ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾರೂಗೇರಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿ 5 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಶರೀಫ್ ನದಾಫ್, ನಾಗಪ್ಪ ಕಲಾಲ ಹಾಗೂಯಲ್ಲಪ್ಪ ಕಲಾಲ ಬಂಧಿತರು.
ಆರ್. ಆರ್. ಕಂಗನೋಳ್ ಪಿಎಸ್‌ಐ(ತನಿಖೆ) ಹಾರೂಗೇರಿ ಪೊಲೀಸ್ ಠಾಣೆ ಇವರು ಸಿಬ್ಬಂದಿಯೊಂದಿಗೆ ವಿಶೇಷ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದರು. ಹಾರೂಗೇರಿ ಕ್ರಾಸ್‌ದಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಕಾಲಕ್ಕೆ 4 ಗಂಟೆ ಸುಮಾರಿಗೆ 3 ಜನರು ಒಂದು ರಜಿಸ್ಟರ್ ನಂಬರ್ ಇಲ್ಲದ ಪಲ್ಸರ್ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದರು. ಅವರನ್ನು ಹಿಡಿದು ವಿಚಾರಣೆ ಮಾಡಿದಾಗ 3 ಜನರು ಮೋಟಾರ್ ಸೈಕಲ್ ಕಳ್ಳತನ ಮಾಡಿರುವ ಬಗ್ಗೆ ಸಂಶಯ ಬಂದು ಹಾರೂಗೇರಿ ಪೊಲೀಸ್ ಠಾಣೆಗೆ ಬಂದು ಕುಲಂಕುಶವಾಗಿ ವಿಚಾರಣೆ ಮಾಡಲಾಯಿತು.
ಹಾರೂಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 126/2023 ಕಲಂ 379 ಐಪಿಸಿ ನೇದ್ದರಲ್ಲಿ ಕಳ್ಳತನವಾದ ಬಜಾ್ಜ ಪಲ್ಸರ್ ಎನ್‌ಎಸ್-160 ಮೋಟಾರ್ ಸೈಕಲ್ ನಂಬರ: ಕೆಎ-28/ಇಡಬ್ಲ್ಯೂ- 6359. ಹಾಗೂ ಅಪರಾಧ ಸಂಖ್ಯೆ 86/2022 ಕಲಂ 379 ಐಪಿಸಿ ನೇದ್ದರಲ್ಲಿ ಕಳ್ಳತನವಾದ ಹಿರೋ ಸ್ಪೆಂಡರ್ ಪ್ಲಸ್ ಮೋಟರ್ ಸೈಕಲ್, ಅಲ್ಲದೆ ಇನ್ನು 3 ಮೋಟಾರ್ ಸೈಕಲ್ ಗಳು ಹೀಗೆ ಒಟ್ಟು 5 ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡು ಮೋಟಾರ್ ಸೈಕಲ್ ಗಳನ್ನು ತೋರಿಸಿ ಹಾಜರಪಡಿಸುತ್ತೇವೆ ಎಂದು ಹೇಳಿ ತೋರಿಸಿ ಹಾಜರಪಡಿಸಿದರು. ಒಟ್ಟು 1,90,000/- ರೂ ಕಿಮ್ಮತ್ತಿನ 5 ಮೋಟಾರ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಜೀವ ಎಮ್. ಪಾಟೀಲ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ, ಎಮ್. ವೇಣುಗೋಪಾಲ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ, ಶ್ರೀಪಾದ ಜಲ್ಲೆ, ಪೊಲೀಸ್ ಉಪಾಧೀಕ್ಷಕರು ಅಥಣಿ ಉಪ-ವಿಭಾಗ ಅಥಣಿ, ಮತ್ತು ರವಿಚಂದ್ರ, ಡಿ. ಬಿ. ಆರಕ್ಷಕ ವೃತ್ತ ನಿರೀಕ್ಷಕರು ಹಾರೂಗೇರಿ ವೃತ್ತ ರವರ ಮಾರ್ಗದರ್ಶನದಲ್ಲಿ ಹಾರೂಗೇರಿ ಪೊಲೀಸ್ ಠಾಣೆಯ 1] ಜಿ. ಎಸ್. ಉಪ್ಪಾರ, ಪಿಎಸ್‌ಐ(ಕಾ&ಸು) 2] ಆರ್. ಆರ್. ಕಂಗನೋಳ್ಳಿ. ಪಿಎಸ್‌ಐ(ತನಿಖೆ). 3] ಶಿವರಾಜ ನಾಯಕವಾಡಿ, ಪಿಎಸ್‌ಐ ಹೆಚ್ಚುವರಿ, 4] ಕು. ಸಿ. ಡಿ. ಗಂಗಾವತಿ, ಪಿಎಸ್‌ಐ ಹೆಚ್ಚುವರಿ ರವರು ಮತ್ತು ಸಿಬ್ಬಂದಿಯಾದ. ಎಸ್. ಬಿ. ಶಿಂಗೆ, ಎಎಸ್‌ಐ. ಆರ್. ಪಿ. ಕಬೇಕರಿ. ಸಿಎಚ್ ಬ.ನಂ. 1487. ಎ. ಬಿ. ಹೋಸಲಕರ, ಸಿಎಚ್ ಬ.ನಂ. 1015, ಕೆ. ಎಚ್. ಪವಾರ, ಸಿಎಚ್ ಬ.ನಂ. 1031. ಬಿ. ಎಲ್. ಹೋಸಟ್ಟ. ಸಿಪಿಸಿ ಬ.ನಂ. 3138. ಎ. ಎ. ಶಾಂಡಗೆ, ಸಿಪಿಸಿ ಬ.ನಂ. 3052. ಎಚ್. ಆರ್. ಅಂಚಿ, ಸಿಪಿಸಿ ಬ.ನಂ. 2983. ಪಿ. ಎಮ್. ಸಪ್ತಸಾಗರ, ಸಿಪಿಸಿ ಬ.ನಂ. 3702. ಜಿ. ಎನ್. ಕಾಗವಾಡ. ಸಿಪಿಸಿ ಬ.ನಂ. 3240. ಇವರು ಈ ಪತ್ತೆ ಕಾರ್ಯನಿರ್ವಹಿಸಿದ್ದು ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ