರೋಡೆ ಮಾಡಿದ್ದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಾಸರಗೋಡಿನ ಮಹ್ಮದ ಕಬೀರ್ ಮೈನುದ್ದೀನ್ ಹಾಜಿ, ಪಾಲಕ್ಕಾಡ ಜಿಲ್ಲೆಯ ಕೋಜಿಕೋಡಿಯ ಸುಭಾಸ್ ರಾಧಾಕೃಷ್ಣನ್ ಹಾಗೂ ಪಾಲಕ್ಕಾಡ ಜಿಲ್ಲೆಯ ಐಲೂರಿನ ನಿಮೇಶ ವಿಜಯಕೃಷ್ಣನ್ ಬಂಧಿತ ಆರೋಪಿಗಳು.
ಅಕ್ಟೋಬರ್ 2 ರಂದು ಮಧ್ಯರಾತ್ರಿ 1.30 ರ ಹೊತ್ತಿಗೆ ಯಲ್ಲಾಪುರದ ಅರಬೈಲ್ ಗ್ರಾಮದ ಬಳಿ ಕೊಲ್ಲಾಪುರದ ಗಡಗ್ಲಾಂಜ್ ನಿವಾಸಿ ನೀಲೇಶ ಪಾಂಡುರಂಗ ನಾಯ್ಕ ಎಂಬುವವರು ಕಾರಿನಲ್ಲಿ ಸಂಚರಿಸುತ್ತಿರವಾಗ 7-8 ಜನರ ತಂಡವೊಂದು ಎರಡು ಕಾರುಗಳಲ್ಲಿ ಬಂದು, ಕಾರನ್ನು ಅಡ್ಡಗಟ್ಟಿ, ಅವರ ಮೇಲೆ ಹಲ್ಲೆ ಮಾಡಿ ಸ್ವಿಫ್ಟ್ ಕಾರು, 2,11,86,000 ರೂಪಾಯಿ ಹಣ ಹಾಗೂ ಸುಮಾರು 10,000 ರೂಪಾಯಿ ಬೆಲೆ ಬಾಳುವ ಎರಡು ಮೊಬೈಲ್ ಫೆÇೀನಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಕುರಿತು ನೀಲೇಶ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಬೆನ್ನು ಹತ್ತಿದ ಯಲ್ಲಾಪುರ ಪೊಲೀಸರು, ತನಿಖೆ ನಡೆಸಿ ಕೇರಳದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮಹಿಂದ್ರಾ ಮೊರೆಜೋ ಕಾರು, ಮಾರುತಿ ಬ್ರೆಝಾ ಹಾಗೂ ದರೋಡೆ ಮಾಡಿಕೊಂಡು ಹೋದ ಸ್ವೀಪ್ ವಿ.ಡಿ.ಐ ಕಾರ್ ಹಾಗೂ 98.000 ರೂ ಹಣ ಸೇರಿದಂತೆ, ಒಟ್ಟು 19,98,000 ಬೆಲೆಯ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲವು ಆರೋಪಿಗಳು ತಲೆಮರಿಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
30 ಪೊಲೀಸ್ ಇನಸ್ಪೆಕ್ಟರ್ ಗಳ ವರ್ಗಾವಣೆ
https://pragati.taskdun.com/transfer-of-30-police-inspectors/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ