
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಳಮಾರುತಿ ಪೊಲೀಸರಿಂದ ಮಾರಕಾಸ್ತ್ರ ಹೊಂದಿದ ವ್ಯಕ್ತಿಗಳ ಬಂಧನ ಮಾಡಲಾಗಿದ್ದು, ಹರಿತವಾದ ಆಯುಧ ಜಪ್ತಿ ಮಾಡಲಾಗಿದೆ.
ಬೆಳಗಾವಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟಾಬಿಂಗ್ ಪ್ರಕರಣಗಳು ದಾಖಲಾಗುತ್ತಿದ್ದುದ್ದರಿಂದ, ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಂಶಯಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡುತ್ತಿರುವಾಗ ಬೆಳಗಾವಿ ನಗರದ ಕಣಬರಗಿ ಗ್ರಾಮದ ಕ್ರಿಕೇಟ್ ಸ್ಟೇಡಿಯಂ ಹತ್ತಿರ ಆರೋಪಿತರಾದ ಅರುಣ ರಾಮಾ ಹೊರಕೇರಿ (32) ವಿಕ್ರಮ ಕರೆಪ್ಪ ನಾಯಿಕ(28) ರಾಹುಲ ಜ್ಯೋತಿಬಾ ಉಚಗಾಂವಕರ (31) ಎಂಬಾತರು ತಮ್ಮ ಬೈಕ್ ನಲ್ಲಿ ಹರಿತವಾದ ತಲವಾರ ಇಟ್ಟುಕೊಂಡದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲಲ್ಲಿ ರೂ.15,000/- ಮೌಲ್ಯದ ಬೈಕ್ ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸಂ.180/2025 ಕಲಂ.27(1) ಇಂಡಿಯನ್ ಆರ್ಮ ಆಕ್ಷ & ಕಲಂ.97 ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣ. ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿಲಾಗಿದೆ.
ಮೇಲಿನ ಪ್ರಕರಣದಲ್ಲಿ ದಾಳಿಕೈಗೊಂಡ ಪಿಎಸ್‌ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಡಿಸಿಪಿ ಇವರು ಶ್ಲಾಘಿಸಿದ್ದಾರೆ.