Kannada NewsKarnataka NewsLatestPolitics

*ಚರಂಡಿಯಲ್ಲಿ ಕುಡಿಯುವ ನೀರಿನ ಪೈಪು ಅಳವಡಿಕೆ: ಅಧಿಕಾರಿ ಅಮಾನತಿಗೆ ಡಿಸಿಎಂ ಸೂಚನೆ*

ಪ್ರಗತಿವಾಹಿನಿ ಸುದ್ದಿ; ರಾಮನಗರ: ಕನಕಪುರದ ಗೇರಳ್ಳಿಯಲ್ಲಿ ಒಳಚರಂಡಿಯೊಳಗೇ ಕುಡಿಯುವ ಪೈಪು ಅಳವಡಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಮನಗರ ಸಿಇಓ ಅವರಿಗೆ ಆದೇಶ ನೀಡಿದರು.

Home add -Advt

ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಫೋಟೋ ಪ್ರದರ್ಶಿಸಿದ ಡಿ.ಕೆ.ಶಿವಕುಮಾರ್ ಅವರು, ಒಳಚರಂಡಿಯಲ್ಲಿ ಕುಡಿಯುವ ನೀರು ಪೈಪು ಅಳವಡಿಸಿದ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು. ತಕ್ಷಣವೇ ಅಧಿಕಾರಿಗಳ ಅಮಾನತಿಗೆ ಆದೇಶ ನೀಡಿದರು.

ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು, ಕೆಂಪೇಗೌಡ ಸಮಾಧಿ ಸ್ಥಳ ಅಭಿವೃದ್ಧಿ ವರದಿ ಕೇಳಿದ ಡಿಸಿಎಂ

ಸಿದ್ದಗಂಗಾ ಶ್ರೀ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರ, ಆದಿ ಚುಂಚನಗಿರಿ ಶ್ರೀ ಭೈರವೈಕ್ಯ ಡಾ ಬಾಲಗಂಗಾಧರನಾಥ ಸ್ವಾಮೀಜಿ ಜನ್ಮ ಸ್ಥಳ ಬಾನಂದೂರು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಸಮಾಧಿ ಸ್ಥಳ ಕೆಂಪಾಪುರದ ಅಭಿವೃದ್ಧಿ ಕಾಮಗಾರಿ ಪ್ರಗತಿ ಬಗ್ಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸೂಚನೆ ನೀಡಿದರು.

ಸ್ವಾಮೀಜಿಗಳ ಪ್ರತಿಮೆ ನಿರ್ಮಾಣ ಎಲ್ಲಿಗೆ ಬಂತು, ಅವರ ಹುಟ್ಟೂರುಗಳ ಅಭಿವೃದ್ಧಿ ಕೆಲಸ ಏನಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Related Articles

Back to top button